
The specimen was collected and sent to ZSI who confirmed that this was the first-ever record of Euthyrrhapha pacifica in India
The specimen was collected and sent to ZSI who confirmed that this was the first-ever record of Euthyrrhapha pacifica in India
ಹೊಸ ವರ್ಷ ಬಂದಾಯಿತು, ಆದರೆ ನಾವಿನ್ನು ೨೦೧೮ರ ವರ್ಷಾಗಮನವನ್ನು ಕಳೆದ ವರ್ಷದಲ್ಲಿ ಪ್ರಾರಂಭಿಸಿದ ಕೆಲವು ಚಟುವಟಿಗೆಗಳನ್ನು ಮೆಲಕು ಹಾಕುತ್ತಿದ್ದೇವೆ. ಅವುಗಳಲ್ಲಿ ಪ್ರಮುಖವಾದುದ್ದು ಪ್ರಾದೇಶಿಕ ಭಾಷೆಗಳಲ್ಲಿ ವೈಜ್ಞಾನಿಕ ಲೇಖನಗಳನ್ನು ಹೊರತರುವುದು. ಪ್ರಾರಂಭಿಕವಾಗಿ ನಾವು ಮೊದಲು ಕನ್ನಡದಲ್ಲಿ ಲೇಖನಗಳನ್ನು ಈಗ ಕಳೆದು ಮೂರು-ನಾಲ್ಕು ವರ್ಷಗಳಿಂದ ಬರೆಯುತ್ತಿದ್ದೇವೆ. ಇದಕ್ಕೆ ನಮಗೆ 'ಪ್ರಜಾವಾಣಿ'ಯಿಂದಲೂ ಬಹಳಷ್ಟು ಪ್ರೋತ್ಸಾಹ ದೊರೆಯಿತು. ಪ್ರತಿ ಸೋಮವಾರ, 'ವಿಜ್ಞಾನ ಲೋಕದಿಂದ' ಎಂಬ ಅಂಕಣದಲ್ಲಿ ನಮ್ಮ ಲೇಖನಗಳು ಮುದ್ರಣವಾಗುತ್ತಿತ್ತು. ಕಳೆದ ವರ್ಷ ನಾವು ಹಿಂದಿ, ಮರಾಠಿ ಮತ್ತು ಅಸ್ಸಾಮೀಸ್ ನಲ್ಲೂ ಲೇಖನಗಳನ್ನು ಪ್ರಕಟಿಸಲು ಪ್ರಾರಂಭಿಸಿದೆವು. ಈ ವರ್ಷ ಇನ್ನಷ್ಟು ಪ್ರಾದೇಶಿಕ ಭಾಷೆಗಳಲ್ಲಿ ಬಹಳಷ್ಟು ಲೇಖನಗಳು, ಪಾಡ್ಕ್ಯಾಸ್ಟ್ಗಳು, ಮತ್ತು ಇತರೆ ರೀತಿಯಲ್ಲಿ ಪ್ರಕಟಿಸಬೇಕೆಂದಿದ್ದೇವೆ. ಇಲ್ಲಿ ಕಳೆದ ವರ್ಷ ಪ್ರಾದೇಶಿಕ ಭಾಷೆಯಲ್ಲಿ ಪ್ರಕಟಿಸಿದ ಕೆಲವು ಆಯ್ದ ಲೇಖನಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇವೆ.
ಒಂದು ಕಾಲದಲ್ಲಿ ಶ್ವೇತವರ್ಣದ ಹಿಮವರ್ಷಗಳಿಂದ ಕಂಗೊಳಿಸುತ್ತಿದ್ದ, ಚಳಿಗಾಲದಲ್ಲಿ ತನ್ನದೆ ಆದ ವೈಶಿಷ್ಟ್ಯತೆಗಳಿಂದ ವಿಶ್ವದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಶಿಮ್ಲಾದ ಪ್ರಖ್ಯಾತ ಪಟ್ಟಣ ಇಂದು ಇತಿಹಾಸದಲ್ಲೇ ಕಂಡು ಕೇಳರಿಯದ ನೀರಿನ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ೨೦೧೫-೧೬ ಅವಧಿಯಲ್ಲಿ ಆವರಿಸಿದ ಬರಗಾಲವು ಮರಾಠಾವಾಡಾದ ರೈತರ ಜೀವನವನ್ನು ಸಂಪೂರ್ಣವಾಗಿ ದಿಕ್ಕೆಟ್ಟಿಸಿತ್ತು. ಇಂತಹ ಅನೇಕ ಸಂದರ್ಭಗಳು, ಸನ್ನಿವೇಶಗಳು, ಭಾರತದಲ್ಲಿ ನದಿಗಳ ಮಹತ್ವ ಏನೆಂಬುದನ್ನು ತೋರಿಸಿಕೊಟ್ಟಿವೆ. ನದಿಗಳು ನಮ್ಮ ದೇಶದೊಂದಿಗೆ ಕೇವಲ ನೈಸರ್ಗಿಕವಾದ ಸಂಬಂಧವನ್ನು ಹೊಂದಿಲ್ಲ; ನಾಡಿನ ಜನರ ನಾಡಿಮಿಡಿತದೊಂದಿಗೆ ಭಾವನಾತ್ಮಕವಾದ ಸಂಬಂಧವನ್ನೂ ಹೊಂದಿವೆ.
ಮನೆಮನೆಗಳಲ್ಲಿ ಮುದ್ದು ನಾಯಿಮರಿಗಳನ್ನು ಸಾಕುವುದು ಇಂದು ನಿನ್ನೆಯಿಂದ ಪ್ರಾರಂಭವಾದದ್ದಲ್ಲ; ಮಾನವ, ಅಲೆಮಾರಿ ಜೀವನಕ್ಕೆ ಬೆನ್ನುಮಾಡಿ, ಒಂದೆಡೆ ವಾಸ್ತವ್ಯ ಹೂಡುವುದನ್ನು ಕಲಿಯುವುದಕ್ಕೆ ಮುನ್ನವೂ, ಅವನೊಂದಿಗೆ ಹೋದಲ್ಲೆಲ್ಲಾ ಹಿಂಬಾಲಿಸಿಕೊಂಡು ಹೋಗುತ್ತಿದ್ದು, ವಾಸ್ತವ್ಯ ಹೂಡುತ್ತಿದ್ದಂತೆ ತಾನೂ ಅಲ್ಲೇ ಮೊಕ್ಕಾಂ ಹೂಡಿದ ಮೊದಲ ಪ್ರಾಣಿಗಳಲ್ಲಿ ನಾಯಿಯೂ ಒಂದು! ಆದರೆ, ಸಾಕುಪ್ರಾಣಿಯಾಗಿರಬೇಕಾದ ನಾಯಿಗಳು ಹಲವಾರು ಕಾರಣಗಳಿಂದ ಬೀದಿಯ ಪಾಲಾಗುತ್ತಿರುವುದು ವಿಪರ್ಯಾಸ ಹಾಗೂ ಹಲವು ಸಮಸ್ಯೆಗಳ ಮೂಲವೂ ಹೌದು.
'ಸೈನ್ಸ್' ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ, ಜೀವವೈವಿಧ್ಯತೆಯ ಒಡಂಬಡಿಕೆಯೇ ಜೀವವೈವಿಧ್ಯತೆಯ ಸಂಶೋಧನೆಗಳ ಮೇಲೆ ಮಿತಿ ಹೇರುವುದನ್ನು ಪ್ರಶ್ನಿಸಿ, ಬೇಲಿಯೇ ಎದ್ದು ಹೊಲ ಮೇದಂತಾಯ್ತು ಎಂದು ಟೀಕಿಸಲಾಗಿದೆ.
ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆಯ (ಐಐಟಿ ಬಾಂಬೆ) ಪ್ರಾಧ್ಯಾಪಕರಾದ ಪ್ರೊ. ಅಮಿತ್ ಅರೋರಾ ಮತ್ತು ಸಂಗಡಿಗರು ದಾಳಿಂಬೆ ಬೀಜದಿಂದ ಎಣ್ಣೆಯನ್ನು ತೆಗೆಯುವ ನವೀನ ವಿಧಾನವನ್ನು ಪ್ರಸ್ಥಾಪಿಸಿದ್ದಾರೆ. ಈ ವಿಧಾನವು ಅತ್ಯoತ ಅಗ್ಗವಾಗಿಯೂ, ತ್ಯಾಜ್ಯ ರಹಿತವಾಗಿಯೂ ಇದ್ದು ಅತೀ ಹೆಚ್ಚು ಗುಣಮಟ್ಟದ ಪ್ರೋಟೀನ್ (ಸಸಾರಜನಕ ಆಹಾರ ಪದಾರ್ಥ) ಮತ್ತು ನಾರಿನ ಅಂಶ ನೀಡಬಲ್ಲದು.
ಹೆನ್ರಿ ಸುವಿಲ್ಲನ್ ಥಾಮಸ್ 1873 ರಲ್ಲಿ ಪ್ರಕಟವಾದ ತಮ್ಮ ‘ಎ ರಾಡ್ ಇನ್ ಇಂಡಿಯಾ’ ಎಂಬ ಪುಸ್ತಕದಲ್ಲಿ ಭಾರತೀಯ ಕ್ರೀಡಾ ಮೀನುಗಾರಿಕೆಯ ಹಲವು ಆಯಾಮಗಳನ್ನು, ಅದರ ತಂತ್ರೋಪಾಯಗಳನ್ನು ಉಲ್ಲೇಖಿಸುತ್ತಾರೆ. ಈ ಪುಸ್ತಕದಲ್ಲಿ ಮೋಜಿನ ಆಟಕ್ಕಾಗಿ ಬಳಸುವ ‘ಗೂನು ಬೆನ್ನಿನ ಮಹಶೀರ್ (ಸಿಹಿ ನೀರಿನ)’ ಮೀನಿನ ಬಗ್ಗೆ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. ಈ ಮೀನು ಸುಮಾರು 1.5 ಮೀಟರ್ ಉದ್ದ ಹಾಗೂ 55 ಕಿಲೊ ಗ್ರಾಮ್ ತೂಕದಷ್ಟು ದೈತ್ಯಾಕಾರವಾಗಿ ಬೆಳೆಯಬಹುದು. ದಕ್ಷಿಣ ಭಾರತದ ದೇಶೀಯ ಮೀನಾಗಿರುವ ಇದು, ಜಗತ್ತಿನ ಎಲ್ಲಾ ಮೀನುಗಾರರಿಗೂ ‘ದೈತ್ಯ, ಕಠಿಣ ಹೋರಾಟ ಮನೋಭಾವದ ಹಾಗೂ ಅತ್ಯಂತ ಪ್ರಮುಖ ಆಟದ ಮೀನು’ ಎಂದೇ ಪರಿಚಿತ. ಆದರೆ ವಿಪರ್ಯಾಸದ ಸಂಗತಿಯೇನು ಗೊತ್ತೇ?
ನಮ್ಮ ಸುತ್ತಮುತ್ತ ಮಧುಮೇಹಿಗಳನ್ನು, ಅದರಲ್ಲೂ, ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳುವ ಮಧುಮೇಹಿಗಳನ್ನು ಕಂಡಿರುತ್ತೇವೆ. ಕ್ರಿಕೆಟಿಗ ವಾಸಿಮ್ ಅಕ್ರಮ್ ಬ್ಯಾಟ್ಸಮನ್ ಅನ್ನು ಬೆದರಿಸುವಷ್ಟು ವೇಗದ ಚೆಂಡು ಎಸೆಯುವ ಬೌಲರ್, ಜೊತೆಗೇ, ಇನ್ಸುಲಿನ್ ಅವಲಂಬಿತ ಮಧುಮೇಹಿ ಕೂಡ.
ಬೆಂಗಳೂರಿನ ರಾಮನ್ ರಿಸರ್ಚ ಇನ್‍ಸ್ಟಿಟ್ಯೂಟ್‍ನ ವಿಜ್ಞಾನಿಗಳು ರಷ್ಯಾ ದೇಶದ, ಮಾಸ್ಕೋದ ಲೆಬೆಡೆವ್ ಫಿಸಿಕಲ್ ಇನ್‍ಸ್ಟಿಟ್ಯೂಟ್‍ನ ವಿಜ್ಞಾನಿಗಳ ಜೊತೆಗೂಡಿ ಈ ರಹಸ್ಯಗಳ ಬುಟ್ಟಿಗೆ ಹೊಸದೊಂದು ವಿಸ್ಮಯಕಾರಿ ದ್ರವ್ಯವನ್ನು ತುಂಬಿದ್ದಾರೆ.
ಮನುಷ್ಯರ ಸಮಾಜದಲ್ಲಿ ಇರುವ ಜಾತಿಭೇದವು ಪ್ರಾಣಿ ಜಗತ್ತಿನಲ್ಲಿ ಇಲ್ಲ ಎಂದರೆ ನಂಬುತ್ತೀರಾ? ಇಲ್ಲಿ ನಾವು ಹೇಳಹೊರಟಿರುವುದು ಪ್ರಭೇದಗಳ ಗಡಿಯ ಆಚೆಗೂ ಗೆಳೆತನ ವಿಸ್ತರಿಸಿಕೊಳ್ಳುವ ಪ್ರಾಣಿಗಳ ಬಗ್ಗೆ. ಜನಪ್ರಿಯ ಅನಿಮೇಟೆಡ್ ಚಿತ್ರ 'ಐಸ್ ಏಜ್'ನಲ್ಲಿ ಪ್ರಾಚೀನ ಶಿಲಾಯುಗದ ಹಿಮಯುಗಕ್ಕೆ ಸಂಬಂಧಿಸಿದ ಕತೆಯಿದೆ; ಈ ಸಿನಿಮಾದ ಪ್ರಮುಖ ಪಾತ್ರಗಳು ಸೋಮಾರಿ ಸಲಗ ಮತ್ತು ಸಂಶಯಾಸ್ಪದ ನಡತೆಯ ಹುಲಿಯದ್ದು; ಇವು ಪೂರಕ ವಾತಾವರಣವಿಲ್ಲದ ಸ್ಥಿತಿಯಲ್ಲಿ ಬದುಕುಳಿಯುವ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಲು, ತಮ್ಮ ಪ್ರಭೇದಗಳ ವ್ಯತ್ಯಾಸಗಳನ್ನು ಮರೆತು, ಒಗ್ಗೂಡಿ, ತಮ್ಮ ಜೀವನಪ್ರಯಾಣದಲ್ಲಿ ಪರಸ್ಪರ ಸಹಾಯ ಮಾಡಿಕೊಳ್ಳುತ್ತವೆ. ವಿಭಿನ್ನ ಜಾತಿಗಳಿಗೆ ಸೇರಿದ ಪ್ರಾಣಿಗಳ ನಡುವಿನ ಸ್ನೇಹದ ಅತ್ಯುತ್ತಮ ಉದಾಹರಣೆಯಿದು.
ಬೆಂಗಳೂರಿನ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನವೊಂದರಲ್ಲಿ, ಬಾನೆಟ್ ಮಕಾಕ್ (ಮಕಾಕಾ ರೇಡಿಯೇಟಾ) ಎಂಬ ದಕ್ಷಿಣ ಭಾರತದ ಸ್ಥಳೀಯ ಜಾತಿಯ ಕೋತಿಯಲ್ಲಿ, ಒಂದು ವಿಶಿಷ್ಟ ನಡವಳಿಕೆಯನ್ನು ಕಂಡಿದ್ದಾರೆ.