ಬರೆದ ದಿನ

ನೀವು ಎಂದಾದರೂ ಬೇಸಿಗೆಯ ಹಗಲಿನಲ್ಲಿ, ಬಿರುಬಿಸಿಲಿನ ಆಕಾಶವನ್ನು ಬರಿಗಣ್ಣಿನಿಂದ ನಿಟ್ಟಿಸಿದ್ದೀರಾ? ಆಕಾಶದಲ್ಲಿ ನಿಮ್ಮ ದೃಷ್ಟಿ ನೆಟ್ಟಿರುವಾಗ, ಏನೋ ಕಣ್ಣಿನ ಮುಂದೆ ತೇಲಿದಂತೆ ಭಾಸವಾಗಿದ್ದು ಗಮನಿಸಿದ್ದೀರಾ? ಹೀಗೆ ಬೆಳಕನ್ನು ನಿಟ್ಟಿಸಿ ನೋಡುವಾಗ ಕಣ್ಣಿನ ದೃಷ್ಟಿ ಕ್ಷೇತ್ರದಲ್ಲಿ ಏನೋ ಈಜಿದಂತೆ ಎನಿಸುತ್ತದೆ ಅಲ್ಲವೇ? ಇವು ಪಾರದರ್ಶಕವಾದ ಹುಳುಗಳೋ ಅಥವಾ ಯಾವುದೋ ಆತ್ಮವೋ ಎಂದು ಸಾಮಾನ್ಯವಾಗಿ ಜನ ಭಾವಿಸುತ್ತಾರಂತೆ. ಅವು ಕಣ್ಣೀರ ಹನಿಗಳೇನೋ ಎಂದು ನೀವು ಅವನ್ನು ಗಮನಿಸಲು ಪ್ರಾರಂಭಿಸಿದಾಗ, ಅವು ಕಣ್ಮರೆಯಾಗಿ, ನೀವು ನಿಮ್ಮ ನೋಟವನ್ನು ಬದಲಾಯಿಸಿದ ತಕ್ಷಣ ಮತ್ತೆ ಕಾಣಿಸಿಕೊಳ್ಳುತ್ತವೆ. ಇವನ್ನು 'ಫ್ಲೋಟರ್ಸ್' ಅಥವಾ ತೇಲುಕಗಳು ಎನ್ನುತ್ತಾರೆ; ವೈಜ್ಞಾನಿಕ ಸಮುದಾಯವು ಇದನ್ನು  'ಮುಸ್ಕೆ ವೋಲಿಟಾಂಟ್ಸ್' ಎನ್ನುತ್ತದೆ; ಲ್ಯಾಟಿನ್ ಭಾಷೆಯಲ್ಲಿ 'ಹಾರಾಡುವ ನೊಣಗಳು' ಎಂದು ಇದರ ಅರ್ಥ.

ಹಾರಾಡುವ  ನೊಣಗಳು ಎಂದು ಕರೆಸಿಕೊಂಡರೂ ಈ ತೇಲುಕಗಳು ನಿಜವಾದ ಕೀಟಗಳಲ್ಲ; ವಾಸ್ತವವಾಗಿ, ಅವು ಯಾವುದೇ ಬಗೆಯ ಬಾಹ್ಯ ವಸ್ತುಗಳೂ ಅಲ್ಲ; ಬದಲಿಗೆ, ಅವು ನಮ್ಮ ಕಣ್ಣಗುಡ್ಡೆಯೊಳಗೆ ಕಂಡುಬರುವ ಕಣಗಳ ನೆರಳುಗಳು ಅಷ್ಟೇ. ಈ ತೇಲುಕಗಳು, ಕಣ್ಣೊಳಗಿನ ಕೆಲಬಗೆಯ ಅಂಗಾಂಶಗಳು, ಕೆಂಪು ರಕ್ತ ಕಣಗಳು ಅಥವಾ ಕೊಲಾಜೆನ್ ಎಂಬ ಪ್ರೋಟೀನ್ ನ ತುಣುಕುಗಳಾಗಿರುತ್ತವೆ. ಕಣ್ಣಗುಡ್ಡೆಯೊಳಗಿನ ಅಕ್ಷಿಪಟಲ ಮತ್ತು ಮಸೂರದ ನಡುವೆ ಕಂಡುಬರುವ ಪಾರದರ್ಶಕ ಬಣ್ಣರಹಿತ ಜೆಲ್ 'ವಿಟ್ರಿಯಸ್ ಹ್ಯುಮರ್'ನ ಒಳಗೆ, ಈ ಕೊಲಾಜೆನ್ ಎಂಬ ಪ್ರೋಟೀನ್ ಇರುತ್ತದೆ.

ಈ ತೇಲುಕಗಳು  'ವಿಟ್ರಿಯಸ್ ಹ್ಯುಮರ್'ನ ಒಳಗೆ ತೇಲುತ್ತಿರುತ್ತವೆ ಮತ್ತು ನಮ್ಮ ಕಣ್ಣಿನ ಚಲನೆಗಳಿಗೆ ಅನುಗುಣವಾಗಿ ಚಲಿಸುತ್ತವೆ. ನಾವು ಒಂದೆಡೆಯಿಂದ ಮತ್ತೊಂದೆಡೆ ನಮ್ಮ ದೃಷ್ಟಿಯನ್ನು ಹೊರಳಿಸಿದಾಗ, ಅವು ತಮ್ಮ ಆಕಾರವನ್ನು ಬದಲಾಯಿಸಿಕೊಳ್ಳುತ್ತಾ ಪುಟಿದು, ಕಾಲಕಾಲಕ್ಕೆ ಗೋಚರಿಸುತ್ತವೆ. ನಾವು ಅವುಗಳ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಲು ಸಾಧ್ಯವಿಲ್ಲ;  ಏಕೆಂದರೆ ಅವು ನಮ್ಮ ಕಣ್ಣಿನ ಚಲನೆಯನ್ನು ಅನುಸರಿಸಿ, ನಾವು ನೋಡುವ ದಿಕ್ಕಿನ ಕಡೆಗೇ ತಿರುಗುತ್ತವೆ.

ಸಾಮಾನ್ಯವಾಗಿ ಎಲ್ಲಾ ಸಮಯದಲ್ಲಿ ಇವನ್ನು ಗುರುತಿಸಲಾಗದು; ಆದರೆ ಅವು ರೆಟಿನಾದ ಹತ್ತಿರದಲ್ಲಿದ್ದಾಗ ಹೆಚ್ಚು ಸುಲಭವಾಗಿ ಗೋಚರಿಸುತ್ತವೆ. ತೇಲುಕಗಳು, ತಮ್ಮ ಹೆಸರಿಗೆ  ವಿರುದ್ಧವಾಗಿ, ಕಣ್ಣುಗುಡ್ಡೆಯ ಕೆಳಭಾಗಕ್ಕೆ ಮುಳುಗುತ್ತವೆ. ಆದ್ದರಿಂದ, ನಾವು ಬೆಳಕಿನ ಆಗರವಾದ ಆಕಾಶವನ್ನು ನೋಡಲು ನಮ್ಮ ತಲೆಯನ್ನು ಮೇಲ್ಮುಖವಾಗಿ ತಿರುಗಿಸಿದಾಗ, ಇವು ಕೆಳಕ್ಕೆ ಚಲಿಸುವಂತೆ ಗೋಚರಿಸುತ್ತದೆ.

ಈ ತೇಲುಕಗಳಿಗೆ ದೊರೆತಿರುವ ಸುಲೀನ ಸ್ಥಾನವು, ಅವು ಕಣ್ಣುಗುಡ್ಡೆಯ ಹಿಂಭಾಗದಲ್ಲಿ ಕೇಂದ್ರೀಕೃತಗೊಳ್ಳಲು ಅನುವು ಮಾಡಿಕೊಡುತ್ತದೆ. ಇದು 'ಹಳದಿ ಬಿಂದು' ಅಥವಾ 'ಮ್ಯಾಕುಲಾ'ದೊಂದಿಗೆ ಸಹಘಟಿಸುತ್ತದೆ; ಈ 'ಹಳದಿ ಬಿಂದುವು' ಹೆಚ್ಚಿನ ಸ್ಪಷ್ಟತೆಯೊಂದಿಗೆ ನಮ್ಮ ಸುತ್ತಲಿನ ವಸ್ತು ವಿಚಾರಗಳನ್ನು ನೋಡಲು ನಮಗೆ ಸಹಕಾರಿ. ಇಂತಹಾ ಹಳದಿ ಬಿಂದುವಿನ ಎದುರಿನಿಂದ ಈ ತೇಲುಕವು ಮತ್ತೊಂದೆಡೆ ಚಲಿಸುವ ತನಕ, ತಾತ್ಕಾಲಿಕವಾಗಿ ದೃಷ್ಟಿಯು ಮಸುಕುಗೊಂಡಂತೆ ಎನಿಸಿ, ನಂತರ ಸ್ಪಷ್ಟಗೊಳ್ಳುತ್ತದೆ. ಹಳದಿ ಬಿಂದುವಿನ ಬಳಿಯೇ ಈ ತೇಲುಕಗಳು ಸುಳಿದಾಡುವುದರಿಂದ, ಸುಲಭವಾಗಿ ಬೆಳಕನ್ನು ಹೀರಿಕೊಂಡು, ವಕ್ರೀಭವನಗೊಳಿಸುತ್ತವೆ.

ಖಾಲಿ ಕಂಪ್ಯೂಟರ್ ಪರದೆಗಳು ಅಥವಾ ಬಿರುಬೆಳಕಿನ ಆಗಸದಂತಹಾ ವಿನ್ಯಾಸವಿಲ್ಲದ ಮತ್ತು ಸಮಾನವಾಗಿ ಬೆಳಕನ್ನುಹೊಮ್ಮಿಸುವ ಯಾವುದೇ ಪರದೆ, ಈ ತೇಲುಕಗಳನ್ನು ವೀಕ್ಷಿಸಲು ಸೂಕ್ತ ಮಾಧ್ಯಮ ಎನಿಸುತ್ತವೆ. ಹರಡಿದ ಬೆಳಕನ್ನು ಹೊರಸೂಸುವ ಟ್ಯೂಬ್ಲೈಟ್ಗಿಂತಾ, ತಲೆಯ ಮೇಲೆ ಹೊಳೆಯುವ ಒಂದು ಪ್ರಖರ ಬಲ್ಬ್, ತೀಕ್ಷ್ಣವಾದ ಮತ್ತು ಹೆಚ್ಚು ವಿಶಿಷ್ಟವಾದ ನೆರಳುಗಳ ರಚನೆಗೆ ಕಾರಣವಾಗುತ್ತದೆ. ಪ್ರಕಾಶಮಾನವಾದ ದಿನಗಳಲ್ಲಿ ಕಣ್ಣು ಮುಚ್ಚಿದಾಗಲೂ ನೆರಳುಗಳ ಮೂಲಕ ತೇಲುಕಗಳನ್ನು ಗೋಚರಿಸುವಂತೆ ಮಾಡಲು, ಕಣ್ಣುರೆಪ್ಪೆಗಳ ಮೇಲೆ ಬೀಳುವ ಬೆಳಕೇ ಸಾಕು ಎಂಬುದನ್ನು ನಾವು ಅನುಭವಿಸಿರುವುದು ಸಾಧ್ಯ.

ಹುಟ್ಟಿನಿಂದಲೇ ನಮ್ಮ ಕಣ್ಣೊಳಗೆ ಇರುವ ತೇಲುಕಗಳು, ನಮ್ಮ ಜೀವಿತಾವಧಿಯ ಉದ್ದಕ್ಕೂ ಕಂಡುಬರುತ್ತವೆ. ಆದರೆ ನಮ್ಮ ಜೀವಿತಾವಧಿಯಲ್ಲಿ ನಡುನಡುವೆ, ಕಣ್ಣುಗುಡ್ಡೆಯ ಸವೆಯುವಿಕೆ ಇನ್ನಿತರ ಕಾರಣಗಳಿಗೆ 'ವಿಟ್ರಿಯಸ್ ಹ್ಯುಮರ್'ನೊಳಗೆ ಒಟ್ಟುಗೂಡುವ ಸತ್ತ ಜೀವಕೊಶಗಳ ರಾಶಿಯು, ತಾವೇ ತೇಲುಕಗಳಂತೆ ವರ್ತಿಸಿದರೂ, ಕ್ರಮೇಣ ಕೆಲವೇ ವಾರಗಳಲ್ಲಿ ಕಣ್ಮರೆಯಾಗುತ್ತವೆ. ಈಗ ಈ ತೇಲುಕಗಳ ಹಿನ್ನೆಲೆ ನಿಮಗೆ ತಿಳಿದಿದೆಯಾದ್ದರಿಂದ, ಮುಂದೆಂದಾದರೂ ನಿಮ್ಮ ದೃಷ್ಟಿ ಕ್ಷೇತ್ರದಲ್ಲಿ ತೇಲುಕಗಳು ಚಲಿಸಿದ್ದು ಕಂಡರೆ, ಹೆದರದೆ ಅದರ ಸೊಗಸನ್ನು ಅನುಭವಿಸಿ. ಏಕೆಂದರೆ; ಅವು, ತಾವು ಅಡಗಿರುವ ಅರೆಘನದ್ರಾವಕ ಜೆಲ್ಲಿಯಲ್ಲಿ ಪುಟಿದು ಆಡುತ್ತಿರುತ್ತವಷ್ಟೇ!

Recent Stories

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...