ಬೆಂಗಳೂರು
ವಿಷವನ್ನು ಉಸಿರಾಡುತ್ತಿದ್ದೇವೆಯೇ? ವಾಯುಮಾಲಿನ್ಯವು ಭಾರತದಲ್ಲಿ ಸಾವಿಗೆ ಪ್ರಮುಖ ಕಾರಣವಾಗಿದೆ-ಅಧ್ಯಯನವೊಂದರ ವರದಿ

ಪ್ರಸ್ತುತ ದಿನಗಳಲ್ಲಿ ಅದೃಶ್ಯವಾಗಿ ಪ್ರಾಣಕ್ಕೆ ಅಪಾಯವನ್ನೊಡ್ಡುತ್ತಿರುವ ವಾಯುಮಾಲಿನ್ಯವು ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಪ್ರಮುಖ ಜಾಗತಿಕ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮವನ್ನು ಬೀರುತ್ತಿದೆ. ವಿಶ್ವದಲ್ಲಿನ 15 ಅತ್ಯಂತ ಕಲುಷಿತ ನಗರಗಳಲ್ಲಿ ಭಾರತವೊಂದೇ 14 ನಗರಗಳನ್ನು ಹೊಂದಿದೆ. ವಾಯುಮಾಲಿನ್ಯದ ಮಟ್ಟ ಮತ್ತು ಅದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ರಾಷ್ಟ್ರವ್ಯಾಪಿ ಎಲ್ಲಾ ರಾಜ್ಯಗಳಲ್ಲಿ ಸಮಗ್ರವಾದ ಅಧ್ಯಯನವನ್ನು ಕೈಗೊಂಡು ಅದಕ್ಕೆ ಪ್ರತಿಯಾಗಿ ಸರಿಯಾದ ಪ್ರತಿಕ್ರಮಗಳನ್ನು ಕೈಗೊಳ್ಳಬೇಕಿರುವುದನ್ನು ಖಚಿತಪಡಿಸಿಕೊಳ್ಳುವ ಅವಶ್ಯಕತೆ ಇದೆ.

ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್” ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು, ಭಾರತದ ವಿವಿಧ ರಾಜ್ಯಗಳಲ್ಲಿ ವಾಯುಮಾಲಿನ್ಯದ ಪರಿಣಾಮದಿಂದ ಉಂಟಾಗುತ್ತಿರುವ ಸಾವುಗಳು, ರೋಗಗಳು ಮತ್ತು ಕಡಿಮೆ ಜೀವಿತಾವಧಿಯ ಕುರಿತು ಸಮಗ್ರ ಚಿತ್ರಣವನ್ನು ಪ್ರಸ್ತುತಪಡಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಭಾರತದ ಪಬ್ಲಿಕ್ ಹೆಲ್ತ್ ಫೌಂಡೇಶನ್ (ಪಿಎಫ್ಐ), ಇನ್ಸ್ಟಿಟ್ಯೂಟ್ ಫಾರ್ ಮೆಟ್ರಿಕ್ಸ್ ಮತ್ತು ಇವಾಲ್ಯೂಷನ್ (ಐಹೆಚ್ಎಮ್ಇ) ರವರು ಆರೋಗ್ಯ ಮತ್ತು ಕುಟುಂಬ ಸಚಿವಾಲಯದ ಸಹಯೋಗದೊಂದಿಗೆ ಭಾರತದಾದ್ಯಂತ ಸುಮಾರು 100 ಸಂಸ್ಥೆಗಳಿಂದ ಹಿರಿಯತಜ್ಞರುಗಳು ಸೇರಿ ದೇಶದ ಪ್ರತೀ ರಾಜ್ಯದಲ್ಲಿ ಅಕಾಲಿಕ ಸಾವುಗಳು ಮತ್ತು ಅನಾರೋಗ್ಯಕ್ಕೆ ಕಾರಣವಾಗುವ ಕಾಯಿಲೆಗಳ ಅಗ್ರಗಣ್ಯ ಮೌಲ್ಯಮಾಪನವನ್ನು (ಇಂಡಿಯನ್ ಸ್ಟೇಟ್-ಲೆವೆಲ್ ಡಿಸೀಸ್ ಬರ್ಡನ್ ಇನಿಶೀಯೇಟಿವ್) ಕುರಿತಂತೆ ಅಧ್ಯಯನವನ್ನು ಕೈಗೊಂಡಿದ್ದಾರೆ. ಈ ಅಧ್ಯಯನಕ್ಕಾಗಿ ಧನಸಹಾಯವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಆರೋಗ್ಯ ಸಂಶೋಧನಾ ಇಲಾಖೆ ಮತ್ತು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಷನ್(ಬಿಎಂಜಿಎಫ್) ಗಳಿಂದ ಪಡೆದುಕೊಂಡಿದೆ.

ಸಂಶೋಧಕರು 2017 ರಲ್ಲಿ ಪ್ರತೀ ರಾಜ್ಯದಲ್ಲಿ ವಾಯು ಮಾಲಿನ್ಯದ ವಿಧಗಳಾದ ಹೊರಾಂಗಣ ಮತ್ತು ಒಳಾಂಗಣ ವಾಯುಮಾಲಿನ್ಯಗಳಿಗೆ ಒಡ್ಡುತ್ತಿರುವುದರಿಂದ ಆರೋಗ್ಯದ ಮೇಲೆ ಅನೇಕ ವಿಧಗಳಲ್ಲಿ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಮತ್ತು ಈ ಎರಡೂ ಸಂದರ್ಭಗಳಲ್ಲಿ ಮಾನವನ ಕೂದಲಿನ ಎಳೆಯ ಶೇಕಡ 3% ರಷ್ಟು ವ್ಯಾಸವನ್ನು ಹೊಂದಿರುವ ಸೂಕ್ಷ್ಮ ಕಣಗಳಿಗೆ (Particulate Matter, PM 2.5) ತೆರೆದುಕೊಳ್ಳುವುದರಿಂದ ಆಗುವ ದುಷ್ಪರಿಣಾಮಗಳನ್ನು ತಮ್ಮ ಅಧ್ಯಯನದಲ್ಲಿ ಅಂದಾಜಿಸಿದ್ದಾರೆ.

ಸಂಶೋಧಕರು ಹೇಳುವಂತೆ ಭಾರತ ದೇಶದ ಜನಸಂಖ್ಯೆಯ ಮುಕ್ಕಾಲು ಪಾಲು ಜನರು, ಹೊರಾಂಗಣ ಗಾಳಿಯ ಗುಣಮಟ್ಟವನ್ನು ಕುರಿತು ಜಾರಿಯಲ್ಲಿರುವ ‘ನ್ಯಾಷನಲ್ ಆಂಬಿಯೆಂಟ್ ಏರ್ ಕ್ವಾಲಿಟಿ ಸ್ಟ್ಯಾಂಡರ್ಡ್ಸ್’ ಮಟ್ಟಗಳಿಗಿಂತ ಹೆಚ್ಚಿನ ಮಿತಿಯ ಸೂಕ್ಷ್ಮ ಕಣಗಳಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. 2017 ರಲ್ಲಿ ವಾಯುಮಾಲಿನ್ಯದಿಂದ ಸರಿಸುಮಾರು 8 ಜನಕ್ಕೆ ಒಬ್ಬರಂತೆ ಒಟ್ಟು 1.24 ಬಿಲಿಯನ್ ಭಾರತೀಯರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಧ್ಯಯನದಲ್ಲಿ ತಿಳಿಸಿರುವಂತೆ ಹೊರಾಂಗಣ ವಾಯುಮಾಲಿನ್ಯದಿಂದ 0.67 ಮಿಲಿಯನ್ ಮಂದಿ ಮತ್ತು ಉಳಿದ 0.48 ಮಿಲಿಯನ್ ಜನರು ಒಳಾಂಗಣ ವಾಯುಮಾಲಿನ್ಯದಿಂದ ಸಾವನಪ್ಪಿದ್ದಾರೆ. ಸುಮಾರು ಶೇಕಡಾ 56 ರಷ್ಟು ಭಾರತೀಯರು ಈಗಲೂ ಬಳಸುವಂತ ಮರದ ತುಂಡುಗಳು, ಸಗಣಿ, ಕೃಷಿ ಅವಶೇಷಗಳು, ಇದ್ದಿಲು ಮತ್ತು ಕಲ್ಲಿದ್ದಲುಗಳು ಒಳಾಂಗಣ ವಾಯುಮಾಲಿನ್ಯದ ಪ್ರಮುಖ ಹಾನಿಕಾರಕ ಅಂಶಗಳಾಗಿವೆ.

ವಾಯುಮಾಲಿನ್ಯದಿಂದ ಬಲಿಪಶುಗಳಾಗಿರುವ ಅರ್ಧಕ್ಕಿಂತ ಹೆಚ್ಚು ಮಂದಿ 70 ವರ್ಷಕ್ಕಿಂತ ಕಡಿಮೆ ವಯಸ್ಸುಳ್ಳವರಾಗಿದ್ದಾರೆ. ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 18 ರನ್ನು ಹೊಂದಿರುವ ಭಾರತವು ವಾಯುಮಾಲಿನ್ಯದ ಕಾರಣದಿಂದ ಶೇಕಡಾ 26 ರಷ್ಟು ಅಕಾಲಿಕ ಸಾವು ಮತ್ತು ಆರೋಗ್ಯದಲ್ಲಿ ವ್ಯತ್ಯಯವನ್ನು ಅನುಭವಿಸಿದೆ ಎಂದು ಅಧ್ಯಯನವು ತಿಳಿಸಿದೆ.

ಶ್ವಾಸಕೋಶದ ಕಾಯಿಲೆಯು ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆಯಂತೆ ಕಂಡುಬಂದರೂ ಸಹ, ವಾಯುಮಾಲಿನ್ಯದ ಕಾರಣದಿಂದ ಶೇಕಡಾ 38 ರಷ್ಟು ರೋಗಗಳು ಹೃದಯ ರಕ್ತನಾಳದ ಕಾಯಿಲೆಗಳು ಮತ್ತು ಮಧುಮೇಹಕ್ಕೆ ಸಂಬಂಧಿಸಿವೆ ಎಂದು ಅಧ್ಯಯನವು ವರದಿ ಮಾಡಿದೆ.

“ಭಾರತದಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಮತ್ತೊಂದು ಗಮನಾರ್ಹ ಅಂಶವೆಂದರೆ, ಧೂಮಪಾನವವು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು, ಪಾರ್ಶ್ವವಾಯು, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (Chronic Obstructive Pulmonary Disease, COPD) ಮತ್ತು ಶ್ವಾಸಕೋಶದ ಕ್ಯಾನ್ಸರ್ ಗಳಿಗೂ ಕಾರಣವಾಗಿದೆ” ಎಂದು ಸಂಶೋಧಕರು ವರದಿ ಮಾಡಿದ್ದಾರೆ.

ವಾಯುಮಾಲಿನ್ಯವು ನಮ್ಮ ಜೀವಿತಾವಧಿಯ ಗಮನಾರ್ಹ ಭಾಗವನ್ನು ತೆಗೆದುಕೊಳ್ಳುತ್ತಿದೆ.

“ನಾವು ಅಂದಾಜಿಸಿದಂತೆ ಭಾರತದಲ್ಲಿ ವಾಯುಮಾಲಿನ್ಯದ ಮಟ್ಟವು ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುವ ಮಟ್ಟಕ್ಕಿಂತ ಕಡಿಮೆ ಇದ್ದಿದ್ದೇ ಆಗಿದ್ದಲ್ಲಿ, ಮಾನವನ ಸರಾಸರಿ ಜೀವಿತಾವಧಿಯು 1.7 ವರ್ಷಗಳಷ್ಟು ಹೆಚ್ಚು ಇರುತ್ತಿತ್ತು ಅಲ್ಲದೇ ಇದು ರಾಜಸ್ಥಾನ, ಉತ್ತರಪ್ರದೇಶ ಮತ್ತು ಹರಿಯಾಣಗಳಲ್ಲಿ 2 ವರ್ಷಗಳಷ್ಟು ಹೆಚ್ಚು ಇರುತ್ತಿತ್ತು” ಎನ್ನುತ್ತಾರೆ ಸಂಶೋಧಕರು.

ವಾಯು ಮಾಲಿನ್ಯವು ಹವಾಮಾನ ಬದಲಾವಣೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಇದಕ್ಕೆ ಒಡ್ಡುವ ತೀವ್ರತೆ ಮತ್ತು ಅದರ ಪರಿಣಾಮಗಳು ವಿವಿಧ ರಾಜ್ಯಗಳಲ್ಲಿ ಬದಲಾಗುತ್ತದೆ. ಉತ್ತರಪ್ರದೇಶ ಬಿಹಾರ, ದೆಹಲಿ ಮತ್ತು ಹರಿಯಾಣಗಳು ಹೆಚ್ಚಿನ ಮಟ್ಟದ ಮಾಲಿನ್ಯಕಾರಕ ಸೂಕ್ಷ್ಮ ಕಣಗಳನ್ನು (Particulate Matters) ಹೊಂದಿದ್ದು, ದೆಹಲಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿವೆ. ಉತ್ತಮ ಗಾಳಿಯ ಗುಣಮಟ್ಟವು ಎಲ್ಲರಿಗೂ ಸಿಗುವಂತೆ ಮಾಡಲು, ‘ಶುದ್ಧ ಮತ್ತು ಆರೋಗ್ಯಕರ' ನೀತಿಗಳನ್ನು ಆಯ್ಕೆಮಾಡಲು, ಕಾರ್ಯಗತಗೊಳಿಸಲು, ರಾಜ್ಯ ಮಟ್ಟದಲ್ಲಿನ ಮಾಹಿತಿಯು ನಿರ್ಧಿಷ್ಟ ಪ್ರದೇಶಕ್ಕೆ ಪರಿಹಾರೋಪಾಯಗಳನ್ನು ವಿನ್ಯಾಸಗೊಳಿಸುವಲ್ಲಿ ಸಹಾಯವಾಗಬಹುದು ಎಂದು ಸಂಶೋಧಕರು ಭಾವಿಸುತ್ತಾರೆ.

“ಎಲ್ಲಾ ರಾಜ್ಯಗಳಲ್ಲೂ ವಾಯುಮಾಲಿನ್ಯದ ಮಟ್ಟವನ್ನು ಕಡಿಮೆಗೊಳಿಸಿ ವಾತಾವರಣದಲ್ಲಿನ ಅಪಾಯಕಾರಿ ಮಲಿನಕಾರಕಗಳನ್ನು ತಗ್ಗಿಸಲು ಮತ್ತು ತಪ್ಪಿಸಬಹುದಾದ ಸಾವುಗಳು ಹಾಗೂ ರೋಗಗಳನ್ನು ತಡೆಗಟ್ಟಲು ತ್ವರಿತವಾಗಿ ಪರಿಣಾಮಕಾರಿ ಕಾರ್ಯನೀತಿಗಳನ್ನು ಅನುಸರಿಸಿ ಭಾರತದಾದ್ಯಂತ ನಿಯೋಜಿಸುವುದರ ಮೇಲೆ ಅವಲಂಬಿತವಾಗಿದೆ”, ಎಂದು ಲೇಖಕರು ಅಧ್ಯಯನವನ್ನು ಮುಕ್ತಾಯಗೊಳಿಸುತ್ತಾರೆ.

Kannada

Recent Stories

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...