ಹೊಸ ದೆಹಲಿ
ರಸ್ತೆಬದಿಯ ಕೆಸರುಗುಂಡಿಯಲ್ಲಿ ಪತ್ತೆಯಾದ ರಹಸ್ಯ ಜೀವನಶೈಲಿಯ ಕಪ್ಪೆ!

ಪಶ್ಚಿಮಘಟ್ಟಗಳ ಕಾಡುಗಳು ಭಾರತದ ಜೀವವೈವಿಧ್ಯದ ಹಾಟ್ಸ್ಪಾಟ್ ಎಂದೇ ಹೆಸರುವಾಸಿ. ಇತ್ತೀಚಿನ ವರ್ಷಗಳಲ್ಲಿ, ಈ ಸಮೃದ್ಧ ಪರಿಸರ ವ್ಯವಸ್ಥೆಗಳಲ್ಲಿ ವಾಸಿಸುವ ಹಲವು ಹೊಸ ಜಾತಿಯ ಉಭಯವಾಸಿಗಳು ಮತ್ತು ಸರೀಸೃಪಗಳು ಪತ್ತೆಯಾಗಿವೆ. ಆದರೆ, ಈ ಬಾರಿ, ಉಭಯಚರಗಳ ಬಗ್ಗೆ ಅಧ್ಯಯನ ನಡೆಸುವ ದೆಹಲಿಯ ವಿಶ್ವವಿದ್ಯಾನಿಲಯದ ಸಂಶೋಧಕರು, ರಸ್ತೆಬದಿಯ ಕೆಸರುಗುಂಡಿಯಂತಹ ಸರಳವಾದ ಸ್ಥಳದಲ್ಲಿ ಅಡಗಿದ್ದ ಹೊಸ ಜಾತಿಯ ಕಪ್ಪೆಯನ್ನು ಕಂಡುಹಿಡಿದಿದ್ದಾರೆ! ಭಾರತ ಸರ್ಕಾರದ ‘ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ’ಯ ಕ್ರಿಟಿಕಲ್ ಇಕೋಸಿಸ್ಟಮ್ ಪಾರ್ಟ್ನರ್ಶಿಪ್ ಫಂಡ್ನಿಂದ ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ಅನುದಾನ ಪಡೆದ ತಮ್ಮ ಈ ಸಂಶೋಧನೆಯನ್ನು ‘ಸೈಂಟಿಫಿಕ್ ರಿಪೋರ್ಟ್ಸ್’ ಜರ್ನಲ್ನಲ್ಲಿ ಅವರು ವಿವರಿಸಿದ್ದಾರೆ.

ಈ ಹೊಸ ಪ್ರಭೇದವು ಕಿರಿ-ಮೂತಿ ಕಪ್ಪೆಗಳ (ಮೈಕ್ರೋಹೈಲಿಡೆ) ಕುಟುಂಬಕ್ಕೆ ಸೇರಿದ್ದು, ‘ಮಿಸ್ಟಿಸೆಲ್ಲಸ್’ ಎಂಬ ಹೊಚ್ಚ ಹೊಸ ಕುಲದ ಭಾಗವೆಂದು ಕಂಡುಬಂದಿದೆ. ಈ ಪ್ರಭೇದದ ರಹಸ್ಯಮಯ ಜೀವನಶೈಲಿಯ ಕಾರಣದಿಂದಾಗಿ, 'ನಿಗೂಢ' ಎಂಬ ಅರ್ಥವಿರುವ ಲ್ಯಾಟಿನ್ ಪದ ‘ಮಿಸ್ಟಿಕಸ್’ ಎಂಬ ಪದದ ಆಧಾರದ ಮೇಲೆ ‘ಮಿಸ್ಟಿಸೆಲ್ಲಸ್’ಎಂದು ನಾಮಕರಣ ಮಾಡಲಾಗಿದೆ. ಈ ಹೆಸರಿನ ಭಾಗವಾದ ‘ಎಲ್ಲಸ್’ ಎಂಬ ಪದವು, ಕೇವಲ 2.3-2.9 ಸೆಂಟಿಮೀಟರ್ನಷ್ಟು ಉದ್ದವಿರುವ ಈ ಕಪ್ಪೆಗಳ ಸಣ್ಣ ಗಾತ್ರವನ್ನು ಸೂಚಿಸುತ್ತದೆ. ಭಾರತೀಯ ಉಭಯಚರಗಳ ಅಧ್ಯಯನಕ್ಕೆ ಬ್ರಸೆಲ್ಸ್ನ ವ್ರಿಜೆ ವಿಶ್ವವಿದ್ಯಾಲಯ ವಿಕಸನೀಯ ಜೀವಶಾಸ್ತ್ರಜ್ಞ ಪ್ರೊಫೆಸರ್ ಫ್ರಾಂಕಿ ಬೊಸ್ಸೌಟ್ ನೀಡಿದ ಅಪಾರ ಕೊಡುಗೆಗಳ ಗೌರವಾರ್ಥವಾಗಿ, ಈ ಕಪ್ಪೆಗೆ ‘ಮಿಸ್ಟಿಸೆಲ್ಲಸ್ ಫ್ರಾಂಕಿ’ ಎಂದು ಹೆಸರಿಟ್ಟಿದ್ದಾರೆ.

ಈ ಕಪ್ಪೆಯ ಅಧ್ಯಯನದ ಭಾಗವಾಗಿ ಸುಸಂಘಟಿತ ವರ್ಗೀಕರಣ ವಿಧಾನವನ್ನು ಸಂಶೋಧಕರು ಬಳಸಿದರು; ಈ ಜಾತಿಯ ರೂಪವಿಜ್ಞಾನ, ಕರೆ ಮಾದರಿ, ಟ್ಯಾಡ್ಪೋಲ್ಗಳು ಮತ್ತು ಡಿ.ಎನ್.ಎ ಅಧ್ಯಯನ ಮಾಡಿ, ಇದು ಹೊಸ ಪ್ರಭೇದವೇ ಎಂದು ಖಚಿತಪಡಿಸಿಕೊಂಡರು. ಕೇರಳದ ವಯನಾಡ್ ಜಿಲ್ಲೆಯ ಕೇವಲ ಒಂದು ಪ್ರದೇಶದಲ್ಲಿ ಮಾತ್ರ ಈ ಕಪ್ಪೆ ಕಂಡುಬಂದಿದೆ. "ಸಮೀಪದ ಪ್ರದೇಶಗಳಲ್ಲಿ ನಡೆಸಲಾದ ವ್ಯಾಪಕ ಸಮೀಕ್ಷೆಗಳ ಹೊರತಾಗಿಯೂ, ಬೇರೆ ಯಾವುದೇ ಪ್ರದೇಶದಲ್ಲೂ ಇವು ಕಂಡುಬಂದಿಲ್ಲ" ಎನ್ನುತ್ತಾರೆ ಸಂಶೋಧಕರು.

"ನಾವು ಪತ್ತೆಮಾಡಿದ ಈ ಹೊಸ ಪ್ರಭೇದವು, ಪಶ್ಚಿಮಘಟ್ಟಗಳಲ್ಲಿ ಈಗಾಗಲೇ ಹೆಚ್ಚು ಪರಿಶೋಧಿಸಿದ ಮತ್ತು ಸಂಶೋಧನೆ ನಡೆಸಿದ ಪ್ರದೇಶಗಳಿಂದಲೇ ಕಂಡುಬಂದಿದೆ. ಜಾಗತಿಕವಾಗಿ ಗುರುತಿಸಲ್ಪಟ್ಟ ಈ ಜೀವವೈವಿಧ್ಯದ ಆಗರದಲ್ಲಿ ಉಭಯಚರಗಳ ದಾಖಲೆಯು ಇನ್ನೂ ಪೂರ್ಣವಾಗಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಈ ಕಪ್ಪೆ ಇಂದಿನವರೆಗೂ ಪತ್ತೆಯಾಗದ್ದಕ್ಕೆ ಕಾರಣ, ಅದರ ರಹಸ್ಯಮಯ ಜೀವನಶೈಲಿ; ಈ ಕಪ್ಪೆಯು ಕೇವಲ ನಾಲ್ಕು ದಿನಗಳ ಕಾಲ ಹೊರಬಂದು ತನ್ನ ಸಂತಾನೋತ್ಪತ್ತಕ ಚಟುವಟಿಕೆ ನಡೆಸುತ್ತದೆ ಮತ್ತು ನಂತರ ತನ್ನ ರಹಸ್ಯ ಜೀವನಶೈಲಿಗೆ ಹಿಂದಿರುಗುತ್ತದೆ" ಎನ್ನುತ್ತಾರೆ ಈ ಅಧ್ಯಯನದ ಮುಖ್ಯ ಲೇಖಕಿ ಸೋನಾಲಿ ಗರ್ಗ್. 3 ವರ್ಷಗಳಷ್ಟು ಕ್ಷೇತ್ರೀಯ ಮತ್ತು ಲ್ಯಾಬ್ ಅಧ್ಯಯನಗಳನ್ನು ಬೇಡಿದ ಈ ಸಂಶೋಧನೆಯು ಪ್ರಾರಂಭವಾಗಿದ್ದು, ವಿಚಿತ್ರವಾಗಿ ಕಾಣುವ ಟ್ಯಾಡ್ಪೋಲ್ಗಳನ್ನು ಸೋನಾಲಿಯವರು ಪತ್ತೆಹಚ್ಚಿದಾಗ. ಎರಡು ವರ್ಷಗಳ ವ್ಯಾಪಕವಾದ ಹುಡುಕಾಟದ ನಂತರ, ಮಳೆಗಾಲದ ಅವಧಿಯಲ್ಲಿ, ಈ ಪ್ರಭೇದದ 200 ವಯಸ್ಕ ಕಪ್ಪೆಗಳ ದೊಡ್ಡ ಸಮೂಹವನ್ನು, ತಾತ್ಕಾಲಿಕ ಕೆಸರು ಗುಂಡಿಗಳು ಮತ್ತು ಹುಲ್ಲುಗಳಲ್ಲಿ ಕಂಡರು. ಈ ಜಾತಿಯ ಪುರುಷಕಪ್ಪೆಗಳು ಹೆಣ್ಣುಕಪ್ಪೆಗಳನ್ನು ಆಕರ್ಷಿಸಲು, ಕೀಟಗಳಂತೆ ಕರೆ ಹೊರಡಿಸುವ ಮೂಲಕ  4 ದಿನಗಳು ಸಂತಾನೋತ್ಪತ್ತಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದವು; ನಂತರ ಅವೆಲ್ಲಾ ಕಪ್ಪೆಗಳೂ ಕಣ್ಮರೆಯಾದವು. ತಮ್ಮ ಈ ರಹಸ್ಯ ನಡವಳಿಕೆಯಿಂದಾಗಿಯೇ, ಈ ಅಪರೂಪದ ಕಪ್ಪೆಯ ಸಾಮಾನ್ಯ ಹೆಸರು ‘ನಿಗೂಢ ಕಿರಿ ಮೂತಿ ಕಪ್ಪೆ’ ಎಂದಾಗಿರಬೇಕು ಎನ್ನುತ್ತಾರೆ ಸಂಶೋಧಕರು.

ಈ ಹೊಸ ಜಾತಿಯ ಒಂದು ಆಸಕ್ತಿದಾಯಕ ಲಕ್ಷಣವೆಂದರೆ, ಅವುಗಳ ಬೆನ್ನ ಮೇಲೆ ಇರುವ ಎರಡು ಹುಸಿ ಕಣ್ಣಿನಂತಹ ಗುರುತು. ಈ ಕಪ್ಪೆಗಳು ಕರೆ ಹೊರಡಿಸುವಾಗ ಮತ್ತು ಅಪಾಯ ಎದುರಾದ ಸಂದರ್ಭದಲ್ಲಿ ತಮ್ಮ  ಬೆನ್ನನ್ನು ಎತ್ತರಿಸಿ ಈ ಗುರುತುಗಳನ್ನು ಪ್ರದರ್ಶಿಸಿದವು. ಪರಭಕ್ಷಕಗಳ ವಿರುದ್ಧ ರಕ್ಷಣಾ ಕಾರ್ಯವಿಧಾನವಾಗಿ ಇದನ್ನು ಬಳಸಿಕೊಳ್ಳುತ್ತವೆ ಎಂಬುದನ್ನು ಇದು ಸೂಚಿಸುತ್ತದೆ.

ಈ ಹೊಸ ಕುಲ ಮತ್ತು ಪ್ರಭೇದದ ಹತ್ತಿರದ ಸಂಬಂಧಿಗಳಾದ ‘ಮೈಕ್ರಿಲೆಟ್ಟಾ’ (ಮೈಕ್ರಿಲೆಟ್ಟಾ ಇನ್ನೊರ್ನಾಟಾ, ಮೈಕ್ರಿಲೆಟ್ಟಾ ಎರಿಥ್ರೋಪೊಡಾ ಮತ್ತು ಮೈಕ್ರಿಲೆಟ್ಟಾ ಸ್ಟೈನೆಗೇರಿ) ಕುಲದ ಸದಸ್ಯರು, ಈ ಕಪ್ಪೆಗಳಿಂದ ಸುಮಾರು 2000 ಕಿಲೋಮೀಟರ್ ದೂರದಲ್ಲಿ ಆಗ್ನೇಯ ಏಷ್ಯಾದಲ್ಲಿ ಕಂಡುಬಂದಿವೆ. ಈ ಆವಿಷ್ಕಾರವು, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಕಪ್ಪೆಗಳ ಬಗೆಗಿನ ನಮ್ಮ ಗ್ರಹಿಕೆಗೆ ಹೊಸ ಆಯಾಮಗಳನ್ನು ನೀಡುತ್ತಾ, ಈ ಕಪ್ಪೆಯು 40 ದಶಲಕ್ಷ ವರ್ಷಗಳ ಹಿಂದೆ ಈಯೋಸೀನ್ ಯುಗದಲ್ಲಿ ತನ್ನ ಆಗ್ನೇಯ ಏಷ್ಯಾದ ಸಂಬಂಧಿಕರಿಂದ ಬೇರೆಯಾಗಿ ವಿಕಸನ ಹೊಂದುತ್ತಾ ಇಂದಿನ ರೂಪ ಪಡೆದಿದೆ ಎಂಬುದಕ್ಕೆ ಸಾಕ್ಷೀಭೂತವಾಗಿದೆ. ಈಯೋಸೀನ್ ಯುಗವು ಪೇಲಿಯೋಜೀನ್ ಕಾಲದ ಭಾಗವಾಗಿತ್ತು ಮತ್ತು 55.8 ರಿಂದ 33.9 ದಶಲಕ್ಷ ವರ್ಷಗಳ ಹಿಂದೆ ಅಸ್ತಿತ್ವದಲ್ಲಿತ್ತು. ಭಾರತವು ಯೂರೇಷಿಯಾದ ಭಾಗವಾಗುವ ಮುನ್ನ, ಭಾರತ ಮತ್ತು ಆಗ್ನೇಯ ಏಷ್ಯಾದ ಪ್ರದೇಶಗಳ ನಡುವೆ ಇತ್ತೆನ್ನಲಾಗಿದ್ದ ಭೂಗರ್ಭ ಮೂಲದ ಸಂಬಂಧಕ್ಕೆ, ಜೈವಿಕ ಭೂಗೋಳಿಕ ಸಾಕ್ಷ್ಯವನ್ನು ಒದಗಿಸಿತು.

ಈ ಹೊಸ ಸಂಶೋಧನೆಯು, ಭಾರತದ ಉಭಯಚರ ಪ್ರಭೇದಗಳ ಬೆಳೆಯುತ್ತಿರುವ ಯಾದಿಯನ್ನು ಮತ್ತಷ್ಟು ಉದ್ದವಾಗಿಸುವುದಲ್ಲದೇ, ಪೇಲಿಯೋಜೀನ್ ಅವಧಿಯಲ್ಲಿ ಭಾರತ ಮತ್ತು ಆಗ್ನೇಯ ಏಷ್ಯಾಗಳ ನಡುವಿನ ಜೈವಿಕ ವಿನಿಮಯದ ಕುರಿತು ನಮ್ಮ ತಿಳುವಳಿಕೆಯನ್ನು ವಿಸ್ತರಿಸಲೂ ಸಹಾಯ ಮಾಡುತ್ತದೆ. ಮಾನವ ನೆಲೆಗಳಿಗೆ ಸಮೀಪದಲ್ಲಿದ್ದೂ ಈ ಪ್ರಭೇದವು ಇಷ್ಟು ವರ್ಷಗಳಿಂದಲೂ ವಿಜ್ಞಾನಕ್ಕೆ ಅಜ್ಞಾತವಾಗಿಯೇ ಉಳಿದಿದೆ ಎಂಬ ಅಂಶವು, ಈ ಕಪ್ಪೆಗಳು ಎದುರಿಸುತ್ತಿರಬಹುದಾದ ಬೆದರಿಕೆಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಅಧ್ಯಯನಗಳನ್ನು ಕೈಗೊಳ್ಳಬೇಕಾದ ತುರ್ತು ಅವಶ್ಯಕತೆ ಇದೆ ಎಂಬುದನ್ನು ಸಾರುತ್ತದೆ.

Kannada

Recent Stories

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...