ಬೆಂಗಳೂರು
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಬಹು ರಾಷ್ಟ್ರೀಯ ವಿಜ್ಞಾನಿಗಳು ಇದನ್ನು ವಿಸ್ತೃತವಾಗಿ ವಿಶ್ಲೇಷಿಸಿ ಇದರ ಬಗ್ಗೆ ಸೈನ್ಸ್ ಎಂಬ ಪ್ರತಿಷ್ಠಿತ ನಿಯತಕಾಲಿಕೆಯಲ್ಲಿ ಇತ್ತೀಚಿನ (ಜೂನ್ ೯) ಸಂಚಿಕೆಯಲ್ಲಿ ವಿವರವಾದ ಲೇಖನವನ್ನು ಪ್ರಕಟಿಸಿದ್ದಾರೆ. ಇದನ್ನು ವಿಶ್ಲೇಷಿಸಲು ಕಾಸ್ಮಿಕ್ ಕೆಮಿಸ್ಸ್ಟ್ರಿ (ರಸಾಯನ ಶಾಸ್ತ್ರ) ಬಳಸಿದ್ದಾರೆ.

2018 ರಲ್ಲಿ ಕ್ಷುದ್ರಗ್ರಹವನ್ನು ತಲುಪಿದಾಗ, ಅದರ ಮೇಲ್ಮೈಯಲ್ಲಿ ಎರಡು ರೋವರ್‌ಗಳನ್ನು ಇಳಿಸಲಾಗಿತ್ತು. ಈ ರೋವರ್ ಗಳು ಕ್ಷುದ್ರಗ್ರಹದ ಮೇಲೆ ಓಡಾಡುವುದರ ಜೊತೆ  ಸುಮಾರು ಹದಿನೈದು ಮೀಟರ್ ನಷ್ಟು ಎತ್ತರ ಜಿಗಿಯುವ ಸಾಮರ್ಥ್ಯ ಹೊಂದಿತ್ತು. ಈ ರೋವರ್ ಗಳಿಗೆ ಎರಡು ಕ್ಯಾಮೆರಾ ಅಳವಡಿಸಿತ್ತು ಮತ್ತು ಹಲವಾರು ಸೆನ್ಸಾರ್ (ಸಂವೇದಕ) ಗಳನ್ನು ಅಳವಡಿಸಿತ್ತು. ಹಾಗಾಗಿ ಇದರ ಮೇಲಿನ ತಾಪಮಾನ ಮತ್ತು ಇನ್ನಿತರೇ ಮಾಹಿತಿಯನ್ನು ಪಡೆಯಲು ಸಾಧ್ಯವಾಯಿತು.

ಅದಲ್ಲದೆ ಈ ಕ್ಷುದ್ರಗ್ರಹದ ಮೇಲ್ಮೈ ವಸ್ತುಗಳನ್ನು ಮಾತ್ರವಲ್ಲದೆ ಅದರ ಮೇಲಿದ್ದ ಕೆಲವು ಕಲ್ಲು-ಬಂಡೆಗಳ ಒಳಗಿನ ವಸ್ತುಗಳನ್ನು ಸಂಗ್ರಹಿಸುವ ಸಲುವಾಗಿ ಕೊನೆಗೆ ಮೂರನೇ ವಾಹಕವಾದ ಒಂದು ಲ್ಯಾಂಡರ್ ಕೂಡ ಅದರ ಮೇಲೆ ಇಳಿಸಲಾಗಿತ್ತು. ಇದರಿಂದ ಸ್ವಲ್ಪ ಪ್ರಮಾಣದಲ್ಲಿ ಮೇಲ್ಮೈಯ ಮೇಲೆ ಸಣ್ಣ ಪೆಲ್ಲೆಟ್ ಗಳನ್ನು ಹಾರಿಸಿಲಾಗಿತ್ತು. ಪೆಲ್ಲೆಟ್ ಗಳ ಅಪ್ಪಳಿಕೆಯಿಂದ ಛಿದ್ರಗೊಂಡ ಮಣ್ಣು ಮತ್ತು ಬಂಡೆಯ ತುಣುಕನ್ನು ಸಂಗ್ರಹಿಸಲಾಗಿತ್ತು.  

ಹಯಾಬುಸಾ 2 ಆರು ವರ್ಷಗಳ ಯಾನ ಮಾಡಿ ಮತ್ತು ಸುಮಾರು ಐನೂರು ಕೋಟಿ (ಐದು ಬಿಲಿಯನ್) ಕಿಲೋಮೀಟರ್ ಸಂಚರಿಸಿತ್ತು. ಡಿಸೆಂಬರ್ 2020 ರಲ್ಲಿ ಭೂಮಿಗೆ ಮರಳಿದಾಗ ದಕ್ಷಿಣ ಆಸ್ಟ್ರೇಲಿಯಾದ ವೂಮೆರಾ ಎಂಬ ಪ್ರದೇಶದಲ್ಲಿ ಸಂಗ್ರಹಿಸಿದ್ದ ವಸ್ತುಗಳ ಒಂದು ಕ್ಯಾಪ್ಸುಲ್ ಅನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿತ್ತು.

ಅಂದಹಾಗೆ ಹಯಾಬುಸಾ 2 ಸಂಗ್ರಹಿಸಿದ ವಸ್ತುವಿನ ಪ್ರಮಾಣ ಐದು ಗ್ರಾಂ ಮಾತ್ರ! ಕೇವಲ ಐದೇ ಗ್ರಾಂ ಅಷ್ಟೆಯೇ ಎನ್ನ ಬಹುದು ಆದರೆ ಇದು  ಜಪಾನಿನ ಬಾಹ್ಯಾಕಾಶ ಸಂಸ್ಥೆ ನಿರೀಕ್ಷಿಸಿದ ಮಟ್ಟಕ್ಕಿಂತ ಹೆಚ್ಚು ಮತ್ತು ಸದ್ಯಕ್ಕೆ ಅಧ್ಯಯನ ನಡೆಸಲು ಸಾಕಷ್ಟು ಎಂದು ಬಲ್ಲ ವಿಜ್ಞಾನಿಗಳು ಸೂಚಿಸುತ್ತಾರೆ.

ಹಯಾಬುಸಾ 2 ಭೂಮಿಗೆ ಹಿಂತಿರುಗಿದ ನಂತರ ಸಂಗ್ರಹಿಸಿದ ವಸ್ತುವನ್ನು ವಿಜ್ಞಾನಿಗಳು ಬಹಳ ಕೌತುಕದಿಂದ ಅಧ್ಯಯನ ನಡೆಸಿದ್ದಾರೆ.

ಇದರಿಂದ ರುಯ್ಗು ಕ್ಷುದ್ರಗ್ರಹವು ಸುಮಾರು 4.5 ಶತಕೋಟಿ (ಬಿಲಿಯನ್) ವರ್ಷಗಳ ಹಿಂದೆ ಸೌರವ್ಯೂಹವು ಹುಟ್ಟಿದಾಗ ರೂಪುಗೊಂಡ ಕ್ಷುದ್ರಗ್ರಹವೆಂದು ತಿಳಿದುಬಂದಿದೆ. ಇದಲ್ಲದೇ ಈ ವಸ್ತುವು ಇಲ್ಲಿಯವರಗೆ ವಿಜ್ಞಾನಿಗಳು ಅಧ್ಯಯನ ಮಾಡಿರುವ ಅತ್ಯಂತ ಪ್ರಾಚೀನ ವಸ್ತುವಾಗಿದೆ. ಇದರ ಅಧ್ಯಯನದಿಂದ ಮೂಲ ಜೀವ ವಿಕಾಸನಗೊಂಡ ಬಗ್ಗೆ ಬೆಳಕು ಚೆಲ್ಲಬಹುದೆಂದು ವಿಜ್ಞಾನಿಗಳು ಅಂದಾಜಿಸುತ್ತಿದ್ದಾರೆ.

ರುಯ್ಗು ಕ್ಷುದ್ರಗ್ರಹದಿಂದ ಸಂಗ್ರಹಿಸಿದ್ದ ವಸ್ತುಗಳ ವಿಶ್ಲೇಷಣೆಯು ಸುಮಾರು 20 ಅಮೈನೋ ಆಸಿಡ್ (ಆಮ್ಲ) ಗಳ ಇರುವಿಕೆಯನ್ನು ಸ್ಪಷ್ಟೀಕರಿಸಿದೆ. ಕಾರ್ಬಾಕ್ಸಿಲಿಕ್ ಮತ್ತು ಅಮೈನ್ ಗುಂಪುಗಳಿಂದ ರೂಪುಗೊಂಡ ಅಮೈನೋ ಆಸಿಡ್ ಜೀವದ ಮೂಲಭೂತ ಅಂಶಗಳಲ್ಲಿ ಒಂದು ಪ್ರಮುಖ ಅಂಶ. ಇದರಿಂದ ಜೀವದ ಉಗಮ ಮತ್ತು ವಿಕಸನದ ಬಗ್ಗೆ ತಿಳಿಯಲು ಸಾಕಷ್ಟು ಪೂರಕವಾಗಿದೆ.
ಅಮೈನೋ ಆಸಿಡ್ ಗಳು ಸೇರಿ ಪ್ರೊಟೀನ್ಗಳನ್ನೂ ತಯಾರಿಸುತ್ತವೆ. ಜೀವಂತ ಅಣುಗಳಿಗೆ ಅತ್ಯವಶ್ಯಕ. ಏಕೆಂದರೆ ಈ ಪ್ರೊಟೀನ್ ಗಳಿಂದಲೇ ಜೀರ್ಣಕ್ರಿಯೆ, ಅಭಿವೃದ್ಧಿ, ಅಂಗಾಂಶ ದುರಸ್ತಿ ಮತ್ತು ಇತರ ವಿವಿಧ ದೈಹಿಕ ಚಟುವಟಿಕೆಗಳು ಸಾಧ್ಯವಾಗುವುದು. ಯಾವುದೇ ಜೀವಿ ಇವುಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ.

ಈ ಹಿಂದೆ ಭೂಮಿಗೆ ಅಪ್ಪಳಿಸಿದ ಕ್ಷುದ್ರಗ್ರಹಗಳಲ್ಲಿ ಅಥವಾ ಉಲ್ಕಾಶಿಲೆಗಳಲ್ಲಿ ಅಮೈನೋ ಆಸಿಡ್ ಗಳ ಕುರುಹುಗಳು ಕಂಡುಬಂದಿವೆ. ಆದರೆ, ಅವುಗಳನ್ನು ಪ್ರಮಾಣೀಕರಿಸುವುದು ಸಾಧ್ಯವಾಗಿರಲಿಲ್ಲ. ಏಕೆಂದರೆ ಅವು ಭೂಮಿಯ ಕಡೆ ಬಂದಾಗ ಇಲ್ಲಿನ ವಾತಾವರಣಕ್ಕೆ ಹೊಂದದೆ, ವಾತಾವರಣದಲ್ಲಿನ ತೇವಾಂಶ ಕೂಡ ಇದರ ಮೂಲ ರಾಸಾಯನಿಕ ರಚನೆ ಬದಲಾಯಿಸಿರುತ್ತದೆ.  ಆದರೆ ಹಯಾಬುಸಾ 2 ಇಂದ ಸಂಗ್ರಹಿಸಿ ತಂದಿರುವ ವಸ್ತು ಈ ಹಿಂದೆ ಅಧ್ಯಯನ ನಡೆಸಿರುವ ಇಂತಹ ವಸ್ತುಗಳಿಗಿಂತ ಪರಿಶುದ್ಧವಾಗಿದೆ ಏಕೆಂದರೆ ಇದನ್ನು ಸರಿಯಾದ ರೀತಿಯಲ್ಲಿ ವಾತಾವರಣ ಮತ್ತು ಇತರೆ ರಾಸಾಯನಿಕ ಅಂಶಗಳ ಸಂಯೋಜನೆಗೆ ಅವಕಾಶವಿಲ್ಲದಂತೆ ಸಂಗ್ರಹಿಸಿ ಭೂಮಿಗೆ ತರಲಾಗಿದೆ. 

ರುಯ್ಗು ಕ್ಷುದ್ರಗ್ರಹವು ಎಂದಿಗೂ 100 ° C ಗಿಂತ ಹೆಚ್ಚಿನ ತಾಪಮಾನವನ್ನು ಅನುಭವಿಸಿಲ್ಲ ಎಂಬ ಅಂಶಕ್ಕೆ ಅಲ್ಲಿಂದ ಸಂಗ್ರಹಿಸಿರುವ ವಸ್ತುಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಏಕೆಂದರೆ ಜೀವನದ ಉಗಮ ಮತ್ತು ವಿಕಸನದ ಮೂಲಭೂತ ಅಂಶಗಳಲ್ಲಿ ಒಂದಾದ ಅಮೈನೋ ಆಸಿಡ್ ಗಳು ಮೂಲತಃ ಕ್ಷುದ್ರಗ್ರಹಗಳಿಂದ ಭೂಮಿಗೆ ಬಂದಿರಬೇಕು ಎಂದು ಕೆಲ ವಿಜ್ಞಾನಿಗಳು ನಂಬಿರುತ್ತಾರೆ. ಕ್ಷುದ್ರಗ್ರಹವನ್ನು 100 ° C ಗಿಂತ ಹೆಚ್ಚಿನ ತಾಪಮಾನಕ್ಕೆ ಬಿಸಿ ಮಾಡಿದ್ದರೆ, ಕೆಲ ಮೂಲಭೂತ ರಾಸಾಯನಿಕ ರಚನೆಗಳು  ಇದರ ಪರಿಣಾಮವಾಗಿ ಕುದಿಸಿದಾಗ ಆವಿಯಾದಂತೆ ಇವು ಬಾಹ್ಯಾಕಾಶದಲ್ಲಿ ಕಳೆದುಹೋಗುತ್ತವೆ.

ಹಯಾಬುಸಾ 2 ಇಂದ ಸಂಗ್ರಹಿಸಿದ ವಸ್ತುಗಳಲ್ಲಿ ಸೌರ ವ್ಯೂಹದ ರಚನೆಯಿಂದ ಇಲ್ಲಿಯವರೆಗೆ ಉಳಿದ ಸಾವಯವ ವಸ್ತುಗಳ ಉಪಸ್ಥಿತಿಯನ್ನು ಪತ್ತೆಹಚ್ಚಲು ವಿಜ್ಞಾನಿಗಳಿಗೆ ಸಾಧ್ಯವಾಗಿಸಿತು.

ರುಯ್ಗು ಕ್ಷುದ್ರಗ್ರಹದಲ್ಲಿ ಇಂಗಾಲವು ಸಮೃದ್ಧವಾಗಿದೆ ಮತ್ತು ಇಲ್ಲಿನ ರಾಸಾಯನಿಕ ರಚನೆ ಸೂರ್ಯನಲ್ಲಿರುವ ರಾಸಾಯನಿಕ ರಚನೆಗೆ ಸಾಕಷ್ಟು ಹೋಲಿಕೆ ಇದೆ ಎಂದು ತಿಳಿದುಬಂದಿದೆ. ಮತ್ತು ಬಹು ಮುಖ್ಯವಾಗಿ ಇದು ಸೌರವ್ಯೂಹವು ಅಸ್ತಿತ್ವಕ್ಕೆ ಬಂದ ಐವತ್ತು ಲಕ್ಷ (ಐದು ಮಿಲಿಯನ್) ವರ್ಷಗಳ ನಂತರ ರೂಪುಗೊಂಡಿದೆ ಎಂದು ವಿಜ್ಞಾನಿಗಳು ಕಂಡುಹಿಡಿದ್ದಾರೆ. ಇದರಿಂದ ಗ್ರಹಗಳು ಮತ್ತು ನಕ್ಷತ್ರಗಳ ಮೂಲವನ್ನು ಇನ್ನು ಹೆಚ್ಚು ತಿಳಿಯಾಲು ಮತ್ತು ಪ್ರಮುಖವಾಗಿ ಜೀವದ ಉಗಮದ ಬಗ್ಗೆ ತಿಳಿಯಲು ಅನುವು ಆಗುವುದೆಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ರುಯ್ಗು ನಿಂದ ತಂದಿರುವ ವಸ್ತುವಿನ ರಾಸಾಯನಿಕ ರಚನೆ ಸೂರ್ಯನಲ್ಲಿರುವ ವಸ್ತುಗಳ ಮೂಲ ರಚನೆಯಂತೇ ಇದೆ. ಸೂರ್ಯನಲ್ಲಿ ಹೈಡ್ರೋಜನ್ ಮತ್ತು ಹೀಲಿಯಂ ಅನ್ನು ಬೇರ್ಪಡಿಸಿದರೆ, ಉಳಿದುಕೊಳ್ಳುವ ಇತರೆ ರಾಸಾಯನಿಕ ರಚನೆ ಮತ್ತು ಅಂಶಗಳು ರುಯ್ಗು ನಲ್ಲಿ ಇರುವ ರಚನೆಯಂತೆ ಸುಮಾರು ಅದೇ ಅನುಪಾತದಲ್ಲಿ ಇದೆ ಎಂದು ತಿಳಿದುಬಂದಿದೆ. ಹಾಗಾಗಿ ಸೌರ ವ್ಯೂಹದ ಜೊತೆ ಸೂರ್ಯನಲ್ಲಿ ಇರುವ ಮೂಲ ರಾಸಾಯನಿಕ ರಚನೆಯ ಬಗ್ಗೆ ತಿಳಿದು ಕೊಳ್ಳಲು ಇದು ಸಹಾಯ ಮಾಡಬಲ್ಲದು.

ಒಟ್ಟಾರೆ ಈ ಅಧ್ಯಯನವು ಬಾಹ್ಯಾಕಾಶ, ಸೌರವ್ಯೂಹ ಮತ್ತು ನಮ್ಮ (ಜೀವಿಗಳ) ಮೂಲದ ಬಗ್ಗೆ ಅರಿತುಕೊಳ್ಳಲು ಒಂದು ಮಹತ್ವದ ಬೆಳೆವಣಿಗೆ. ಸಧ್ಯಕ್ಕೆ ಮಾನವರು ಅಧ್ಯಯನ ನಡೆಸಿರುವ ಅತ್ಯಂತ ಪ್ರಾಚೀನ ವಸ್ತು ರುಯ್ಗು ಇಂದ ಸಂಗ್ರಹಿಸಿರುವುದು. 

Kannada

Recent Stories

ಲೇಖಕರು
Research Matters
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
Research Matters
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Research Matters
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
Research Matters
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Research Matters
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
Research Matters
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
Research Matters
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
Research Matters
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
Research Matters
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
Research Matters
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...