ಬೆಂಗಳೂರು
ಪಶ್ಚಿಮ ಘಟ್ಟಗಳ ಕಾಡುಗಳಿಂದ ಹೊಸ ‘ಪೈಪ್ವರ್ಟ್’ ಪ್ರಭೇದ ಪತ್ತೆ

2015ರಲ್ಲಿ, ಅದೊಂದು ಮಾಮೂಲು ಸುದಿನ. ಪುಣೆಯ ಅಘರ್ಕರ್ ಸಂಶೋಧನಾ ಕೇಂದ್ರದ, ವಿಜ್ಞಾನಿಯಾದ ಡಾ. ರಿತೇಶ್ ಕುಮಾರ್ ಚೌಧರಿಯನ್ನು ಕಾಣಲು ಬಂದಿದ್ದ, ಬೆಂಗಳೂರಿನ ಎಂ. ಈ. ಎಸ್. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಜಿ. ರಾಮಚಂದ್ರ ರಾವ್, ಉತ್ತರ ಕನ್ನಡ ಜಿಲ್ಲೆಯಿಂದ, ಚಿಕ್ಕ ಹೂಗಳಿರುವ, ಹುಲ್ಲಿನಂತೆ ಕಾಣುವ ಕೆಲ ಗಿಡಗಳ ಮಾದರಿಗಳನ್ನು ತಂದು, ಅದನ್ನು ಗುರುತಿಸಲು ಡಾ. ಚೌಧರಿಯ ಸಹಾಯ ಕೋರಿದರು. ಡಾ. ಚೌಧರಿಯವರು ಅದನ್ನು ಕೂಡಲೇ ಒಂದು ‘ಪೈಪ್ವರ್ಟ್’ ಅಥವಾ ಹೂಬಿಡುವ ಏಕದಳದ ಒಂದು ಪ್ರಭೇದ ಎಂದು ಗುರುತಿಸಿದರು. ಆದರೆ, ಇದು ಯಾವ ಪ್ರಭೇದವೆನ್ನುವುದು ಒಂದು ದೊಡ್ಡ ಯಕ್ಷ ಪ್ರಶ್ನೆಯಾಗಿತ್ತು!

‘ಪೈಪ್ವರ್ಟ್’ ಅಥವಾ ‘ಎರಿಯೋಕಾಲಾನ್’ ಎನ್ನುವುದು, ಕೆಲಕಾರಣಗಳಿಗೆ ಜೀವವರ್ಗೀಕರಣ ಶಾಸ್ತ್ರಜ್ಞರ (ಟ್ಯಾಕ್ಸಾನಮಿಸ್ಟ್ಸ್) ಪೆಡಸುಪಾಡು ಆಗಿರುವುದು ಸರಿಯೇ! ಈ ಕುಲದಲ್ಲಿನ ಗಿಡಪ್ರಭೇದಗಳೆಲ್ಲವೂ ಒಂದೇ ತರಹ ಕಾಣುವುದರಿಂದ ಇದನ್ನು ಬೇರೆ ಬೇರೆ ಪ್ರಭೇದವಾಗಿ ವಿಂಗಡಿಸುವುದು ಕಷ್ಟಸಾಧ್ಯ. ಸುಪ್ರಸಿದ್ಧ ಜೀವವರ್ಗೀಕರಣ ಶಾಸ್ತ್ರಜ್ಞರಾದ ಸರ್ ಜೋಸೆಫ್ ಡಾಲ್ಟನ್ ಹೂಕರ್, ಭಾರತದ ಗಿಡಗಳ ಮೊದಲ ಸಮಗ್ರ ಮಾರ್ಗದರ್ಶಿಯಾದ “ಫ್ಲೋರಾ ಆಫ್ ಬ್ರಿಟಿಷ್ ಇಂಡಿಯಾ”ದಲ್ಲಿ, ‘ಎರಿಯೋಕಾಲಾನ್’ ಎನ್ನುವ ಕುಲವನ್ನು ವರ್ಣಿಸುವುದು ಕ್ಲಿಷ್ಟಕರವೆಂದು ಅಭಿಪ್ರಾಯ ಪಟ್ಟಿದ್ದಾರೆಂದು ಡಾ. ಚೌಧರಿಯವರು ಹೇಳುತ್ತಾರೆ. ಅಲ್ಲದೇ, ಈ ಕುಲವನ್ನು 12 ಜೀವವರ್ಗೀಕರಣ ವಿಭಾಗಗಳಾಗಿ ವಿಭಜಿಸಿರುವಂತಹ ಭಾರತೀಯ ಜೀವವರ್ಗೀಕರಣ ಶಾಸ್ತ್ರಜ್ಞರಾದ ಆರ್. ಅನ್ಸಾರಿ ಮತ್ತು ಏನ್.ಪಿ. ಬಾಲಕೃಷ್ಣನ್ ಸಹ ಇದೇ ಅಭಿಪ್ರಾಯ ಹೊಂದಿರುತ್ತಾರೆಂದು ಹೇಳುತ್ತಾರೆ.

ಆದರೆ, ಈ ಬಾರಿ, ಸಂಶೋಧಕರು ಈ ಕ್ಲಿಷ್ಟಕರ ಒಗಟನ್ನು ಪರಿಹರಿಸಿದ್ದಾರೆ. ಇತ್ತೀಚೆಗಷ್ಟೇ, ಅನಲೆಸ್ ಬೊಟಾನಿಸಿ ಫೆನಿಸಿ ಎನ್ನುವ ಅಂತರರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟವಾಗಿರುವ ಒಂದು ಅಧ್ಯಯನದಲ್ಲಿ, ಡಾ. ಚೌಧರಿ, ತಮ್ಮ ಪಿ.ಎಚ್.ಡಿ ವಿದ್ಯಾರ್ಥಿನಿಯಾದ ಅಶ್ವಿನಿ ದರ್ಶೇಟ್ಕರ್, ಮತ್ತು ಸಂಶೋಧನಾ ಸಹಯೋಗಿಗಳಾದ ಡಾ. ರಾವ್, ಡಾ. ಮಂದಾರ್, ಡಾ. ತಮನ್ಕರ್, ಹಾಗೂ ಡಾ. ಪ್ರಭುಕುಮಾರ್, ಉತ್ತರ ಕನ್ನಡ ಜಿಲ್ಲೆಯಲ್ಲಿ ದೊರೆತ ಈ ಪ್ರಭೇದದ ಹಾಗೂ ಅದರ ಡಿ. ಏನ್. ಏ. ಮೇಲೆ ವಿಸ್ತಾರವಾದ ಅಧ್ಯಯನ ನಡೆಸಿ, ಇದು ಒಂದು ಹೊಸ ಪ್ರಭೇದವೆಂದು ದೃಢಪಡಿಸಿದ್ದಾರೆ. ಈ ಹೊಸ ಪ್ರಭೇಧಕ್ಕೆ “ಎರಿಯೋಕಾಲಾನ್ ಕರಾವಲೆನ್ಸ್” (Eriocaulon karaavalense) ಎಂದು ಕನ್ನಡ ಪದವಾದ “ಕರಾವಳಿ”ಗೆ (ಅರ್ಥ- ಕಡಲತೀರ) ಅನುಗುಣವಾಗಿ ನಾಮಕರಣ ಮಾಡಿದ್ದಾರೆ.

ಪೈಪ್ವರ್ಟ್ಗಳು ಎರಿಯೋಕಾಲೇಸೀ ಕುಟುಂಬದ ಹೂವುಬಿಡುವ ಏಕದಳ ಪ್ರಭೇದಗಳು. ಇವು ಉಷ್ಣವಲಯದಲ್ಲಿ ಹೆಚ್ಚಾಗಿ ಮತ್ತು ಸಮಶೀತೋಷ್ಣ ಪ್ರದೇಶದಲ್ಲಿ ಅಲ್ಪವಾಗಿ ಕಾಣಸಿಗುತ್ತವೆ. ಪ್ರಪಂಚಾದ್ಯಂತ, ಈವರೆಗೆ ಸುಮಾರು ೪೭೧ ಪೈಪ್ವರ್ಟ್ ಪ್ರಭೇದಗಳನ್ನು ವರ್ಣಿಸಲಾಗಿದೆ. ಇದರಲ್ಲಿ ಸುಮಾರು ೨೫% ನಮ್ಮ  ಭಾರತ ದೇಶದಲ್ಲಿ ಕಂಡುಬರುತ್ತವೆ. ಪಶ್ಚಿಮ ಘಟ್ಟಗಳ ಬೆಟ್ಟಗುಡ್ಡಗಳಲ್ಲಿ ಸುಮಾರು ೬೦ ಪ್ರಭೇದಗಳು ಕಂಡುಬರುತ್ತವೆ, ಮತ್ತು ಈಶಾನ್ಯ ಭಾರತದ ಕೆಲವು ಕಾಡುಗಳಲ್ಲಿ ಕೆಲ ಪ್ರಭೇದಗಳು ಕಂಡುಬರುತ್ತವೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಇದರ ಹೂವುಗಳನ್ನು ಹೂಗುಚ್ಛಗಳಲ್ಲಿ ಅಲಂಕರಿಸಿ  ಮಾರಲಾಗುತ್ತದೆ. ಈ ಗಿಡಗಳು ಆಮ್ಲೀಯ ಮಣ್ಣಲ್ಲಿ ಚೆನ್ನಾಗಿ ಬೆಳೆಯುತ್ತವೆ, ಮತ್ತು ಕೆಲ ಪ್ರಭೇದಗಳು ಮಣ್ಣಲ್ಲಿನ ಭಾರ ಲೋಹ ಕಲ್ಮಶೀಕರಣ ಸೂಚಕಗಳೆಂದು ಹೇಳಲಾಗುತ್ತದೆ. ಚೀನಾದ ಒಂದು ಪೈಪ್ವರ್ಟ್ ಪ್ರಭೇದವಾದ ಎರಿಯೋಕಾಲಾನ್ ಬ್ಯೂರ್ಜೆರಿಯಾನಂ ಉರಿಯೂತ ವಿರೋಧಕ, ಸೂಕ್ಷ್ಮಜೀವಿ ವಿರೋಧಕ ಮತ್ತು ನರನಾಶ ನಿರೋಧಕ. ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಇನ್ನೊಂದು ಪ್ರಭೇದವಾದ ಎರಿಯೋಕಾಲಾನ್ ಸಿನೆರಿಯಂ ಕ್ಯಾನ್ಸರ್ ವಿರೋಧಕ ಗುಣಗಳಿಗೆ ಜ್ಞಾನತ.

ಸೂಕ್ಷ್ಮದರ್ಶಕದಡಿಯತ್ತ ಈ ಎರಿಯೋಕಾಲಾನ್ ಕರಾವಲೆನ್ಸ್ ಪ್ರಭೇದದ ಚಿಕ್ಕ ಹೂವುಗಳನ್ನು ಮತ್ತು ಬೀಜಗಳನ್ನು ಸಂಶೋಧಕರು ಗಮನಿಸಿದಾಗ, ಹೂವುಗಳು ಮತ್ತು ಬೀಜಗಳ ಮೇಲೆ ನೇಯ್ದ ಪಟ್ಟಿಯಂತೆ ಇರುವ ಕೆಲವು ಅನುಬಂಧಗಳು ಗಮನಕ್ಕೆ ಬಂದವು. ಅಲ್ಲದೇ, ಹೂವಿನ ದಳಗಳ ಮೇಲೆ ಗ್ರಂಥಿಯಂತಹ ರಚನೆಯೂ ಸಹ ಕಂಡುಬಂದಿತು. ಈ ಎರಡೂ ವೈಶಿಷ್ಟ್ಯಗಳು, ಇದನ್ನೇ ಹೋಲುವ ಇನ್ನೊಂದು ಪ್ರಭೇದವಾದ ಎರಿಯೋಕಾಲಾನ್ ಕಾನರೆನ್ಸ್ ನಿಂದ ಇದನ್ನು ಬೇರೆ ಪ್ರಭೇದವನ್ನಾಗಿಸುತ್ತದೆ.

ಇದನ್ನು ಸೂಕ್ಷ್ಮವಾಗಿ ಗಮನಿಸದೇ ಇದ್ದಲ್ಲಿ, ಕೇವಲ ಗಿಡದ ಮೇಲ್ನೋಟದ ರೂಪುರೇಷೆಗಳ ಕುರಿತು ಗುರುತಿಸುವ ಪ್ರಕ್ರಿಯೆಗಳು  ನಮ್ಮ ದಾರಿತಪ್ಪಿಸಬಹುದು.

“ಒಂದೇ ಪ್ರಭೇದದಲ್ಲಿ ಇಂತಹ ಸಣ್ಣ ಪುಟ್ಟ ವ್ಯತ್ಯಾಸಗಳಿರುತ್ತವೆ. ಇವನ್ನು ಸೂಕ್ಷ್ಮವಾಗಿ ಗಮನಿಸದೇ ಇದ್ದರೆ, ತಪ್ಪಾಗಿ, ಬೇರೆ ಅಥವಾ ಹೊಸ ಪ್ರಭೇದವೆಂದು ಪರಿಗಣಿಸಬಹುದು” ಎಂದು ತಪ್ಪಾಗಿ ಗುರುತಿಸಲ್ಪಟ್ಟ ಪ್ರಭೇದಗಳನ್ನು ಸರಿಯಾಗಿ ಗುರುತಿಸಬಲ್ಲಂತಹ ಡಿ-ಏನ್-ಎ ಆಧಾರಿತ ಅಧ್ಯಯನಗಳನ್ನು ನಿರ್ವಹಿಸುತ್ತಿರುವಂತಹ ಅಶ್ವಿನಿ ದರ್ಶೇಟ್ಕರ್ ತಮ್ಮ ಅಭಿಪ್ರಾಯಗಳನ್ನು ಮುಂದಿಡುತ್ತಾರೆ.

ಈ ಹೊಸ ಪ್ರಭೇದವಾದ ಎರಿಯೋಕಾಲಾನ್ ಕರಾವಲೆನ್ಸ್ ಮುಂಗಾರಿನ ನಂತರ ಚಿಗುರುತ್ತದೆ. ಎಲೆಗಳು ಜೂನ್ ತಿಂಗಳಿನಲ್ಲಿ ಕಾಣಿಸಿಕೊಂಡರೆ ಹೂವುಗಳು ಆಗಸ್ಟ್ ತಿಂಗಳಿನಲ್ಲಿ ಚಿಗುರುತ್ತವೆ. ಮಳೆಯ ನಂತರ ಪರಾಗಸ್ಪರ್ಶವಾದಮೇಲೆ, ಬೀಜಗಳು ಚಿಗುರಲು ಮುಂದಿನ ಮುಂಗಾರಿನವರೆಗೆ ಕಾಯುತ್ತವೆ. ಇದರ ಎಲೆಗಳು ಹುಲ್ಲಿನ ಗರಿಗಳಂತೆ ಇರುತ್ತವೆ, ಮತ್ತು ಇದರ ಹೂವುಗಳು ಹುಲ್ಲುಕಡ್ಡಿಯ ಮೇಲೆ ತಲೆಯಂತೆ ಕಾಣುವ ಇಟ್ಟಳಗಳ ಮೇಲೆ ಚಿಗುರುತ್ತವೆ. ಇದರ ಈ ವೈಶಿಷ್ಟ್ಯ ಹುಲ್ಲಿನಿಂದ ಇದನ್ನು ವಿಭಿನ್ನವಾಗಿಸುತ್ತದೆ. ಈ ಆವಿಷ್ಕಾರ ಕಳೆದ 5 ವರುಷಗಳಿಂದ ನಡೆಯುತ್ತಿರುವ ಇದರ ಮೇಲಿನ ಅಧ್ಯಯನಗಳಿಗೆ ಪೂರಕವಾಗುವಂತಹ ಒಂದು ಹೊಸ ಸೇರ್ಪಡೆ. ೨೦೧೭ರಲ್ಲಿ, ಪಶ್ಚಿಮ ಘಟ್ಟಗಳಿಂದ ಎರಿಯೋಕಾಲಾನ್ ಪಾರ್ವಿಸಫಲಮ್ ಎಂಬ ಈ ಕುಲದ ಇನ್ನೊಂದು ಪ್ರಭೇಧವನ್ನು ವರ್ಣಿಸಲಾಗಿತ್ತು.

ಈ ಪೈಪ್ವರ್ಟ್ ಪ್ರಭೇಧಗಳ ಪರಸ್ಪರ ಸಂಬಂಧಗಳು ಹಾಗೂ ಇವುಗಳ ವಿಕಸನದ ಮೇಲಿನ ಅಧ್ಯಾಯಗಳನ್ನು ನಡೆಸುವುದು ಅಲ್ಲದೇ, ಸಂಶೋಧಕರು ಡಿ. ಏನ್. ಎ. ಯ ಚಿಕ್ಕ ಅನುಕ್ರಮಗಳನ್ನು ಆಧರಿಸಿ ಒಂದು ಪ್ರಭೇದವನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.

“ಈ ಗಿಡಗಳನ್ನು ಇದರ ಚಿಕ್ಕ ಆಕಾರದಿಂದ ಅಥವಾ ಹೂವುಗಳಿಲ್ಲದೇ ಗುರುತು ಹಿಡಿಯಲು ಕಷ್ಟ. ಆದರೆ, ಡಿ. ಏನ್. ಎ. ಗೆರೆಪಟ್ಟಿಗಳಿಂದ ಕೇವಲ ಒಂದು ಎಲೆಯಿಂದ ಇಂತಹ ಪ್ರಭೇದವೆಂದು ಗುರುತಿಸಬಹುದು!” ಎಂದು ಪ್ರತಿಯೊಂದು ಪ್ರಭೇದಕ್ಕೂ ಗೆರೆಪಟ್ಟಿ ಹೊಂದುವ ಮಹಾದಾಸೆಯೊಂದಿಗೆ ಡಾ. ಚೌಧರಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

ಇನ್ನೂ ಹೆಚ್ಚಿನ ಪೈಪ್ವರ್ಟ್ ಪ್ರಭೇದಗಳು ಬೆಳಕಿಗೆ ಬರಲು ಸಜ್ಜಾಗಿವೆ.

“ಈಶಾನ್ಯ ಭಾರತದ ರಾಜ್ಯಗಳಾದ ಮೇಘಾಲಯ ಮತ್ತು ನಾಗಾಲ್ಯಾಂಡ್ನಲ್ಲಿ ಕೆಲವು ಪೈಪ್ವರ್ಟ್ ಪ್ರಭೇದಗಳು ಇವೆ. ಇವುಗಳಿಗೆ ಸರಿಯಾದ ರೀತಿಯ ಅನ್ವೇಷಣೆಯ ಅವಶ್ಯಕತೆ ಇದೆ.” ಎಂದು ಡಾ. ಚೌಧರಿ ನುಡಿಯುತ್ತಾರೆ.  

Kannada

Recent Stories

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...