Bengaluru
ಜನಿಸುವ ಮುನ್ನವೇ ಕಾಣೆಯಾದ ಹೆಣ್ಣುಮಕ್ಕಳ (ಮಹಿಳೆಯರ) ಸಂಖ್ಯೆಯ ಲೆಕ್ಕ ಭಾರತದಲ್ಲಿ ಎಷ್ಟಿರಬಹುದು?

“ನನ್ನ ಹೆಸರು ನಕುಸ, ನಾನು ಭಾರತದ ಅನಗತ್ಯ ಮಗಳು” ಎಂದು ಕೂದಲೆಳೆಯ ಅಂತರದಲ್ಲಿ ಸಾವಿನಿಂದ ತಪ್ಪಿಸಿಕೊಂಡ ಪುಟ್ಟ ಹುಡುಗಿ ಹೇಳುತ್ತಾಳೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ಹುಟ್ಟಿನಿಂದಲೇ ಅಥವಾ ಅದಕ್ಕೂ ಮುಂಚಿನಿಂದಲೇ ನಿರ್ದಯವಾದ ಲಿಂಗತಾರತಮ್ಯವನ್ನು ಎದುರಿಸುತಿದ್ದಾರೆ. ಭಾರತದಲ್ಲಿನ ಹಲವಾರು ಸಮಾಜಗಳಲ್ಲಿ ಇನ್ನೂ ಚಾಲ್ತಿಯಲ್ಲಿರುವ ಮತ್ತು ಆಳವಾಗಿ ಬೇರೂರಿರುವ ಪುರುಷ ಪ್ರಾಧಾನ್ಯತೆಯಿಂದ, ಪ್ರತೀ ವರ್ಷ ಲಕ್ಷಾಂತರ ಹೆಣ್ಣುಮಕ್ಕಳು ಜೀವನದಿಂದ ವಂಚಿತರಾಗುತ್ತಿದ್ದಾರೆ ಮತ್ತು ಜನಿಸಿದರೂ ಸಹ ಎಲ್ಲಾ ರೀತಿಯ ಬೆಂಬಲವಿಲ್ಲದೇ ಕುಟುಂಬದ ನಿರ್ಲಕ್ಷ್ಯವನ್ನು ಅನುಭವಿಸುತ್ತಾರೆ.

1970 ರಿಂದಲೂ ಲಿಂಗವನ್ನು ಆದರಿಸಿ ನಡೆಯುವ ಗರ್ಭಪಾತಗಳು ಮತ್ತು ಹೆಣ್ಣುಮಗುವಿನ ಶಿಶುಹತ್ಯೆಗಳು, ಜನನದ ಸಮಯದಲ್ಲಿನ ಮಕ್ಕಳ ಲಿಂಗಾನುಪಾತದ ಅಸಮಾನತೆಗೆ ಕಾರಣವಾಗುತ್ತಿವೆ. ಲಿಂಗಾನುಪಾತವೆಂದರೆ, ಒಂದು ನಿರ್ಧಿಷ್ಟ ಅವಧಿಯಲ್ಲಿ ಜನಿಸುವ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳ ಸಂಖ್ಯೆಯ ಅನುಪಾತ. ಈ ಅಸಮತೋಲನದಿಂದ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ಜನನದಿಂದ ವಂಚಿತರಾಗುತ್ತಿದ್ದಾರೆ- ಸಾಮಾನ್ಯವಾಗಿ ನಿಸರ್ಗದತ್ತವಾಗಿ ಜನಿಸಬೇಕಾಗಿದ್ದ ಸಂಖ್ಯೆಗೆ ಹೋಲಿಸಿದರೆ ಜನಿಸಿದ ಹೆಣ್ಣುಮಕ್ಕಳ ಸಂಖ್ಯೆಯು ತೀರಾ ಕಡಿಮೆಯಿದೆ. 1990 ಮತ್ತು 2016 ರ ನಡುವೆ ಭಾರತದಲ್ಲಿ, ಜನಿಸುವ ಮುನ್ನವೇ ಕಾಣೆಯಾದ ಹೆಣ್ಣುಮಕ್ಕಳ ಸಂಖ್ಯೆ 15 ಮಿಲಿಯನ್ ಗಳಷ್ಟಿತ್ತು. ಈ ಸಂಖ್ಯೆಯು 2050 ರ ಹೊತ್ತಿಗೆ ಪ್ರತೀ ವರ್ಷ 3 ಮಿಲಿಯನ್ ಸಂಖ್ಯೆಗಿಂತ ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುವುದನ್ನು ಅಧ್ಯಯನವೊಂದರ ವರದಿಗಳು ಗುರುತಿಸಿವೆ.

ಇಲ್ಲಿ ಕೈಗೊಡ ಹೊಸ ಅಧ್ಯಯನದ ಪ್ರಕಾರ 2017 ರಿಂದ 2030 ರ ಒಳಗೆ ಭಾರತವು ಒಟ್ಟು 6.8 ಮಿಲಿಯನ್ ಸಂಖ್ಯೆಯ ಹೆಣ್ಣುಮಕ್ಕಳು ಜನನದ ಮುಂಚೆಯೇ  ಕಾಣೆಯಾಗುವುದಕ್ಕೆ ಸಾಕ್ಷಿಯಾಗಲಿದೆ. “ಪ್ಲಾಸ್ ಒನ್” ಎನ್ನುವ ನಿಯತಕಾಲಿಕೆಯಲ್ಲಿ ಪ್ರಕಟಣೆಗೊಂಡ ಅಧ್ಯಯನವೊಂದರಲ್ಲಿ ಸೌದಿ ಅರೇಬಿಯಾ, ಫ್ರಾನ್ಸ್, ಚೀನಾ ಮತ್ತು ಆಸ್ಟ್ರಿಯಾ ದೇಶಗಳ ಸಂಶೋಧಕರು ಭಾರತದಲ್ಲಿನ ವಿಶಿಷ್ಟ ಜನಸಂಖ್ಯಾ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಜನನದ ಸಮಯದಲ್ಲಿ ಲಿಂಗಾನುಪಾತದ ರಾಜ್ಯವಾರು ಅಧ್ಯಯನವನ್ನು ಕೈಗೊಂಡಿದ್ದಾರೆ. ಈ ಅಧ್ಯಯನಕ್ಕಾಗಿ ಮಾಹಿತಿಯನ್ನು 1990–2016 ರ ಅವಧಿಯಲ್ಲಿ ಕೈಗೊಂಡಿರುವ ಸಮೀಕ್ಷೆಗಳಿಂದ ಜನನ ಮತ್ತು ಮರಣದ ಸಮೀಕ್ಷೆಗಾಗಿ ನಡೆಸಲಾಗುವ ಭಾರತದ ಮಾದರಿ ನೊಂದಣಿ ವಿಧಾನ ಮತ್ತು ರಾಜ್ಯವಾರು ಜನನದ ಸಮಯದಲ್ಲಿ ದಾಖಲಾದ ಲಿಂಗಾನುಪಾತದ ಮಾಹಿತಿಗಳನ್ನು ಬಳಸಿಕೊಳ್ಳಲಾಗಿದೆ.

“”ನಮ್ಮ ಅಧ್ಯಯನದ ಮಾದರಿ ಮತ್ತು ಜನನದ ಸಮಯದಲ್ಲಿನ ಲಿಂಗಾನುಪಾತದ ಅಂಕಿ ಅಂಶಗಳು, ಹಿಂದಿನ ಮತ್ತು ಇವತ್ತಿನ ರಾಜ್ಯವಾರು ಪರಿಸ್ಥಿಯನ್ನು ತಿಳಿಸುತ್ತದೆ” ಎನ್ನುತ್ತಾರೆ ಕಿಂಗ್ ಅಬ್ದುಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿರುವ, ಈ ಅಧ್ಯಯನದ ಮುಖ್ಯ ಲೇಖಕರಾದ ಡಾ. ಫೆಂಗಿಂಗ್ ಚಾವ್.
ಪ್ರಪಂಚದಾದ್ಯಂತ ಲಿಂಗವನ್ನು ಆಧರಿಸಿ ನಡೆಯುವ ಗರ್ಭಪಾತಕ್ಕೆ ಮೂರು ಅಂಶಗಳಾದ,

1.ಅನೇಕ ಸಮುದಾಯಗಳಲ್ಲಿ ಗಂಡು ಮಗುವಿನ ಜನನಕ್ಕೆ ಆದ್ಯತೆ
2.ಮಹಿಳೆಯ ಫಲವತ್ತತೆಯ ದರ,
3.ಭ್ರೂಣದ ಲಿಂಗವನ್ನು ಪತ್ತೆಹಚ್ಚುವ ತಂತ್ರಜ್ಞಾನದ ಲಭ್ಯತೆ,

ಇವುಗಳು ಕಾರಣವಾಗಿವೆ ಎಂದು ತಿಳಿದುಬಂದಿದ್ದು, ಇವುಗಳಿಂದ ಹೆಣ್ಣುಮಕ್ಕಳ ಸಂಖ್ಯೆಗೂ ಗಂಡುಮಕ್ಕಳ ಸಂಖ್ಯೆಗೂ ಇರುವ ಅನುಪಾತವು ಸಮನಾಗಿಲ್ಲ.

ಪ್ರಸ್ತುತ ಅಧ್ಯಯನದಲ್ಲಿ ಸಂಶೋಧಕರು 2017 ರಿಂದ ಮುಂದಿನ 13 ವರ್ಷಗಳವರೆಗೆ ಕಾಣಿಸಬಹುದಾದ ಲಿಂಗಾನುಪಾತದ ಅಂಕಿಅಂಶಗಳ ಮಾಹಿತಿಯ ಯೋಜನೆಗೆ ಮೊದಲ ಎರಡು ಅಂಶಗಳನ್ನು ಗಣನೆಗೆ ತೆಗೆದುಕೊಂಡಿದ್ದಾರೆ. ಮೂರನೆಯ ಅಂಶವಾದ ಭ್ರೂಣದ ಲಿಂಗವನ್ನು ಪತ್ತೆಹಚ್ಚುವ ತಂತ್ರಜ್ಞಾನದ ಲಭ್ಯತೆಯ ಬಗ್ಗೆ ವಿಶ್ವಾಸಾರ್ಹ ಅಂಕಿ ಅಂಶಗಳ ಕೊರತೆಯಿಂದ ಈ ಅಂಶವನ್ನು ಅಧ್ಯಯನಕ್ಕಾಗಿ ಗಣನೆಗೆ ತೆಗೆದುಕೊಂಡಿಲ್ಲ.

2017 ರಿಂದ 2030 ರ  ಒಳಗೆ ಭಾರತದಲ್ಲಿ ಜನಿಸಬಹುದಾದ ಗಂಡುಮಕ್ಕಳ ಸಂಖ್ಯೆಗೆ ಹೋಲಿಸಿದಾಗ, ಹೆಣ್ಣುಮಕ್ಕಳ ಸಂಖ್ಯೆಯು 6.8 ಮಿಲಿಯನ್ ಗಳಷ್ಟು ‘ಕಾಣೆಯಾಗುತ್ತದೆ’ ಎಂದು ಈ ಅಧ್ಯಯನದಲ್ಲಿ ಅಂದಾಜಿಸಲಾಗಿದೆ. ದೇಶದಾದ್ಯಂತ ಬೇರೆ ಬೇರೆ ರಾಜ್ಯಗಳಲ್ಲಿ ಈ ಲಿಂಗಾನುಪಾತದ ಅಸಮತೋಲನವು ಬೇರೆಯದೇ ಆಗಿ ಕಂಡುಬಂದಿದೆ. ಒಟ್ಟು 21 ರಾಜ್ಯಗಳಲ್ಲಿನ ಮಾದರಿ ನೊಂದಣಿ ವಿಧಾನದಲ್ಲಿ ದಾಖಲಾದ ಉತ್ತಮ ಗುಣಮಟ್ಟದ ಜನನದ ಮಾಹಿತಿಯನ್ನು ಬಳಸಿ ಕೈಗೊಂಡ ಈ ಅಧ್ಯಯನದಿಂದ ತಿಳಿದುಬಂದಿದ್ದೇನೆಂದರೆ, 16 ರಾಜ್ಯಗಳು ಲಿಂಗಾನುಪಾತದಲ್ಲಿ ಅಸಮತೋಲನವನ್ನು ಹೊಂದಿದ್ದು, ಹೆಚ್ಚಿನ ಪ್ರಮಾಣದ ಅಸಮತೋಲನವು ಹರಿಯಾಣ, ಉತ್ತರಾಖಂಡ, ಗುಜರಾತ್, ಪಂಜಾಬ್, ದೆಹಲಿ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕಂಡುಬಂದಿದೆ. ಭಾರತದಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಜನಿಸುವ ಮುನ್ನವೇ ಕಾಣೆಯಾದ ಹೆಣ್ಣುಮಕ್ಕಳ ಸಂಖ್ಯೆಯು ಹೆಚ್ಚಿನ ಮಟ್ಟದಲ್ಲಿದ್ದು, ದೇಶದಾದ್ಯಂತ ಕಂಡುಕೊಂಡ ಒಟ್ಟು ಸಂಖ್ಯೆಯ ಮೂರರಷ್ಟು ಇಲ್ಲಿಯೇ ಇದೆ. ಮಹಾರಾಷ್ಟ್ರ ಮತ್ತು ರಾಜಸ್ಥಾನಗಳು ಪ್ರತಿಶತ 10 ರಷ್ಟು ಪಾಲು ಪಡೆದಿದ್ದು ನಂತರದ ಸ್ಥಾನವನ್ನು ಪಡೆದಿವೆ.

“ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದಾಗ ಉತ್ತರ ಭಾರತದ ರಾಜ್ಯಗಳಲ್ಲಿ ಗಂಡುಮಕ್ಕಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವ ಕಾರಣ ಹೆಚ್ಚಿನ ಮಟ್ಟದಲ್ಲಿ ಲಿಂಗಾನುಪಾತದ ಅಸಮತೋಲನವನ್ನು ಉತ್ತರಭಾರತದ ರಾಜ್ಯಗಳಲ್ಲಿ ಕಂಡುಬಂದಿದೆ. ಆದಾಗ್ಯೂ ನಮ್ಮ ಅಧ್ಯಯನದಲ್ಲಿ ಪ್ರಾತಿನಿಧಿಸಿರುವ ಲಿಂಗಾನುಪಾತದ ಅಂಶಗಳು ಹೊಸದಾದ ಒಳನೋಟವನ್ನು ನೀಡಿವೆ. ದೇಶದಾದ್ಯಂತ ಬೇರೆ ಬೇರೆ ರಾಜ್ಯಗಳಲ್ಲಿನ ಮಹಿಳೆಯ ಫಲವತ್ತತೆಯ ದರದ ಇಳಿಕೆಯ ಪರಿಣಾಮದ ಅಧ್ಯಯನವು ಭಾರತದಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಸಂಶೋಧನಾ ವಿಷಯವಾಗಿದೆ” ಎನ್ನುತ್ತಾರೆ ಡಾ. ಚಾವ್.

ಈ ಅಧ್ಯಯನವು ಜನನದ ಸಮಯದಲ್ಲಿನ ಲಿಂಗಾನುಪಾತದ ವ್ಯತ್ಯಾಸವನ್ನು 4 ರಾಜ್ಯಗಳಾದ ಪಂಜಾಬ್, ಅಸ್ಸಾಂ, ಕೇರಳ ಮತ್ತು ಉತ್ತರಪ್ರದೇಶದಲ್ಲಿ ಆಳವಾಗಿ ವಿಶ್ಲೇಷಿಸಿದ್ದು-  ಈ ಸಂಖ್ಯೆಗಳು ತುಂಬಾ ಆಸಕ್ತಿದಾಯಕಯಾಗಿವೆ. ಪಂಜಾಬಿನಲ್ಲಿ ಲಿಂಗಪಕ್ಷಪಾತವು ಹೆಚ್ಚಿದ್ದು, 2020ರ ವರೆಗೆ ಲಿಂಗಾನುಪಾತವು ಗಂಡುಮಕ್ಕಳ ಕಡೆ ವಾಲಿದ್ದು, ನಂತರ ಗಣನೀಯ ಇಳಿಕೆಯನ್ನು ಕಾಣುತ್ತಿದೆ. ಈ ಕುಸಿತವು 2030 ರವರೆಗೆ ಮುಂದುವರೆಯಲಿದೆ ಎಂದು ಈ ಅಧ್ಯಯನದ ಮಾದರಿಯಲ್ಲಿ ಅಂದಾಜಿಸಲಾಗಿದೆ. ಇನ್ನೊಂದು ರಾಜ್ಯವಾದ ಅಸ್ಸಾಂ ನಲ್ಲಿ ಗಂಡು ಮತ್ತು ಹೆಣ್ಣುಮಕ್ಕಳ ಲಿಂಗಾನುಪಾತವು 1990 ರವರೆವಿಗೂ ಸಮನಾಗಿದ್ದು, 2000 ದ ನಂತರ ಗಂಡುಮಕ್ಕಳ ಸಂಖ್ಯೆಯು ಹೆಚ್ಚಾಗಿದ್ದು, ಮುಂದಿನ ವರ್ಷಗಳಲ್ಲಿಯೂ ಇದು ಹೀಗೆಯೇ ಮುಂದುವರೆಯಲಿದೆ ಎನ್ನುತ್ತದೆ ಸದರಿ ಅಧ್ಯಯನ. ಮತ್ತೊಂದು ರಾಜ್ಯವಾದ ಕೇರಳದಲ್ಲಿ 2000 ನೇ ಸಾಲಿನ ಮೊದಲ ಭಾಗದವರೆಗೂ ಲಿಂಗಾನುಪಾತವು ರಾಷ್ಟ್ರೀಯ ಸರಾಸರಿ ಸಂಖ್ಯೆಗಿಂತಲೂ ಕಡಿಮೆಯಿದ್ದು, ಇದು ಉತ್ತಮ ಸಂಖ್ಯೆಯಲ್ಲಿ ಹೆಣ್ಣುಮಕ್ಕಳ ಇರುವನ್ನು ಸೂಚಿಸುತ್ತದೆ, ಮತ್ತು ಮುಂದಿನ ವರ್ಷಗಳಲ್ಲಿ ಈ ಸಮತೋಲನವನ್ನು ಕಾಯ್ದುಕೊಳ್ಳುವ ನಿರೀಕ್ಷೆಯಿದೆ ಎಂದು ಈ ಅಧ್ಯಯನವು ಅಂದಾಜಿಸುತ್ತದೆ. ಜನಿಸುವ ಮುನ್ನವೇ ಕಾಣೆಯಾದ ಹೆಣ್ಣುಮಕ್ಕಳ (ಮಹಿಳೆಯರ) ಸಂಖ್ಯೆಯಲ್ಲಿ ಹೆಚ್ಚಿನ ಪಾಲು ಹೊಂದಿರುವ ಉತ್ತರಪ್ರದೇಶವು ಭವಿಷ್ಯದಲ್ಲಿ ಸುಧಾರಿಸುವತ್ತ ಹೆಜ್ಜೆ ಇಟ್ಟು ಆಕರ್ಷಕ ಸ್ಥಾನವನ್ನು ಪಡೆಯಲು ಸಾಧ್ಯವಿದೆ.

ಸಂಶೋಧಕರು ತಾವು ಕೈಗೊಂಡ ಅಧ್ಯಯನದ ಯೋಜನೆಯ ನಿಖರತೆಯನ್ನು ವಿಶ್ಲೇಷಿಸಿಕೊಂಡಾಗ, ಈ ಹಿಂದಿನ ಅಂಕಿ ಅಂಶವನ್ನು ಆಧರಿಸಿ ನೋಡುವುದಾದರೆ, ನಿಖರತೆಯು ಹೆಚ್ಚೇ ಇದೆ ಎನ್ನುತ್ತಾರೆ. ಭಾರತದ ಜನಸಂಖ್ಯಾ ಆಯೋಗವು ಈ ವಿಷಯದಲ್ಲಿ ಅಧ್ಯಯನ ಕೈಗೊಂಡಿದೆಯಾದರೂ, ಇದು ಸರಳವಾದ ಮಾಹಿತಿಯನ್ನು ಗಣನೆಗೆ ತೆಗೆದುಕೊಂಡಿದ್ದು, ಮಹಿಳೆಯ ಫಲವತ್ತತೆಯ ದರವು ನೀಡುವ ಅಂಶಗಳ ಸಂಭಾವ್ಯ ಪರಿಣಾಮಗಳನ್ನು ಪರಿಗಣಿಸದೇ ಇರುವುದರಿಂದ ನಮ್ಮ ಅಧ್ಯಯನವು ಈ ಹಿಂದಿನ ಎಲ್ಲಾ ಅಧ್ಯಯನಗಳಿಗಿಂತ ಪರಿಣಾಮಕಾರಿಯಾಗಿದೆ ಎಂದು ಸಂಶೋಧಕರು ಪ್ರತಿಪಾದಿಸುತ್ತಾರೆ.

ಲಿಂಗಾನುಪಾತದ ಅಸಮಾನತೆಯನ್ನು ಹೆಚ್ಚಾಗಿ ಹೊಂದಿರುವ ಪ್ರದೇಶಗಳನ್ನು ಗಮನದಲ್ಲಿರಿಸಿಕೊಂಡು ಅದರ ಸಮಾನತೆಗೆ ನೀತಿಗಳನ್ನು, ಕಾಯ್ದೆಗಳನ್ನು ರೂಪಿಸುವಲ್ಲಿ ಈ ಅಧ್ಯಯನದಲ್ಲಿ ಕಂಡುಕೊಂಡಿರುವ ಅಂಶಗಳು ಪರಿಣಾಮಕಾರಿಯಾಗಿವೆ. ಲಿಂಗ ತಾರತಮ್ಯವನ್ನು ಗುರುತಿಸಿ, ಮೇಲ್ವಿಚಾರಿಸುತ್ತ ಮತ್ತು ಸೂಕ್ತ ಶಿಕ್ಷಣವನ್ನು ನೀಡಿ ಬೆಂಬಲ ಕ್ರಮಗಳನ್ನು ನೀಡಬೇಕಾದ ಅಗತ್ಯವನ್ನು ಸಂಶೋಧಕರು ಒತ್ತಿಹೇಳುತ್ತಾರೆ.

“ಮೊದಲ ಹಂತವಾಗಿ ಲಿಂಗಾನುಪಾತವೆಂದರೇನು, ಲಿಂಗಾನುಪಾತದ ಅಸಮತೋಲನದಿಂದ ಉಂಟಾಗುವ ದುಷ್ಪರಿಣಾಮಗಳನ್ನು ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸಮರ್ಥವಾಗಿ ತಿಳಿಸಿಕೊಡಬೇಕಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಮುಂದೆ ಮಾಡಬೇಕಾಗಿರುವ ನೀತಿಗಳನ್ನು ಮತ್ತು ನೂತನ ಕಾರ್ಯಕ್ರಮಗಳನ್ನು ರೂಪಿಸಿದಾಗ ಮಾತ್ರ ಪರಿಣಾಮಕಾರಿಯಾಗಬಲ್ಲದು” ಎನ್ನುತ್ತಾರೆ ಡಾ.ಚಾವ್.  

Kannada

Recent Stories

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...