ಬೆಂಗಳೂರು
ಅಧಿಕ ರಕ್ತದೊತ್ತಡವನ್ನು ನಿವಾರಿಸಲು ಭಾರತೀಯ ಶಾಸ್ತ್ರೀಯ ಸಂಗೀತವು ಸಹಾಯ ಮಾಡಬಹುದೇ?

ಅಧಿಕ ರಕ್ತದೊತ್ತಡವು ಭಾರತದಲ್ಲಿ ಸಾಮಾನ್ಯವಾಗಿ ಕಾಣುವ ದೀರ್ಘಕಾಲದ ಕಾಯಿಲೆಗಳಲಿೢ ಒಂದು. ರಾಷ್ಟ್ರೀಯ ಆರೋಗ್ಯ ವಿವರ (ನ್ಯಾಷನಲ್ ಹೆಲ್ತ್ ಪೋರ್ಟಲ್ - ಎನ್‌.ಎಚ್‌.ಪಿ) ೨೦೧೯ ರ ಪ್ರಕಾರ, ೨೦೧೮ ರಲ್ಲಿ ಸರ್ಕಾರಿ ಚಿಕಿತ್ಸಾಲಯಗಳಿಗೆ ಭೇಟಿನೀಡಿದ ಎಲ್ಲ ರೋಗಿಗಳಲ್ಲಿ ೬.೧೯% ಜನರು ಅಧಿಕರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಸಂಖ್ಯೆ ಮಧುಮೇಹದಿಂದ ಬಳಲುತ್ತಿರುವ ಜನರಿಗಿಂತ ಹೆಚ್ಚಾಗಿದೆ (ಸುಮಾರು ೪.೭೫% ರಷ್ಟು). ಆದರೆ ಎನ್‌.ಎಚ್‌.ಪಿಯಲ್ಲಿ ಖಾಸಗಿ ಚಿಕಿತ್ಸಾಲಯಗಳಿಗೆ ಭೇಟಿ ನೀಡುವ ಜನರನ್ನು ಪರಿಗಣಿಸುವುದಿಲ್ಲ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್  ಪ್ರಕಾರ, ನಮ್ಮ ದೇಶದಲ್ಲಿ ೧೦.೧೮ %ರಷ್ಟು ಮರಣಗಳಿಗೆ ಅಧಿಕ ರಕ್ತದೊತ್ತಡ ಮುಖ್ಯ ಕಾರಣವಾಗಿದೆ. ರಕ್ತದ ಪರಿಚಲನೆಯಾಗುವಾಗ ರಕ್ತನಾಳಗಳ ಗೋಡೆಗಳ ಮೇಲೆ ಬರುವ ಒತ್ತಡದ ಅಳತೆಯನ್ನು ರಕ್ತದೊತ್ತಡ ಎಂದು ಕೆರೆಯುತ್ತಾರೆ. ಈ ಒತ್ತಡವು ಆರೋಗ್ಯಕರ ಮಿತಿಯನ್ನು ಮೀರಿದಾಗ (೧೦೦-೧೩೦ ಎಂಎಂ ಎಚ್.ಜಿ (ಪಾದರಸ) ಸಂಕೋಚನ ಮತ್ತು ೬೦-೮೦ ವ್ಯಾಕೋಚನ ಎಂಎಂ ಎಚ್.ಜಿ), ಈ ಸ್ಥಿತಿಯನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. ಅಧಿಕ ರಕ್ತದೊತ್ತಡಕ್ಕೆ ಪ್ರತ್ಯೇಕವಾಗಿ ವಿಶಿಷ್ಟ ರೋಗಲಕ್ಷಣಗಳು ಇಲ್ಲ. ಆದರೆ, ದೀರ್ಘಕಾಲಕ್ಕೆ ರಕ್ತದೊತ್ತಡವನ್ನು ಪರೀಕ್ಷಿಸದೇ, ನಿಯಂತ್ರಣದಲ್ಲಿ ಇರದಿದ್ದರೆ ಅದು ಪಾರ್ಶ್ವವಾಯು, ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಕಾರಣವಾಗಬಹುದು. ಬಾಧಿತ ವ್ಯಕ್ತಿಗಳಿಗೆ ಆರೋಗ್ಯಕರ ಜೀವನಶೈಲಿಯ ಬದಲಾವಣೆಗಳನ್ನು ಮಾಡಲು, ಮನಸ್ಸಿನ ಒತ್ತಡವನ್ನು  ನಿಯಂತ್ರಿಸುವ ತಂತ್ರಗಳನ್ನು ಅಭ್ಯಾಸ ಮಾಡುವ ಜೊತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡಲು ಔಷಧಿಗಳನ್ನು ವೈದ್ಯರು ಸೂಚಿಸುತ್ತಾರೆ. ಹಿಂದಿನ ಅಧ್ಯಯನಗಳ ಪ್ರಕಾರ ಸಂಗೀತವನ್ನು ಕೇಳುವುದರಿಂದ ಅಧಿಕ ರಕ್ತದೊತ್ತಡ, ಖಿನ್ನತೆ ಮತ್ತು ಅಲ್ಝೇಮರ್  ಕಾಯಿಲೆ ಇರುವ ಜನರ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ ಎಂದು ಕಂಡು ಬಂದಿದೆ. ಅಧಿಕ ರಕ್ತದೊತ್ತಡ ಇರುವವರಿಗೆ, ಔಷಧಿಗಳೊಂದಿಗೆ ಸಂಗೀತ ಚಿಕಿತ್ಸೆಯು ಉತ್ತಮ ಫಲಿತಾಂಶಗಳನ್ನು ತೋರಿಸಿದೆ. ಆದರೆ ಈ ಹೆಚ್ಚಿನ ಅಧ್ಯಯನಗಳು ಪಾಶ್ಚಾತ್ಯ ಸಂಗೀತವನ್ನು ತಮ್ಮ ಪ್ರಯೋಗಕ್ಕೆ ಬಳಸಿಕೊಂಡಿವೆ. ಆದರೆ, ಇದೇ ಮೊದಲ ಬಾರಿಗೆ ಭಾರತೀಯ ಶಾಸ್ತ್ರೀಯ ಸಂಗೀತವು ಅಧಿಕ ರಕ್ತದೊತ್ತಡವನ್ನು ನಿವಾರಿಸಬಹುದೇ ಎಂದು ಪರಿಕಲ್ಪಿಸಿ, ಎಸ್‌ಎಸ್‌ಎನ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಚೆನ್ನೈನ ಸತ್ಯಭಾಮಾ ಕಾಲೇಜ್ ಆಫ್ ನರ್ಸಿಂಗ್‌ನ ಭಾರತೀಯ ಸಂಶೋಧಕರ ತಂಡವು ಈ ಸಂಶೋಧನೆಯನ್ನು ಕೈಗೊಂಡಿದೆ. ಅವರ ಈ ಅಧ್ಯಯನವನ್ನು ಕರೆಂಟ್ ಸೈನ್ಸ್ ಎಂಬ ಪತ್ರಿಕೆಯಲ್ಲಿ ಪ್ರಕಟಣೆಗಾಗಿ ಸ್ವೀಕರಿಸಲಾಗಿದೆ.

“ವಿಭಿನ್ನ ಸಂಸ್ಕೃತಿಗಳ ಅನಾಮಧೇಯ ಸಂಗೀತವನ್ನು ಕೇಳುವುದರ ಬದಲು ಸ್ಥಳೀಯ ಸಂಗೀತವನ್ನು ಕೇಳುವುದರಿಂದ  ಮನಸ್ಸಿನೊಂದಿಗೆ ಭಾವನಾತ್ಮಕ ಬಂಧವನ್ನು ಬೆಳೆಸುತ್ತದೆ.” ಎಂದು ಪ್ರಸ್ತುತ ಅಧ್ಯಯನದ ಲೇಖಕರಲ್ಲಿ ಒಬ್ಬರಾದ, ಎಸ್‌ಎಸ್‌ಎನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾದ  ಡಾ. ಬಿ. ಗೀತಾಂಜಲಿ ಹೇಳುತ್ತಾರೆ. ಶಾಸ್ತ್ರೀಯ ಸಂಗೀತವನ್ನು ಕೇಳುವುದರಿಂದ ನರಪ್ರೇಕ್ಷಕಗಳ ತೀವ್ರತೆಯು ಹೆಚ್ಚುವುದರ ಜೊತೆಗೆ ಮನಸ್ಸಿಗೆ ಆಹ್ಲಾದಕರ ಭಾವನೆ ನೀಡುತ್ತದೆ ಎಂದು ಅವರು ಹೇಳುತ್ತಾರೆ.

ಸಂಶೋಧಕರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಾಚೀನ ರಾಗವಾದ ರಾಗ ಮಾಲ್ಕೌನ್ಸ್ ಅನ್ನು ಈ ಪ್ರಯೋಗಕ್ಕೆ  ಆರಿಸಿಕೊಂಡಿದ್ದಾರೆ. ಮಾಲ್ಕೌನ್ಸ್ ಸಾಮಾನ್ಯವಾಗಿ ಸಂಜೆಯ ಧ್ಯಾನ ರಾಗವೆಂದು ಪರಿಗಣಿಸಲಾಗುತ್ತದೆ. ಇದರ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಮನಾದ ರಾಗ ಹಿಂದೋಳ. ಸಂಶೋಧಕರು ತಮ್ಮ ಪ್ರಯೋಗಗಳಿಗಾಗಿ ರೆಕಾರ್ಡಿಂಗ್ ಸ್ಟುಡಿಯೊದಲ್ಲಿ  ಸಿತಾರ್‌ನಲ್ಲಿ ನುಡಿಸಲಾದ ಮಾಲ್ಕೌನ್ಸ್ (ಹಿಂದೋಳ) ರಾಗವನ್ನು  ೧೫ ನಿಮಿಷಗಳ ಆಡಿಯೊ ಕ್ಲಿಪ್ ಅನ್ನು ರೆಕಾರ್ಡ್ ಮಾಡಿದರು.

"ಈ ರಾಗದ ಉಚ್ಛ  ಸ್ವರಗಳು ಮತ್ತು ಲಯ ಸ್ವರಗಳು ಸಂತೋಷದಾಯಕ ಮತ್ತು ಭಾವನಾತ್ಮಕವಾಗಿ ಶಕ್ತಿಯುತವಾದ ಅನುಭವವನ್ನು ಮನಸ್ಸಿಗೆ ನೀಡುತ್ತದೆ” ಎಂದು ಎಸ್‌ಎಸ್‌ಎನ್  ಎಂಜಿನಿಯರಿಂಗ್   ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಮಹೇಶ್ ವೀಜ್ಹಿನಾಥನ್ ಹೇಳುತ್ತಾರೆ.

ಚೆನ್ನೈನ ಜೆರಿಯಾಟ್ರಿಕ್  ಅಥವಾ ಇಳಿವಯಸ್ಕರ ಮನೆಯೊಂದರಿಂದ ಸುಮಾರು ೨೦೦ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವೃದ್ಧರನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಲಾಯಿತು ಮತ್ತು ಅವರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ನಿಯಂತ್ರಣ ಗುಂಪಿನಲ್ಲಿ ವ್ಯಕ್ತಿಗಳಿಗೆ ಔಷಧಿಗಳನ್ನು ಮಾತ್ರ ನೀಡಿ  ಪ್ರಾಯೋಗಿಕ ಗುಂಪಿನಲ್ಲಿ ವ್ಯಕ್ತಿಗಳಿಗೆ ಔಷಧಿಗಳ  ಜೊತೆಗೆ ರೆಕಾರ್ಡ್ ಮಾಡಿದ ಸಂಗೀತವನ್ನು ಪ್ರತಿದಿನ ಸಂಜೆ ಒಂದು ತಿಂಗಳ ಕಾಲದವರೆಗೆ ಕೇಳಿಸಲಾಯಿತು .ಸಂಗೀತವನ್ನು ಕೇಳುವ ಮೊದಲು ಮತ್ತು ನಂತರ ಅವರ ಮನಸ್ಥಿತಿಯನ್ನು ಸ್ವಯಂ ಮೌಲ್ಯಮಾಪನ ಮಾಡಲು ಸಹ ಹೇಳಲಾಗಿತ್ತು. ಸಂಶೋಧಕರು ಹೃದಯ ಬಡಿತ, ಉಸಿರಾಟದ ಪ್ರಮಾಣ ಮತ್ತು ಭಾಗವಹಿಸುವ ಎಲ್ಲರ ಸರಾಸರಿ ಅಪಧಮನಿಯ ಒತ್ತಡದಂತಹ ದೈಹಿಕ ನಿಯತಾಂಕಗಳನ್ನು ಆರಂಭದಲ್ಲಿ ಮತ್ತು ೩೦ ದಿನಗಳ ನಂತರ ಪರಿಕ್ಷೀಸಿದರು.

ಸಂಗೀತ ಚಿಕಿತ್ಸೆಗೆ ಒಳಗಾದ ವ್ಯಕ್ತಿಗಳು ಸಂಗೀತವನ್ನು ಕೇಳಿದ ನಂತರ ಆಹ್ಲಾದಕರ ಮನಸ್ಥಿತಿಯನ್ನು ಹೊಂದಿದ್ದರು ಎಂದು ಅಧ್ಯಯನವು ಕಂಡುಹಿಡಿದಿದೆ. ಒಂದು ತಿಂಗಳ ನಂತರ, ಪ್ರಾಯೋಗಿಕ ಗುಂಪು ಮತ್ತು ನಿಯಂತ್ರಣ ಗುಂಪಿನ ನಡುವೆ ಅಳತೆ ಮಾಡಲಾದ ಸರಾಸರಿ ಅಪಧಮನಿಯ ಒತ್ತಡಗಳಲ್ಲಿ (ಸುಮಾರು ೧೩ ಎಂ.ಎಂ ಹೆಚ್.‌ಜಿ) ಗಮನಾರ್ಹ ವ್ಯತ್ಯಾಸವನ್ನು ಗಮನಿಸಲಾಗಿದೆ. ಸಂಗೀತ ಕೇಳುವುದರಿಂದ ಪ್ಯಾರಾಸಿಂಪಥೆಟಿಕ್ ನರಮಂಡಲ ಸಕ್ರಿಯವಾಗಿ ಕೆಲಸಮಾಡಲು ನೆರವಾಗುತ್ತದೆ ಮತ್ತು ಅದು ವೇಗದ ಹೃದಯ ಬಡಿತವನ್ನು ಕಡಿಮೆ ಮಾಡಿ, ಹೃದಯ ಬಡಿತವನ್ನು ಸಹಜ ಸ್ಥಿತಿಗೆ ತರಲು ನೆರವಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

"ಸಂಗೀತ ಕೇಳುವುದರಿಂದ ನಮ್ಮ ದೇಹದಲ್ಲಿ ಎಂಡೋರ್ಫಿನ್ (ನೋವು ನಿವಾರಕ/ ಮನಸ್ಸಿಗೆ ಮುದ ನೀಡುವಂತಹ, ದೇಹದಲ್ಲಿ ಉತ್ಪತ್ತಿಯಾಗುವ ಒಂದು ರಸಾಯನ) ಬಿಡುಗಡೆ ಹೆಚ್ಚುತ್ತದೆ, ಆದರಿಂದ ಹೃದಯ ಬಡಿತ ಮತ್ತು ಅಪಧಮನಿಯ ಒತ್ತಡ ಕಡಿಮೆಯಾಗುತ್ತದೆ." ಎಂದು ಡಾ. ಗೀತಾಂಜಲಿ ಹೇಳುತ್ತಾರೆ.

ಸಂಶೋಧಕರು ಹೆಚ್ಚಿನ ವಿಶ್ಲೇಷಣೆಗಾಗಿ ಈ ಅಧ್ಯಯನವನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಿದ್ದಾರೆ.  ಪ್ರಸ್ತುತವಾಗಿ ಸಂಗೀತದ ಚಿಕ್ಸಿತೆಯಿಂದ ಮನಸ್ಸಿನ ಆತಂಕಗಳ ಹಾಗೂ ಆತಂಕ ಸಂಬಂಧಿತ ಕಾಯಿಲೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಅಧ್ಯಯನ ನೆಡೆಸುತಿದ್ದಾರೆ ಎಂದು, ಸತ್ಯಭಾಮ ಕಾಲೇಜ್ ಆಫ್ ನರ್ಸಿಂಗ್ ನ ಮುಖ್ಯಸ್ಥೆ  ಮತ್ತು ಈ ಸಂಶೋಧನಾ ತಂಡದಲ್ಲಿ ಒಬ್ಬರಾದ ಡಾ. ಎಲ್ ಲಕ್ಷ್ಮಿ ತಿಳಿಸಿದರು.

Kannada

Recent Stories

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...