ಬರೆದ ದಿನ

ನಮ್ಮ ಸುತ್ತಮುತ್ತ ಮಧುಮೇಹಿಗಳನ್ನು, ಅದರಲ್ಲೂ, ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳುವ ಮಧುಮೇಹಿಗಳನ್ನು ಕಂಡಿರುತ್ತೇವೆ. ಕ್ರಿಕೆಟಿಗ ವಾಸಿಮ್ ಅಕ್ರಮ್ ಬ್ಯಾಟ್ಸಮನ್ ಅನ್ನು ಬೆದರಿಸುವಷ್ಟು ವೇಗದ ಚೆಂಡು ಎಸೆಯುವ ಬೌಲರ್, ಜೊತೆಗೇ, ಇನ್ಸುಲಿನ್ ಅವಲಂಬಿತ ಮಧುಮೇಹಿ ಕೂಡ. 

ಈ ಇನ್ಸುಲಿನ್ ಎಂಬುದು ನಮ್ಮ ದೇಹದಲ್ಲಿರುವ ಮೇದೋಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಪ್ರೊಟೀನ್ ಆಗಿದೆ. ಸಾಮಾನ್ಯವಾಗಿ ಮಧುಮೇಹಿಗಳಲ್ಲಿ ಈ ಇನ್ಸುಲಿನ್ ನ ಪ್ರಮಾಣ ಕಡಿಮೆಯಿರುತ್ತದೆ; ಆಗ ಅದನ್ನು ಹೊರಗಿನಿಂದ ಮಾತ್ರೆ ಅಥವಾ ಚುಚ್ಚುಮದ್ದಿನ ರೂಪದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ಮುಂಚಿನ ದಿನಗಳಲ್ಲಿ, ಇಂತಹ ಇನ್ಸುಲಿನ್ ಚುಚ್ಚುಮದ್ದು ತಯಾರಿಸುವ ಸಲುವಾಗಿ, ಜಾನುವಾರುಗಳ ಮೇದೋಜೀರಕ ಗ್ರಂಥಿಯಿಂದ ಇನ್ಸುಲಿನ್ ಅನ್ನು ಹೊರತೆಗೆಯಲಾಗುತ್ತಿತ್ತು; ಇದು ಕಷ್ಟಕರ ಪ್ರಕ್ರಿಯೆಯಾಗಿದ್ದು, ಒಂದು ಜಾನುವಾರನ್ನು ಕೊಂದು, ಹೊರತೆಗೆದ ಅದರ ಮೇದೋಜೀರಕ ಗ್ರಂಥಿಯಿಂದ, ಕೇವಲ ಕೆಲವೇ ಮೈಕ್ರೋಗ್ರಾಂಗಳಷ್ಟು ಇನ್ಸುಲಿನ್ ಪಡೆಯಲು ಸಾಧ್ಯವಾಗುತ್ತಿತ್ತು.

ಇನ್ಸುಲಿನ್ಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ರಸಾಯನ ಶಾಸ್ತ್ರಜ್ಞರು, ಈ ಇನ್ಸುಲಿನ್ ಎಂಬ ಪ್ರೋಟೀನ್ ನ ಮೂಲಭೂತ ಗುಣಲಕ್ಷಣಗಳ ಮೇಲೆ ತಮ್ಮ ಗಮನ ಕೆಂದ್ರೀಕರಿಸಿದರು. ಆದರೆ ಈ ಪ್ರೋಟೀನ್ ಸರಳವಾಗಿರದೇ, ಹಲವಾರು ತಿರುವುಗಳು, ಬಿರುಕುಗಳು ಮತ್ತು ಬಾಗುವಿಕೆ ಹೊಂದಿರುವ, ರಚನಾತ್ಮಕವಾಗಿ ಕಂಗೆಡಿಸುವ ಅಣು. ಹಾಗಾಗಿ ಟೆಸ್ಟ್ ಟ್ಯೂಬ್ನಲ್ಲಿ ಇಂತಹ ಪ್ರೊಟೀನನ್ನು ರಚಿಸುವ ಕೆಲಸವು ಕಷ್ಟಸಾಧ್ಯ; ಏಕೆಂದರೆ, ಈ ರಚನಾ ಪ್ರಕಿಯೆಯ ಮೇಲ್ವಿಚಾರಣೆಯಲ್ಲಿ ಒಂದು ಸಣ್ಣ ಲೋಪದೋಷವಾದರೂ ಸಹ, ನಮಗೆ ಬೇಕಾದ ಪ್ರೋಟೀನ್ ನ ಬದಲು ಯಾವುದೋ ಕಾರ್ಯನಿರ್ವಹಿಸದ ಪ್ರೋಟೀನ್ ತಯಾರಾಗುತ್ತದೆ.

ಆದಾಗ್ಯೂ, ಪ್ರೋಟೀನ್ ನ ಅಂತಿಮ ರೂಪ ಎಷ್ಟೇ ಸಂಕೀರ್ಣವಾಗಿದ್ದರೂ, ಅದು ಮೂಲಭೂತವಾಗಿ ಅಮೈನೋ ಆಮ್ಲಗಳೆಂಬ ಘಟಕಗಳಿಂದಲೇ ತಯಾರಾಗಿರುತ್ತದೆ; ಹಲವು ಮಣಿಗಳು ಕೂಡಿ ತಯಾರಾದ ಸರದಂತೆ. ಹಾಗಾಗಿ, ಮಣಿಗಳನ್ನು ಪೋಣಿಸಿ ಸರವನ್ನು ರಚಿಸಿದಂತೆ, ಅಮೈನೋ ಆಮ್ಲಗಳನ್ನು ಒಂದಾದ ನಂತರ ಮತ್ತೊಂದರಂತೆ ಪೋಣಿಸಿ ಪ್ರೋಟೀನನ್ನು ಸುಲಭವಾಗಿ ರಚಿಸಬಹುದಲ್ಲವೇ? ಇಂತಹ ಸಿದ್ಧಾಂತವನ್ನು ರಸಾಯನಶಾಸ್ತ್ರಜ್ಞರು ಒಮ್ಮೆ ಪ್ರತಿಪಾದಿಸಿದ್ದರು. ಆದರೆ ಹೇಳುವುದೆಷ್ಟು ಸುಲಭವೋ ಮಾಡುವುದು ಅಷ್ಟು ಸುಲಭವೇ?  ಅನುಕ್ರಮವಾಗಿ ಅಮೈನೋ ಆಮ್ಲಗಳನ್ನು ಪೋಣಿಸುವ ಮೂಲಕ ಪ್ರೋಟೀನನ್ನು ರಚಿಸಲು ಪ್ರಾರಂಭಿಸಬಹುದು ಸರಿ; ಆದರೆ, ನಂತರದ ತಿರುವು ಮುರುವು ಬಾಗುವಿಕೆ ಬಿರುಕುಗಳನ್ನು ತರುವುದು ಎಲ್ಲಿಂದ? 

ಈ ಅಮೈನೋ ಆಮ್ಲ ಮಣಿಗಳಿಂದ ತಯಾರಾದ ಸಣ್ಣ ಸಣ್ಣ ಪ್ರೋಟೀನ್ ಸರಗಳನ್ನು ಒಂದು ಅತ್ಯಂತ ದೊಡ್ಡ ಪಾತ್ರೆಯಲ್ಲಿ ಇರಿಸಿದ್ದು, ಈ ನೂರು ಶತಕೋಟಿ ಸಂಖ್ಯೆಯಲ್ಲಿರುವ ಸರಗಳೆಲ್ಲವೂ ತೇಲುತ್ತಿವೆ ಎಂದು ಭಾವಿಸಿ. ಈ ನೂರು ಶತಕೋಟಿ ಪ್ರೋಟೀನ್ ಸರಗಳಲ್ಲಿ, ಕೇವಲ ಕೆಲವೇ ಶತಕೋಟಿ ಸರಗಳು ಸರಿಯಾದ ಕ್ರಮದಲ್ಲಿ ಸರಿಯಾದ ಗಾತ್ರದ ಅಮೈನೋ ಆಮ್ಲ ಮಣಿಗಳನ್ನು ಹೊಂದಿರುತ್ತವೆ ಎಂದಿಟ್ಟುಕೊಳ್ಳಿ. ಆಗ ನೀವು ಬಯಸುವ ಈ ಸರಿಯಾದ ಪ್ರೋಟೀನ್ ಸರವನ್ನು ನೀವು ಪಡೆಯುವುದು, ಗುರುತಿಸುವುದು ಹೇಗೆ? ಇಂತಹದ್ದೇ ಸಮಸ್ಯೆ ಇನ್ಸುಲಿನ್ ಪ್ರೋಟೀನ್ ನ ತಯಾರಿಕೆಯಲ್ಲೂ ತಲೆದೋರಿತು. ಆಗ  ಬ್ರೂಸ್ ಮೆರಿಫೀಲ್ಡ್ ಎಂಬ ವಿಜ್ಞಾನಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸಿ, ಅದೇ ಕಾರಣಕ್ಕೆ ೧೯೮೪ ರಲ್ಲಿ ನೋಬೆಲ್ ಪ್ರಶಸ್ತಿಗೂ ಭಾಜನರಾದರು.

ಅವರು ಒಂದು ಸರಳ ವಿಧಾನವನ್ನು ಅಳವಡಿಸಿಕೊಂಡರು; ಪ್ರೋಟೀನ್ ಸರದ ಒಂದು ತುದಿಯನ್ನು ಒಂದೆಡೆ ಬಿಗಿಯಾಗಿ ಸಿಕ್ಕಿಸಿ, ಅಮೈನೊ ಆಮ್ಲಗಳನ್ನು ಇನ್ನೊಂದು ತುದಿಯಿಂದ ಪೋಣಿಸಿದರು. ಅಂದರೆ, ಸರಕ್ಕೆ ಒಂದು ತುದಿಯಲ್ಲಿ ಕೊಕ್ಕೆ ಸೇರಿಸಿ, ಆ ಕೊಕ್ಕೆಯನ್ನು ಸ್ಥಿರವಾದ ಸ್ಥಳದಲ್ಲಿ ಬಿಗಿಯಾಗಿ ಸಿಕ್ಕಿಸಿ, ಇನ್ನೊಂದು ತುದಿಗೆ ಮಣಿಗಳನ್ನು ಪೋಣಿಸಿದಂತೆ. ಆಗ ಪ್ರೋಟೀನ್ ಸರಪಳಿ ಎಲ್ಲೂ ಕಳೆದುಹೋಗದೆ ಇದ್ದಲ್ಲೇ ಇದ್ದು, ಸುಲಭವಾಗಿ ಲಭ್ಯವಿರುತ್ತದೆ.

ಬ್ರೂಸ್ ಮೆರಿಫೀಲ್ಡ್ನ ಈ ಸಿದ್ಧಾಂತವು ಪ್ರೋಟೀನ್ಗಳ ಬಹುವಿಧದ ಇಳುವರಿಯನ್ನು ಹೆಚ್ಚಿಸುವ ಮೂಲಕ ಪೆಪ್ಟೈಡ್ ಸಂಶ್ಲೇಷಣೆಯನ್ನೂ ವಿಕಸನಗೊಳಿಸಿತು. ಈ ವಿಧಾನದಲ್ಲಿ, ಬೇಡದ ಪ್ರೋಟೀನ್ಗಳ ನಡುವಿನಿಂದ ಬೇಕಾದ ಪ್ರೋಟೀನನ್ನು ಪ್ರತ್ಯೇಕಿಸುವ ಮತ್ತು ಶುದ್ಧೀಕರಿಸುವ ಆವಶ್ಯಕತೆ ಇಲ್ಲದ ಕಾರಣ, ಪ್ರೋಟೀನ್ ತಯಾರಿಕಾ ವೆಚ್ಚವನ್ನು ಕಡಿಮೆಗೊಳಿಸಿತು. ಅಷ್ಟೇ ಅಲ್ಲದೇ, ಪ್ರಾಣಿಗಳ ಮೇಲೆ ಇನ್ಸುಲಿನ್ಗಾಗಿ ಅವಲಂಬಿತರಾಗುವುದನ್ನು ತಪ್ಪಿಸಿತು. ಈಗ ಇದೇ ಸಿದ್ಧಾಂತದ ಆಧಾರದ ಮೇಲೆ, ರಾಸಾಯನಿಕವಾಗಿ ದೊಡ್ಡ ಪ್ರಮಾಣದಲ್ಲಿ ಇನ್ಸುಲಿನ್ ಮತ್ತಿತರ ಪ್ರೋಟೀನ್ಗಳನ್ನು ಸಂಶ್ಲೇಷಿಸಲಾಗುತ್ತಿದೆ.

Recent Stories

ಲೇಖಕರು
Research Matters
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
Research Matters
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Research Matters
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
Research Matters
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Research Matters
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
Research Matters
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
Research Matters
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
Research Matters
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
Research Matters
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
Research Matters
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...