ಬೆಂಗಳೂರು
ಪುರುಷ ಅಗಾಮಗಳ ಮಿನುಗುವ ಬಣ್ಣಗಳು ಮತ್ತು ತಲೆಬುರುಡೆಯನ್ನು ಅಲ್ಲಾಡಿಸುವುದರ ಹಿಂದಿರುವ ಅರ್ಥ

ದಕ್ಷಿಣ ಭಾರತದ ಗುಡ್ಡಗಾಡು ಪ್ರದೇಶದಲ್ಲಿ ಅಥವಾ ನಗರದ ಹೊರವಲಯದಲ್ಲಿ ನೀವು ನಡೆದಾಡುವಾಗ, ಬಿಸಿಲು ಕಾಯಿಸಿಕೊಳ್ಳುತ್ತಿರುವ ಪ್ರಕಾಶಮಾನವಾದ ಬಣ್ಣಗಳಿಂದ ಮಿನುಗುವ ಹಲ್ಲಿಯನ್ನು ಖಂಡಿತ ಕಾಣಬಹುದು. ವೈಜ್ಞಾನಿಕವಾಗಿ, ಪೆನಿನ್ಸುಲಾರ್ ರಾಕ್ ಅಗಾಮ (ಸಾಮ್ಮೊಫಿಲಸ್ ಡೋರ್ಸಲಿಸ್) ಎಂದು ಕರೆಯಲ್ಪಡುವ, ಆಕರ್ಷಕ ಬಣ್ಣಗಳನ್ನು ಹೊಂದಿರುವ ಈ ಪುರುಷ ಅಗಾಮಗಳು, ಕೆಲವೊಮ್ಮೆ ತಮ್ಮ ಅಗಾಧವಾದ ಕೆಂಪು, ಗಾಢ ಕಿತ್ತಳೆ ಬಣ್ಣ ಅಥವಾ ತಿಳಿ ಹಳದಿ ಬಣ್ಣಗಳನ್ನು ಕೆಲವೇ ಕ್ಷಣಗಳೊಳಗೆ ಬದಲಾಯಿಸುತ್ತವೆ ಮತ್ತು ಇವುಗಳು ಕಲ್ಲು ಬಂಡೆಗಳ ಕವಲುಗಳಲ್ಲಿ ಕುಳಿತು ತಮ್ಮ ತಲೆಯನ್ನು ಅಲ್ಲಾಡಿಸುತ್ತಿರುತ್ತವೆ. ಆದರೆ, ಇವುಗಳ ತುಡಿಯುತ್ತಿರುವ ನೋಟ ಮತ್ತು ನಿರ್ದೇಶಿಸಿದಂತೆ ಕಂಪಿಸುವುದರ ಹಿಂದೆ ಏನಡಗಿದೆ? ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಶ್ರೀಕಾಂತ್ ದೇವಧರ್ ಮತ್ತು ಕವಿತಾ ಈಶ್ವರನ್ ರವರು, ಅತ್ಯಂತ ಆಕರ್ಷಕವಾದ ಪುರುಷ ಅಗಾಮಗಳು (ಹಲ್ಲಿಗಳು) ಪ್ರದರ್ಶಿಸುವ ವಿವಿಧ ವರ್ತನೆಯ ಸಂಕೇತಗಳ ಅರ್ಥವನ್ನು ಡಿಕೋಡ್ ಮಾಡಲು ತಮ್ಮ ಹೊಸ ಅಧ್ಯಯನದಲ್ಲಿ ಪ್ರಯತ್ನಿಸಿದ್ದಾರೆ.

"ಕಾಡಿನಲ್ಲಿ ಅಗಾಮಗಳನ್ನು ವೀಕ್ಷಿಸಲು, ಅವಲೋಕಿಸಲು ಮತ್ತು ಹಿಂಬಾಲಿಸಲು ಸುಲಭ ಸಾಧ್ಯ. ಇವುಗಳ ಜೀವಿತಾವಧಿ ಒಂದು ವರ್ಷ ಮಾತ್ರ; ಆದ್ದರಿಂದ ನಾವು ಅವುಗಳ ಜೀವಿತಾವಧಿಯ ಮುಖ್ಯ ಹಂತಗಳನೆಲ್ಲಾ ತಿಳಿಯಬಹುದು ಮತ್ತು ಕೆಲವು ವರ್ಷಗಳಲ್ಲಿ ಅವುಗಳ ಹಲವು ತಲೆಮಾರುಗಳನ್ನು ಅಧ್ಯಯನ ಮಾಡಬಹುದು. ಆದರೆ, ಬಹಳ ಇತ್ತೀಚೆಗೆ ನಾವು ಅವುಗಳನ್ನು ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ್ದೇವೆ" ಎಂದು ಈ ಅಧ್ಯಯನದ ಪ್ರಮುಖ ಲೇಖಕರಾದ ಶ್ರೀಕಾಂತ್ ದೇವಧರ್ ರವರು, ಈ ಆಕರ್ಷಕ ಅಗಾಮಗಳನ್ನು ತಮ್ಮ ಅಧ್ಯಯನಕ್ಕಾಗಿ ಯಾಕೆ ಆರಿಸಿಕೊಂಡರು ಎಂಬುದರ ಕುರಿತು ಹೇಳುತ್ತಾರೆ.

ಈ ಅಧ್ಯಯನವು ಇತ್ತೀಚೆಗೆ "ಫ್ರಾಂಟಿಯರ್ಸ್ ಇನ್ ಎಕಾಲಜಿ ಎಂಡ್ ಎವಲ್ಯೂಷನ್" ಎಂಬ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದೆ ಮತ್ತು ಈ ಅಧ್ಯಯನಕ್ಕಾಗಿ ಧನಸಹಾಯವನ್ನು ಐಐಎಸ್ಸಿ-ಡಿಬಿಟಿ ಸಹಭಾಗಿತ್ವದ ಕಾರ್ಯಕ್ರಮ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಮಾನವ ಸಂಪನ್ಮೂಲ ಅಭಿವೃಧ್ದಿ ಸಚಿವಾಲಯಗಳಿಂದ ಪಡೆದುಕೊಂಡಿದೆ.

ಸಂಶೋಧಕರು ಈ ಕುರಿತು ತಮ್ಮ ಅಧ್ಯಯನವನ್ನು, ಆಂಧ್ರಪ್ರದೇಶದ ರಿಷಿ ಕಣಿವೆಯಲ್ಲಿ, 41 ಪುರುಷ ಅಗಾಮಗಳನ್ನು ಅವುಗಳ ಜೀವಿತಾವಧಿಯಲ್ಲಿ ಹಿಂಬಾಲಿಸಿ ಕೈಗೊಂಡಿದ್ದಾರೆ. ವಿಜ್ಞಾನಿಗಳಿಗೆ ಅವುಗಳು ಮತ್ತೆ ಮತ್ತೆ ಕಾಣಿಸಿಕೊಂಡಿದ್ದರೂ ಸಹ ಅವುಗಳ ವರ್ತನೆ ಬಗ್ಗೆ ಹೆಚ್ಚು ತಿಳಿದಿಲ್ಲ. ತಮ್ಮ ಅಧ್ಯಯನದ ಮೊದಲ ಹಂತವಾಗಿ, ಸಂಶೋಧಕರು ಈ ಅಗಾಮಗಳ ತೋರಿಕೆಯ ವರ್ತನೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು.

"ಪುರುಷ ಅಗಾಮಗಳು ಒಂದೇ ಸಮಯದಲ್ಲಿ, ತಲೆಯನ್ನು ಅಲ್ಲಾಡಿಸುತ್ತ ಮತ್ತು ಕಿತ್ತಳೆ ಬಣ್ಣದಿಂದ ಮಿನುಗುತ್ತ, ಬಹುವರ್ತನೆಗಳನ್ನು ತೋರ್ಪಡಿಸುವುದನ್ನು ನಾವು ಶೀಘ್ರದಲ್ಲೇ ಕಂಡುಹಿಡಿದಿದ್ದೇವೆ " ಎಂದು ಶ್ರೀಕಾಂತ್ ದೇವಧರ್ ರವರು ಸ್ಮರಿಸಿಕೊಳ್ಳುತ್ತಾರೆ.

ಅಗಾಮಗಳ ಬಹುವರ್ತನೆಯ ಹಿಂದಿನ ಕಾರಣ ಮತ್ತು ಇವುಗಳು ನೀಡುವ ಸಂಜ್ಞೆಗಳು ಯಾರಿಗಾಗಿ ಎಂಬುದನ್ನು ಸಂಶೋಧಕರು ವಿವರವಾಗಿ ಪರೀಕ್ಷಿಸಿದಾಗ ಕಂಡುಬಂದ ಪ್ರಾಥಮಿಕ ಕಾರಣವೆಂದರೆ, ಅವುಗಳು ಹೆಣ್ಣು ಹಲ್ಲಿಗಳನ್ನು ಪ್ರೀತಿಗಾಗಿ ಹುಡುಕುವ ಮತ್ತು ಮೆಚ್ಚಿಸುವ ಪರಿ ಎಂದು ತಿಳಿದಿದೆ.

“ಇದೊಂಥರಾ ಕಾರು ಮತ್ತು ಬಂಗಲೆಗಳನ್ನು ಹೊಂದಿರುವವರು, ತಾವು ಶ್ರೀಮಂತರು ಮತ್ತು ಆರೋಗ್ಯವಂತರೆಂದು ಇತರರಿಗೆ ತ್ವರಿತವಾಗಿ ಪ್ರಚಾರ ನೀಡಿದಂತೆ”, ಎಂದು ಹಾಸ್ಯ ಮಾಡುತ್ತಾರೆ  ಶ್ರೀಕಾಂತ್ ದೇವಧರ್ ರವರು.
ಪುರುಷ ಅಗಾಮಗಳು ತನ್ನ ಸುತ್ತಮುತ್ತ ಹೆಣ್ಣು ಅಗಾಮಗಳು ಇರುವಾಗ, ತೋರುವ ಸಂಜ್ಞೆಗಳು ಹೆಚ್ಚು ಪುನರಾವರ್ತನೆಗೊಂಡಿರುವುದನ್ನು ಇವರು ಗಮನಿಸಿದ್ದಾರೆ.

“ಬಹು ಸಂಜ್ಞೆಗಳನ್ನು ನೀಡುವ ಹಲ್ಲಿಗಳು ಹೆಚ್ಚಿನ ಗುಣಮಟ್ಟದವೆಂದು ಸೂಚಿಸುತ್ತವೆ; ಇದು ಪ್ರಾಯಶಃ ತಾವು ಪರಿಪೂರ್ಣವೆಂದು ತಿಳಿಸುವ ಪ್ರಯತ್ನ” ಎಂದು ಶ್ರೀಕಾಂತ್ ದೇವಧರ್ ಹೇಳುತ್ತಾರೆ.

ಹೆಣ್ಣು ಅಗಾಮಗಳನ್ನು ಮೆಚ್ಚಿಸುವುದಷ್ಟೇ ಅಲ್ಲದೇ, ಇವುಗಳ ಬಣ್ಣಗಳಿಗೆ ಮತ್ತಷ್ಟು ಕಾರಣಗಳಿವೆ. ತಮ್ಮ ಸಮೀಪದಲ್ಲಿ ಪ್ರತಿಸ್ಪರ್ಧಿ ಪುರುಷ ಅಗಾಮಗಳಿದ್ದರೆ, ಇವುಗಳು ತಮ್ಮ ಬಣ್ಣವನ್ನು ತಿಳಿ ಹಳದಿ ಬಣ್ಣಕ್ಕೆ ಬದಲಾಯಿಸುತ್ತವೆಂದು ಸಂಶೋಧಕರು ಕೆಲವು ಪುರಾವೆಗಳಿಂದ ಕಂಡುಕೊಂಡಿದ್ದಾರೆ. ಮತ್ತೊಂದು ಪುರುಷ ಅಗಾಮವೇನಾದರೂ ಇವುಗಳೊಂದಿಗೆ ಹೋರಾಟಕ್ಕಿಳಿದರೆ, ಹೋರಾಟದ ಬಣ್ಣದ ಸಂಕೇತವೆನಿಸಿದ ಕೆಂಪು ಮತ್ತು ಹಳದಿ ಮಿಶ್ರಿತ ಬಣ್ಣವನ್ನು ಧರಿಸುತ್ತವೆ.

ಈ ಬಣ್ಣಗಳು, ಹಲ್ಲಿಗಳ ಜೀವವನ್ನು ರಕ್ಷಿಸಲು ಸಹ ಸಹಾಯ ಮಾಡುತ್ತವೆಂದು ಅಧ್ಯಯನದಲ್ಲಿ ಕಂಡುಬಂದಿದೆ. ಪರಭಕ್ಷಕಗಳಾದ ಹಿರಿಯ ಹಲ್ಲಿಗಳು ಅಥವಾ ಭಾರತದ ನರಿಗಳ ಉಪಸ್ಥಿತಿಯಲ್ಲಿ, ಅವುಗಳಿಂದ ಅನಗತ್ಯ ಗಮನವನ್ನು ಸೆಳೆಯಬಾರದೆಂದು, ಅಗಾಮಗಳು ತಮ್ಮ ಬಣ್ಣವನ್ನು ಬಿಳಿಯ ಬಣ್ಣಕ್ಕೆ ತ್ವರಿತವಾಗಿ ಬದಲಾಯಿಸುತ್ತವೆ. ಅಗಾಮಗಳು ತಮ್ಮ ವಿವಿಧ ವರ್ತನೆಗಳಿಂದ, ಭಿನ್ನವಾದ ಸಂಜ್ಞೆಗಳಿಂದ, ಬಗೆಬಗೆಯ ಸ್ವೀಕೃತಿಗಾರರಿಗೆ, ಬೇರೆ ಬೇರೆ ಸ್ವರೂಪದಲ್ಲಿ ಸಂಕೇತಿಸಲು ಸಾಧ್ಯವಿರುವುದರಿಂದ, ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

ಸಂಶೋಧಕರು ಪ್ರತಿಯೊಂದು ಅಗಾಮದ ಸಂತಾನೋತ್ಪತ್ತಿ ಅವಧಿಯನ್ನು ಪರಿಶೀಲಿಸುತ್ತಾ ಹೋದಂತೆ, ಈ ಅಗಾಮಗಳು ನೀಡುವ ಬಹುಸಂಜ್ಞೆಗಳು, ಹೆಚ್ಚು ಸಂಗಾತಿಗಳನ್ನು ಹೊಂದಲು ಮತ್ತು ಹೆಚ್ಚು ಶಿಶುಗಳನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತಿರುವುದರಿಂದ – ಇದು ಅವುಗಳ ಅರ್ಹತೆಯ ಅಳತೆಗೋಲಾಗಿದೆ ಎಂದು ತಿಳಿದುಬಂದಿದೆ. ಸಂತಾನೋತ್ಪತ್ತಿಯ ಅವಧಿಯು, ಸಂತಾನೋತ್ಪತ್ತಿಯ ಕಾಲದಲ್ಲಿ ಅಂದರೆ ಸಾಮಾನ್ಯವಾಗಿ ಮೇ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಬಂಡೆಗಳ ಮೇಲೆ ಕುಳಿತುಕೊಳ್ಳುವ ಅವಧಿಯನ್ನು ಒಳಗೊಂಡಿದೆ. ಒಂದು ದಿನದಲ್ಲಿ ಪ್ರತಿ ಪುರುಷ ಅಗಾಮವು ಎಷ್ಟು ಹೆಣ್ಣು ಅಗಾಮಗಳನ್ನು ಸಂಧಿಸಬಹುದೆಂಬುದನ್ನು ಪರಿಶೀಲಿಸಿದ್ದಾರೆ. ಇವುಗಳು ಕಲ್ಲು ಬಂಡೆಯ ಮೇಲೆ ಹೆಚ್ಚು ಸಮಯ ಕಳೆದಷ್ಟೂ, ಹೆಚ್ಚು ಸಂಖ್ಯೆಯ ಮಹಿಳೆ ಅಗಾಮಗಳನ್ನು ಸಂಧಿಸುತ್ತವೆ ಮತ್ತು ಹೆಚ್ಚು ಸಂತಾನವನ್ನು ಪಡೆಯುತ್ತವೆ. ಸಂಶೋಧಕರು ಗಮನಿಸಿರುವಂತೆ ಹೆಚ್ಚು ಸಂಜ್ಞೆಗಳನ್ನು ನೀಡುವ ಮತ್ತು ಹೆಚ್ಚು ಸಂತಾನೋತ್ಪತ್ತಿಯ ಅವಧಿಯನ್ನು ಹೊಂದಿರುವ ಅಗಾಮಗಳು, ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರಬಹುದು.

ಸಂಶೋಧನೆಯಲ್ಲಿನ ಒಂದು ಫಲಿತಾಂಶವು ಸಂಶೋಧಕರಿಗೆ ನೀಡಿದ ಅಚ್ಚರಿಯೇನೆಂದರೆ, ದೊಡ್ಡ ಹಲ್ಲಿಗಳಿಗಿಂತ ಸಣ್ಣ ಹಲ್ಲಿಗಳು ತಮ್ಮ ಆರಂಭಿಕ ಸಂತಾನೋತ್ಪತ್ತಿಯ ಅವಧಿಯಲ್ಲಿ, ಹೆಚ್ಚಿನ ಹೆಣ್ಣು ಹಲ್ಲಿಗಳಿಗೆ ಜಾಗವನ್ನೊದಗಿಸಬಲ್ಲವು! ಯೌವ್ವನಾವಸ್ಥೆಯಲ್ಲಿರುವ ಸಣ್ಣ ಪುರುಷ ಅಗಾಮಗಳು, ವಯಸ್ಕ ಅಗಾಮಗಳಿಗಿಂತ ಸುಲಭವಾಗಿ ಜಾಗವನ್ನು ಕಾಪಾಡಿಕೊಳ್ಳುವವು ಮತ್ತು ಹೆಚ್ಚು ಬಲಾಢ್ಯರು ಹಾಗೂ ಸಮರ್ಥರಾಗಿರಬಹುದು.

ಈ ಅಧ್ಯಯನವು ಅಗಾಮಗಳ ಮೇಲೆ ನಡೆಯುತ್ತಿರುವ ಧೀರ್ಘಕಾಲೀನ ಯೋಜನೆಯ ಒಂದು ಭಾಗವಾಗಿದ್ದು, ಇದು ಭಾರತದಲ್ಲಿ ಈ ತರಹದ ಅಧ್ಯಯನವನ್ನು ಕೈಗೊಳ್ಳುವ ಕೆಲವೇ ಕೆಲವು ರೀತಿಗಳಲ್ಲಿ ಒಂದಾಗಿದೆ. ಕಾಲಾನುಕ್ರಮದಲ್ಲಿ ಕಾಡು ಪ್ರಾಣಿಗಳನ್ನು ವ್ಯವಸ್ಥಿತವಾಗಿ ಅಧ್ಯಯನ ನಡೆಸುವುದರಿಂದ, ಗಂಡು ಪ್ರಾಣಿಗಳು ಎಷ್ಟು ಸಮರ್ಥರು ಹಾಗೂ ತಮ್ಮ ನಡವಳಿಕೆಗಳಿಂದ ಪರಸ್ಪರ ಹೇಗೆ ಪ್ರಭಾವಿತವಾಗಿರುತ್ತವೆ ಎಂದು ಅರ್ಥ ಮಾಡಿಕೊಳ್ಳಲು ಸಹಕಾರಿ; ಈ ಅಧ್ಯಯನಗಳು, ನೈಸರ್ಗಿಕ ಜಗತ್ತಿನಲ್ಲಿ ಲೈಂಗಿಕ ಆಯ್ಕೆಯ ಒತ್ತಡಗಳು ಹೇಗೆ ಹೊರಹೊಮ್ಮುತ್ತವೆ ಎಂಬ ಅಪರೂಪದ ಒಳನೋಟವನ್ನು ನೀಡುತ್ತವೆ.

[ವೀಡಿಯೊ: ಶ್ರೀಕಾಂತ್ ದಿಯೋಧರ್]

Kannada

Recent Stories

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...