Bengaluru
ಪಶ್ಚಿಮ ಘಟ್ಟಗಳಲ್ಲಿ ಮೂರು ಹೊಸ ಡ್ಯಾಂಸೆಲ್‌ಫ್ಲೈ  ಪ್ರಭೇದಗಳ ಅನ್ವೇಷಣೆ

(ಅ) ಶೋಲ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಶೋಲೈ) [ಚಿತ್ರ ಕೃಪೆ: ಕ. ಅ. ಸುಬ್ರಮಣಿಯನ್]; (ಬೀ) ಬ್ಲೂ-ಲೆಗ್ಗಡ್ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಸಯನೋಫೆಮೊರ) [ಚಿತ್ರ ಕೃಪೆ: ಶಂತನು ಜೋಶಿ];  (ಸೀ) ಮಿರಿಸ್ಟಿಕ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಮಿರಿಸ್ಟಿಕೇನ್ಸಿಸ್) [ಚಿತ್ರ ಕೃಪೆ: ಶಂತನು ಜೋಶಿ]

Tಪಶ್ಚಿಮ ಘಟ್ಟದ ಒರಟಾದ ಏರಿಳಿತದ ಭೂಪ್ರದೇಶವು ಜೀವಿಗಳಿಂದ ತುಂಬಿಕೊಂಡಿದೆ. ಇಲ್ಲಿನ ಅನೇಕ ಜಲಮೂಲಗಳಾದ ಕೆರೆಗಳು, ತೊರೆಗಳು ಮತ್ತು ನದಿಗಳು ವಿಜ್ಞಾನಿಗಳ ಕಣ್ಣಿಗೆ ಸೆರೆಸಿಕ್ಕಿರುವ ಅದೃಷ್ಟದ ಪೆಟ್ಟಿಯ ಕೀಲಿ. ಇದರಲ್ಲಿ ಇನ್ನೂ ಪತ್ತೆಯಾಗದ ಹಲವಾರು ಪ್ರಾಣಿ ಪಕ್ಷಿಗಳು ಮತ್ತು ಅದರ ಎಷ್ಟೋ ಪ್ರಭೇದಗಳು ಅಡಗಿವೆ. ಜಾಗತಿಕವಾಗಿ ನೋಡಿದರೆ, ಪ್ರಸ್ತುತ ವಿವರಿಸಿದ ಪ್ರಭೇದಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕೀಟಗಳನ್ನು ಪತ್ತೆ ಮಾಡುವುದು ಬಾಕಿ ಇದೆಯೆಂದು ಅಧ್ಯಯನ ತಿಳಿಸುತ್ತದೆ. ಇತ್ತೀಚೆಗೆ ಪಶ್ಚಿಮ ಘಟ್ಟದ ಜಲಮೂಲಗಳ ಬಳಿ ಕಂಡುಹಿಡಿದ ಮೂರು ಹೊಸ ಪ್ರಭೇದಗಳ ಸಂಶೋಧನೆಯು ಕೀಟಗಳ ಪಟ್ಟಿಗೆ ಸೇರಿಸಲಾಗಿದೆ.

ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸೆಸ್ (ಎನ್ ಸಿ ಬಿ ಎಸ್) ಮತ್ತು ಚೆನ್ನೈನ ಝೂಲೋಜಿಕಲ್ ಸರ್ವೇ ಆಫ್ ಇಂಡಿಯಾದ ಸಂಶೋಧಕರ ಸಂಶೋಧನೆಯು ಪಶ್ಚಿಮ ಘಟ್ಟದ ಪ್ರೊಟೊಸ್ಟಿಕ್ಟ ಕುಲದ ಪ್ರಭೇದಗಳ ಸಂಖ್ಯೆಯನ್ನು ಒಂಬತ್ತರಿಂದ ಹನ್ನೆರಡಕ್ಕೆ ಹೆಚ್ಚಿಸಿದೆ. ಹೊಸದಾಗಿ ಕಂಡುಹಿಡಿದಿರುವ ಪ್ರಭೇದಗಳ ಹೆಸರು ಹೀಗಿವೆ, ಬ್ಲೂ-ಲೆಗ್ಗಡ್ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಸಯನೋಫೆಮೊರ), ಮಿರಿಸ್ಟಿಕ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಮಿರಿಸ್ಟಿಕೇನ್ಸಿಸ್), ಹಾಗೂ ಶೋಲ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಶೋಲೈ). ಈ ಅಧ್ಯಯನವನ್ನು ಭಾರತ  ಸರ್ಕಾರದ ಅಟಾಮಿಕ್ ಎನರ್ಜಿ ವಿಭಾಗ, ಮತ್ತು ದಿ ರುಫ್ಫೊರ್ಡ್ ಸ್ಮಾಲ್ ಗ್ರಾಂಟ್ ಸಂಸ್ಥೆಯು ಭಾಗಶಃವಾಗಿ ಬೆಂಬಲಿಸಿವೆ. ಈ ಲೇಖನವನ್ನು ಝೂಟ್ಯಾಕ್ಸಾ  ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

"ನಾನು ಉತ್ತರ ಕರ್ನಾಟಕದಲ್ಲಿ ಕೆಲವು ಸಮೀಕ್ಷೆಗಳನ್ನು ನಡೆಸುತ್ತಿದ್ದಾಗ ಈ ಕೀಟಗಳ ಸಂಶೋಧನೆಯ ಬಗ್ಗೆ ಯೋಚನೆ ಹುಟ್ಟಿತು" ಎನ್ನುತ್ತಾರೆ ಎನ್ ಸಿ ಬಿ ಎಸ್ ನ ಸಂಶೋಧಕರಾದ ಶಂತನು ಜೋಶಿ. ಪಶ್ಚಿಮ ಘಟ್ಟದ ಮಿರಿಸ್ಟಿಕ ಸ್ವಾಂಪ್ಸ್ ಎಂಬ ಕೆಸರಿನ ಅನನ್ಯ ಸ್ಥಳೀಯ ಅಂದರೆ ಎಂಡೆಮಿಕ್ ಅವಾಸಸ್ಥಳದಲ್ಲಿ ನಾನು ಈ ಬಗೆಯ ಅಸಾಮಾನ್ಯ ಕೀಟಗಳನ್ನು ನೋಡಿದೆ. ಅದೆಷ್ತು ಸಣ್ಣ ಘಾತ್ರದ ಕೀಟವೆಂದರೆ ಅವು ಗಿಡಗಳ ಬೇರುಗಳ ಮಧ್ಯೆ ಹಾರಾಡುತ್ತ ಆಟವಾಡುತಿದ್ದವು" ಎಂದು ವಿವರಿಸುತ್ತಾರೆ.

ಇತರೆ ಡ್ಯಾಂಸೆಲ್‌ ಫ್ಲೈಗಳ ಅಂದರೆ ಕನ್ನೆ ನೊಣವೆಂದೂ ಕರೆಯಲ್ಪಡುವ ಕೀಟಗಳ ಲಭ್ಯವಿರುವ ವಿವರಣೆಗಳೊಂದಿಗೆ ಹೋಲಿಸಿದಾಗ , ಈ ಪ್ರಭೇದವು ಹೊಸದಾಗಿ ಕಂಡಿದ್ದು, ಪ್ರೊಟೊಸ್ಟಿಕ್ಟ ಎಂಬ ಕುಲಕ್ಕೆ ಸೇರಿದ್ದೆಂದು ಅರಿತರು. ಈ ಸಣ್ಣಗೆ ಹಾಗೂ ತೆಳ್ಳಗಿರುವ ಡ್ಯಾಂಸೆಲ್ ಫ್ಲೈಗಳನ್ನು ಗಮನಿಸಲು ಮತ್ತು ಅಧ್ಯಯನ ಮಾಡಲು ಸ್ವಲ್ಪ ಕಷ್ಟವೇ.

ಭಾರತದಲ್ಲಿ, ಪ್ರೊಟಿಸ್ಟಿಕ್ಟ ಕುಲಕ್ಕೆ ಸೇರಿದ ಡ್ಯಾಂಸೆಲ್‌ ಫ್ಲೈ ಪ್ರಭೇದವು ಪಶ್ಚಿಮ ಘಟ್ಟ ಮತ್ತು ಪೂರ್ವ ಹಿಮಾಲಯದಲ್ಲಿ ಮಾತ್ರ ಕಂಡುಬಂದಿದೆ. ಕಳೆದ ದಶಕದಲ್ಲಿ, ಜಗತ್ತಿನಾದ್ಯಾಂತ ವಿಜ್ಞಾನಿಗಳು ಪಶ್ಚಿಮ ಘಟ್ಟದಂತಹ ಕೆಲವು ಹಾಟ್ಸ್ಪಾಟ್ ಅಂದರೆ, ಜೀವವೈವಿಧ್ಯ ಹೆಚ್ಚಿರುವ ಜಾಗ ಅಥವಾ ಸ್ಥಳೀಯತೆಯ ಕೇಂದ್ರವಾದ ಸ್ಥಳಗಳನ್ನು ಕಂಡುಹಿಡಿದಿದ್ದಾರೆ. ಈ ಜಾಗಗಳು, ಹೊಸ ಪ್ರಭೇದಗಳ ವಿಕಾಸಕ್ಕಾಗಿ ಹೇಳಿಮಾಡಿಸಿದಂತಿವೆ.

ಸಂಶೋಧಕರು ಡ್ಯಾಂಸೆಲ್‌ಫ್ಲೈಗಳ ಚಿತ್ರ ಸೆರೆಹಿಡಿಯಲು ಮತ್ತು ಅವುಗಳನ್ನು ಸಂಗ್ರಹಿಸಲು ಕರ್ನಾಟಕದ ಪಶ್ಚಿಮ ಘಟ್ಟದ ಬೇರೆ  ಬೇರೆ ಸ್ಥಳಗಳಿಗೆ, ತಮಿಳುನಾಡು ಮತ್ತು ಕೇರಳದಲ್ಲೂ ಹುಡುಕಾಡಿದರು. ಆಶ್ಚರ್ಯವೆಂದರೆ, ಅವರು ಸಂಗ್ರಹಿಸಿದ ಡ್ಯಾಂಸೆಲ್‌ಫ್ಲೈಗಳಲ್ಲಿ ಎರಡು ಪ್ರಭೇದವು ಪ್ರೊಟಿಸ್ಟಿಕ್ಟ ಕುಲಕ್ಕೆ ಹೊಸದಾಗಿದ್ದು ಇವುಗಳನ್ನು ಯಾರೂ ವಿವರಿಸಿಲ್ಲ.  ಬ್ಲೂ ಲೆಗ್ ರೀಡ್ಟೇಲ್ ಪ್ರಭೇದವು ಕೇರಳದ ಶೆಂದೂರ್ನಿ ವನ್ಯಜೀವಿ ಅಭಯಾರಣ್ಯ ಮತ್ತು ತಮಿಳುನಾಡಿನ ಕಾಲಕ್ಕಾಡ್ ಮುಂಡಂತುರೈ ಹುಲಿ ಮೀಸಲು ಪ್ರದೇಶದ ಒದ್ದೆಯಾದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬಂದಿದೆ. ಶೋಲಾ ರೀಡ್‌ಟೇಲ್ ತಮಿಳುನಾಡಿನ ಮೇಘಮಾಲೈ ವನ್ಯಜೀವಿ ಅಭಯಾರಣ್ಯದಲ್ಲಿ ಕಂಡುಬಂದಿದೆ. ಈ ಜಾತಿಗಳ ಆವಾಸಸ್ಥಾನವಾದ ಶೋಲಾಸ್ (ಮೊಂಟೇನ್ ನಿತ್ಯಹರಿದ್ವರ್ಣ ಕಾಡುಗಳು) ಹೆಸರನ್ನೇ ಇಡಲಾಗಿದೆ.

ಮೂರು ಹೊಸದಾಗಿ ಕಂಡು ಹಿಡಿದ ಡ್ಯಾಂಸೆಲ್‌ಫ್ಲೈ, ಅದರ ಅನ್ವೇಷಣೆಯ ಸ್ಠಳದ ನಕ್ಷೆ, ಮತ್ತು ಸಂಶೋಧಕರ ಭಾವಚಿತ್ರ (ಚಿತ್ರ: ಶಂತನು ಜೋಶಿ, ದತ್ತಪ್ರಸಾದ್ ಸಾವಂತ್)

"ಪ್ರಭೇದಗಳ ನಡುವಿನ ನಿಕಟ ಹೋಲಿಕೆಯಿಂದಾಗಿ ಅವುಗಳನ್ನು ಪ್ರತ್ಯೇಕವಾಗಿ ಗುರುತಿಸುವುದು ಕಠಿಣವಾಗಿದೆ. ಬಹುಶಃ ಹೋಲಿಕೆಯನ್ನು ಗುರುತಿಸುವಾಗ ನಾವು ವಿವಿಧ ಪ್ರದೇಶಗಳನ್ನು ಸೂಕ್ಷ್ಮವಾಗಿ ಸಮೀಕ್ಷೆ ಮಾಡಿದೆವು. ಆಗ, ಅನೇಕ ಪ್ರಭೇದಗಳನ್ನು ಅನ್ವೇಷಿಸಿದ್ದೇವೆ" ಎನ್ನುತ್ತಾರೆ ಶಂತನು. “ಹೊಸ ಪ್ರಭೇದಗಳನ್ನು ಕಂಡುಹಿಡಿಯುವುದರಿಂದ ಅವುಗಳ ವಾಸಸ್ಥಳ ಮತ್ತು ಅಭ್ಯಾಸವನ್ನು ಅಧ್ಯಯನ ಮಾಡಲು, ಅವುಗಳ ಭೌಗೋಳಿಕ ವಿತರಣೆಯನ್ನು ವ್ಯಾಖ್ಯಾನಿಸಲು ಮತ್ತು ಪರಿಸರ ವ್ಯವಸ್ಥೆಯಲ್ಲಿ ಅವುಗಳ ಪಾತ್ರವನ್ನು ಅರ್ಥಮಾಡಿಕೊಳ್ಳಲು ನಮಗೆ ಸಕ್ರಿಯವಾಗುತ್ತದೆ. ಈ ರೀತಿಯಾಗಿ ಪ್ರಭೇದಗಳ ಅನ್ವೇಷಣೆಯಿಂದ ನಾವು ವಿವಿಧ ಪಶು ಪಕ್ಷಿಗಳ ಸಮುದಾಯವನ್ನು ಇನ್ನೂ ನಿಖರವಾಗಿ ಅರ್ಥಮಾಡಿಕೊಳ್ಳಬಹುದು” ಎಂದು ಧ್ವನಿಗೂಡಿಸಿದರು.

ಕೀಟಗಳಾದ ಡ್ಯಾಂಸೆಲ್‌ಫ್ಲೈ ಮತ್ತು ಡ್ರಾಗನ್ ಫ್ಲೈಗಳು ಒಳ್ಳೆಯ, ಶುದ್ದವಾದ ನೀರಿನ ಪರಿಸರದೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ. ಅವುಗಳು ಇರುವಿಕೆ ಈ ಪರಿಸರದ ಇತರೆ ಜೀವಿಗಳ ಆರೋಗ್ಯವನ್ನು ಉತ್ತಮವಾಗಿ ಸೂಚಿಸುತ್ತದೆ. ಡ್ಯಾಂಸೆಲ್‌ಫ್ಲೈಗಳು ಬೆಳವಣಿಗೆಯ ಹಂತದಲ್ಲಿ ಅವುಗಳು ಸಂಪೂರ್ಣವಾಗಿ ಜಲಚರಗಳಾಗಿರುತ್ತವೆ ಹಾಗೂ ಈ ಜಲಮೂಲಗಳ ಮೇಲೆ ಅವಲಂಬಿತವಾಗಿರುತ್ತವೆ, ಆದ್ದರಿಂದ ಅವು ನೀರಿನ ಮಾಲಿನ್ಯಕ್ಕೆ ಸೂಕ್ಷ್ಮತೆಯನ್ನು ಪ್ರದರ್ಶಿಸುತ್ತವೆ. ಗುಣಮಟ್ಟ ಇಲ್ಲದ ನೀರಿನಲ್ಲಿ ಅವು ಕಡಿಮೆಯಾಗಿ, ಸ್ವಚ್ಛ ಅಪ್ರಚಲಿತ ಜಲಮೂಲಗಳಲ್ಲಿ ಈ ಪ್ರಭೇದಗಳ ವ್ಯೆವಿಧ್ಯತೆ ಅಧಿಕವಾಗುವುದು ನಾವು ಕಾಣಬಹುದು. ಅವುಗಳ ಶ್ರೀಮಂತ ಬೆಳವಣಿಗೆಯನ್ನು ಸ್ವಚ್ಛ ನೀರಿನ ಪರಿಸರ ವ್ಯೆವಸ್ಠೆಗಳ ಗುಣಮಟ್ಟವನ್ನು ನಿರ್ಣಯಿಸಲು ಬಳಸಬಹುದು.

"ಈಗಾಗಲೇ ಹಲವಾರು ಡ್ಯಾಂಸೆಲ್‌ಫ್ಲೈ ಮತ್ತು ಡ್ರ್ಯಾಗನ್ ಫ್ಲೈಗಳು ಈ ಪ್ರದೇಶದಿಂದ ಪರಿಚಿತವಾಗಿವೆ, ಪ್ರಸ್ತುತ ಅಧ್ಯಯನದ ಮೂಲಕ ಹೊಸ ಪ್ರಭೇದಗಳು ಸೇರ್ಪಡೆಯಾಗಿವೆ" ಎನ್ನುತ್ತಾರೆ ಸಂಶೋಧಕರು. "ಪಶ್ಚಿಮ ಘಟ್ಟದ ಪ್ರೊಟೊಸ್ಟಿಕ್ಟ ಮತ್ತು, ಈ ಗುಂಪಿಗೆ ಸೇರಿದ ಹಿಮಾಲಯ ಮತ್ತು ದಕ್ಷಿಣ-ಏಷಿಯಾದ ಪ್ರಭೇದಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಇನ್ನೂ ಹೆಚ್ಚಿನ ಅಧ್ಯಯನ ಅಗತ್ಯ" ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. 

Kannada

Recent Stories

ಲೇಖಕರು
Research Matters
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
Research Matters
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Research Matters
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
Research Matters
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Research Matters
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
Research Matters
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
Research Matters
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
Research Matters
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
Research Matters
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
Research Matters
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...