ಬೆಂಗಳೂರು
ಮರಿಯಾನೆಗಳು ಬಲಮುರಿಯೋ ಅಥವಾ ಎಡಮುರಿಯೋ ಎಂಬುದು ಚಿಕ್ಕಂದಿನಲ್ಲೇ ನಿರ್ಧರಿತ!

ಏಷ್ಯಾದ ಮರಿಯಾನೆಯು ತನ್ನ ಬಾಯಿಯ ಬಲಭಾಗದಲ್ಲಿ ಹುಲ್ಲು ಇರಿಸಿಕೊಳ್ಳುತ್ತಿರುವುದು [ಚಿತ್ರ ಕೃಪೆ: ಟಿ. ರೇವತಿ]

ಮರಿಯಾನೆಗಳ ತುಂಟಾಟ, ಚಿನ್ನಾಟವನ್ನು ತೋರುವ ವೈರಲ್ ವಿಡಿಯೊಗಳು ಒಂದು ಮಂದಹಾಸ ಮೂಡಿಸುತ್ತವೆ, ಹೃತ್ಪೂರ್ವಕ ನಗುವಿಗೆ ಕಾರಣವಾಗುತ್ತವೆ ಎಂಬುದಂತೂ ಖಂಡಿತ! ತಮ್ಮ ಅಮ್ಮಂದಿರನ್ನು ಗೋಳು ಹೊಯ್ದುಕೊಳ್ಳುತ್ತಾ, ತಿನ್ನುವಾಗ, ಆಡುವಾಗ ತಮ್ಮ ಪುಟ್ಟ ಸೊಂಡಿಲುಗಳನ್ನು ಕಷ್ಟಪಟ್ಟು ಹೇಗೇಗೋ ಬಳಸುವುದನ್ನು ನೋಡುವುದೇ ಚೆಂದ ಮತ್ತು ಮರಿಯಾನೆಗಳ ವಿಡಿಯೋಗಳನ್ನು ನೋಡಿದಾಗ ಈ ಸಂಗತಿಯನ್ನು ಗಮನಿಸದೇ ಇರಲು ಸಾಧ್ಯವೇ ಇಲ್ಲ. ನಾವು ಯಾವ ಕೈಯನ್ನು ಹೆಚ್ಚಾಗಿ ಬಳಸುತ್ತೇವೆ ಎಂಬುದರ ಆಧಾರದ ಮೇಲೆ ನಾವು 'ಎಡಗೈ' ಅಥವಾ 'ಬಲಗೈ'ಯವರು ಆಗಿರುವಂತೆಯೇ, ಆನೆಗಳು ಕೂಡ ತಮ್ಮ ಸೊಂಡಿಲನ್ನು ಎಡಕ್ಕೆ/ ಬಲಕ್ಕೆ ತಿರುಗಿಸಿ ಬಳಸುವುದಕ್ಕೆ ಆದ್ಯತೆ ನೀಡುತ್ತವೆ ಎಂದು ಕಂಡುಬಂದಿದೆ. ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆಎನ್‌ಸಿಎಎಸ್ಆರ್)ದ ಸಂಶೋಧಕರು ನಡೆಸಿದ ಹೊಸ ಅಧ್ಯಯನವು, ಮರಿಯಾನೆಗಳು ತಮ್ಮ ಸೊಂಡಿಲನ್ನು ಹೇಗೆ ಮತ್ತು ಯಾವಾಗ ಬಳಸಬೇಕೆಂದು ಕಲಿಯುತ್ತವೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.

ಮರಿಯಾನೆಗಳು ಪೂರ್ವಭಾವಿಯಾಗಿ ಅನೇಕ ಬೆಳವಣಿಗೆಯ ಹಂತಗಳನ್ನು ಸಂಪೂರ್ಣಗೊಳಿಸಿಕೊಂಡು ಜನಿಸುತ್ತವೆ - ಅವು ಹುಟ್ಟಿದಾಗ ಮುಂದುವರಿದ ಹಂತದಲ್ಲಿರುತ್ತವೆ; ಅಂದರೆ, ಅವು ಹುಟ್ಟಿದ ತಕ್ಷಣವೇ ಕಣ್ಣುಬಿಟ್ಟು ನೋಡಬಹುದು, ಎದ್ದು ನಿಲ್ಲಬಹುದು ಮತ್ತು ತಮ್ಮದೇ ಆದ ಆಹಾರವನ್ನು ಪಡೆದುಕೊಳ್ಳಬಹುದು ಕೂಡ! ಅವು ತಮ್ಮ ಜೀವನದ ಮೊದಲ ಎರಡು ವರ್ಷಗಳ ಪೋಷಣೆಗಾಗಿ ತಾಯಂದಿರನ್ನು ಅವಲಂಬಿಸಿದ್ದರೂ, ಮರಿಯಾನೆಗಳು ಆರಂಭದಿಂದಲೇ ಸ್ವತಂತ್ರವಾಗಿ ಓಡಾಡುತ್ತವೆ. ಇಷ್ಟೆಲ್ಲಾ ಸಾಧ್ಯವಿದ್ದರೂ, ಆಹಾರ ಸಂಗ್ರಹಿಸಿ ಸೇವಿಸುವಲ್ಲಿ ಹಾಗೂ ಸಾಮಾಜಿಕ ಸಂವಹನಗಳಲ್ಲಿ ಪ್ರಮುಖ ಪಾತ್ರವಹಿಸುವ ಅವುಗಳ ಸೊಂಡಿಲುಗಳ ಮೇಲಿನ ನಿಯಂತ್ರಣ ಮಾತ್ರ, ನಿಧಾನವಾಗಿ ಬೆಳೆಯುತ್ತದೆ.

"ಏಷ್ಯಾದ ಮರಿಯಾನೆಗಳು ಪೌಷ್ಠಿಕಾಂಶಕ್ಕಾಗಿ ಮತ್ತು ಸಾಮಾಜಿಕವಾಗಿ ತಮ್ಮ ತಾಯಂದಿರ ಮೇಲೆ ಹೆಚ್ಚಿನ ಅವಲಂಬನೆಯನ್ನು ದೀರ್ಘಕಾಲದವರೆಗೆ ಹೊಂದಿರುತ್ತವೆ" ಎಂದು ಆನೆಯ ನಡವಳಿಕೆಯ ಬಗ್ಗೆ ಅಧ್ಯಯನ ಮಾಡುತ್ತಿರುವ ಟಿ. ರೇವತಿಯವರು ವಿವರಿಸುತ್ತಾರೆ. ಜೆಎನ್‌ಸಿಎಎಸ್‌ಆರ್‌ನಲ್ಲಿ ಪ್ರಾಧ್ಯಾಪಕರಾಗಿರುವ ಟಿ.ಎನ್‌.ಸಿ ವಿದ್ಯಾ ಅವರು ಏಷ್ಯಾದ ಆನೆಗಳ ನಡವಳಿಕೆ ಮತ್ತು ಸಾಮಾಜಿಕ ಸಂಘಟನಾ ಪ್ರವೃತ್ತಿಯನ್ನು ಅರ್ಥಮಾಡಿಕೊಳ್ಳುವ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, "ಈ ಅವಲಂಬನೆಯು ಆಸಕ್ತಿದಾಯಕ ಸಾಮಾಜಿಕ ಸಂವಹನಗಳ ಹೊರಹೊಮ್ಮುವಿಕೆಗೆ ಕಾರಣವಾಗಬಹುದು" ಎಂದು ವಿಶ್ಲೇಷಿಸುತ್ತಾರೆ.

ಪ್ರಸ್ತುತ ಅಧ್ಯಯನವು ಕರ್ನಾಟಕದ ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳಲ್ಲಿನ ಏಷ್ಯಾದ ಮರಿಯಾನೆಗಳ ಮೇಲೆ ಕೇಂದ್ರೀಕೃತವಾಗಿದ್ದು, ಅವು ಸೊಂಡಿಲಿನ ಎಡ ಅಥವಾ ಬಲದ ಕಡೆಗಿನ ಒಲವು ಅಂದರೆ ಅವು ಎಡಮುರಿಯನ್ನೋ ಅಥವಾ ಬಲಮುರಿಯನ್ನೋ ಹೆಚ್ಚು ಸಮರ್ಪಕವಾಗಿ ಆಯ್ಕೆಮಾಡಿಕೊಂಡು ಬಳಸುತ್ತವೆ ಎಂಬುದನ್ನು, ಜೊತೆಗೆ, ಅವುಗಳ ವರ್ತನೆಯ ಬೆಳವಣಿಗೆಯನ್ನು ಪರಿಶೋಧಿಸುತ್ತದೆ. ಈ ಸಂಶೋಧನೆಯನ್ನು ಇಂಟರ್ನ್ಯಾಷನಲ್ ಜರ್ನಲ್ ಆಫ್ ಡೆವಲಪ್ಮೆಂಟಲ್ ಬಯಾಲಜಿಯಲ್ಲಿ ಪ್ರಕಟಿಸಲಾಗಿದೆ.

ಸೊಂಡಿಲಿರುವ ಪ್ರಾಣಿಗಳ ಕುಟುಂಬದಲ್ಲಿ ಆನೆಗಳು ಮಾತ್ರ ಸಜೀವವಾಗಿ ಉಳಿದುಕೊಂಡಿರುವ ಸದಸ್ಯರಾಗಿವೆ. ಸೊಂಡಿಲಿನ ಬಳಕೆಯು ಮರಿಯಾನೆಗಳು ಬೆಳೆದಂತೆ ಕ್ರಮೇಣ ಅಭಿವೃದ್ಧಿಯಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಮರಿಯಾನೆಗಳ ಮೇಲೆ ಈ ಹಿಂದೆ ನಡೆಸಲಾದ ಅವಲೋಕನವೊಂದು ತಿಳಿಸುವುದೇನೆಂದರೆ, ಸೊಂಡಿಲನ್ನು ಯಾವ ಬದಿಗೆ ತಿರುಗಿಸಿ ಬಳಸಬೇಕೆಂಬುದರ ಆದ್ಯತೆಯು ಮರಿಯಾನೆಗಳ ಪ್ರಾರಂಭಿಕ ಜೀವನದ ಆರಂಭದಲ್ಲಿಯೇ ಅಭಿವೃದ್ಧಿಗೊಳ್ಳುತ್ತದೆ ಎಂಬುದು! ಈ ಪ್ರಸ್ತುತ ಅಧ್ಯಯನದಲ್ಲಿ, ಮರಿಯಾನೆಗಳು ಸಮರ್ಥವಾಗಿ ಸೊಂಡಿಲನ್ನು ಬಳಸಲು ಕಲಿಯುವ ಮುನ್ನವೇ,  ಅವುಗಳಲ್ಲಿ ಬಲಮುರಿ/ಎಡಮುರಿ ಆದ್ಯತೆಯು ಹುಟ್ಟಿಕೊಂಡಿದೆಯೇ ಎಂಬುದರ ಬಗ್ಗೆ ಸಂಶೋಧಕರು ತನಿಖೆ ನಡೆಸಿದರು. ಅವರು ಆನೆಗಳ ಹನ್ನೊಂದು ವಿವಿಧ ಕುಲಗಳಿಗೆ ಸೇರಿದ 30 ಮರಿಯಾನೆಗಳ ವಿಡಿಯೊಗಳನ್ನು ಅವಲೋಕಿಸಿ ಅಧ್ಯಯನ ನಡೆಸಿದರು.

ಸಂಶೋಧಕರು ಮರಿಯಾನೆಗಳು ಸೊಂಡಿಲನ್ನು ತಿರುಗಿಸುವ ದಿಕ್ಕನ್ನು (ಪ್ರದಕ್ಷಿಣಾಕಾರ ಅಥವಾ ಅಪ್ರದಕ್ಷಿಣಾಕಾರ) ಗಮನಿಸಿದರು; ಅವು ಸೊಂಡಿಲನ್ನು ಬಳಸಿ ಹುಲ್ಲನ್ನು/ಎಲೆಗಳನ್ನು ಸಂಗ್ರಹಿಸಲು, ಎಳೆಯಲು, ತರಿಯಲು ಯಾವ ಕಡೆಗೆ ತಿರುಗಿಸಿ ಬಳಸುತ್ತವೆ ಮತ್ತು ತಮ್ಮ ಬಾಯಿಯ ಎಡಕ್ಕೋ ಅಥವಾ ಬಲಕ್ಕೋ - ಯಾವ ಬದಿಗೆ ತಮ್ಮ ಆಹಾರವನ್ನು ಇರಿಸುತ್ತವೆ ಎಂಬುದನ್ನು ಕೂಲಂಕುಷವಾಗಿ ಗುರುತಿಸಿದರು. ಮರಿಯಾನೆಗಳು ತಮ್ಮ ಸೊಂಡಿಲುಗಳ ಮೂಲಕ ನೆಲವನ್ನು ಹೇಗೆ ಮುಟ್ಟಿದವು ಮತ್ತು ತಮ್ಮ ದೇಹದ ಯಾವ ಭಾಗವನ್ನು ಹೆಚ್ಚು ಮುಟ್ಟಿಕೊಂಡವು ಎಂಬುದನ್ನೂ ಅವರು ಗಮನಿಸಿದರು. ಈ ಎಲ್ಲಾ ಅವಲೋಕನಗಳು ಅವುಗಳ ಸೊಂಡಿಲಿನ ಎಡ/ಬಲ ಆದ್ಯತೆಯನ್ನು ಅರ್ಥೈಸಿದವು.

ಹುಟ್ಟಿದ ಮೂರು ತಿಂಗಳೊಳಗೇ ಮರಿಯಾನೆಗಳು ತಮ್ಮ ಸೊಂಡಿಲಿನ ಎಡ/ಬಲ ಆದ್ಯತೆಯನ್ನು  ಪ್ರಚುರಪಡಿಸುತ್ತವೆ ಎಂದು ಅಧ್ಯಯನವು ತೋರಿಸಿದೆ. ಸೊಂಡಿಲಿನ ಉತ್ತಮ ಯಾಂತ್ರಿಕ ನಿಯಂತ್ರಣವನ್ನು ಕಲಿಯುತ್ತಾ ಮರಿಯಾನೆಗಳ ವಯಸ್ಸು ಹೆಚ್ಚಿದಂತೆಲ್ಲಾ ಬಾಯಿಯ ಎಡ ಅಥವಾ ಬಲ ಬದಿಗೆ ಆಹಾರವನ್ನು ಇರಿಸಿಕೊಳ್ಳುವ ಆದ್ಯತೆಯು ಹೆಚ್ಚು ಸ್ಪಷ್ಟವಾಗುತ್ತಾ ಸಾಗುತ್ತದೆ. ಆದರೆ, ಕುತೂಹಲಕಾರಿ ಅಂಶವೆಂದರೆ, ಮರಿಯಾನೆಗಳ ಸೊಂಡಿಲಿನ ಆದ್ಯತೆಯ ದಿಕ್ಕು, ಅವು ತಮ್ಮ ಸೊಂಡಿಲನ್ನು ಎಷ್ಟು ಯಶಸ್ವಿಯಾಗಿ ಬಳಸಲು ಕಲಿತಿವೆ ಎಂಬುದರ ಮೇಲೆ ಅವಲಂಬಿತವಾಗಿರಲಿಲ್ಲ, ಇದು ಹುಟ್ಟಿನಿಂದಲೇ ಬಂದಿರುವ ಸಹಜ ಲಕ್ಷಣವಾಗಿರಬಹುದು ಎಂದು ಈ ಸಂಶೋಧನೆಯು ಅಚ್ಚರಿದಾಯಕ ಸುಳಿವು ನೀಡುತ್ತದೆ!                      
                                                                                                                                                                                                                                
ಮರಿಯಾನೆಗಳು ತಮ್ಮ ಬೆಳವಣಿಗೆಯ ಹಂತದ ಯಾವ ಸಮಯದಲ್ಲಿ ವಯಸ್ಕ ಆನೆಗಳ ರೀತಿಯ ವರ್ತನೆಗಳನ್ನು ತೋರಿಸುತ್ತವೆ ಎಂಬುದನ್ನು ಸಂಶೋಧಕರು ಪರಿಶೀಲಿಸಿದ್ದಾರೆ. ವಯಸ್ಕ ಆನೆಗಳೊಂದಿಗೆ ಮರಿಯಾನೆಗಳ ಸಂವಹನದ ಸಮಯದಲ್ಲಿ ಅವುಗಳ ನಡವಳಿಕೆಗಳನ್ನು ಗಮನಿಸಿ, ವರ್ಗೀಕರಿಸಿದ್ದಾರೆ; ಅವುಗಳನ್ನು ಆಹಾರ ಸಂಗ್ರಹಣೆ ಮತ್ತು ಸೇವನೆ, ತಮ್ಮ ದೇಹದ ಆರೈಕೆ/ಅಂದಗೊಳಿಸಿಕೊಳ್ಳುವಿಕೆ, ವಿಶ್ರಾಂತಿ ಮತ್ತು ಆಟಗಳಿಗೆ ಸಂಬಂಧಿತ ನಡವಳಿಕೆಗಳು ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಂಶೋಧಕರು ಹೀಗೆ ಗಮನಿಸಿದ  81 ನಡವಳಿಕೆಗಳನ್ನು ಮರಿಯಾನೆಗಳ ಪೂರ್ವಸಿದ್ಧತಾ ಹಂತ, ಮರಿಯಾನೆಗಳ ನಿರ್ದಿಷ್ಟ ಹಂತ, ವಯಸ್ಕ ಆನೆಗಳ ಪೂರ್ವಸಿದ್ಧತಾ ಹಂತ ಮತ್ತು ವಯಸ್ಕ ಆನೆಗಳ ನಿರ್ದಿಷ್ಟ ಹಂತದ ವರ್ತನೆಗಳೆಂದು ವರ್ಗೀಕರಿಸುತ್ತಾರೆ.

"ಮರಿಯಾನೆಗಳ ಪೂರ್ವಸಿದ್ಧತಾ ಹಂತದ ನಡವಳಿಕೆಗಳು ಮರಿಯಾನೆಗಳಿಂದ ಮಾತ್ರ ಪ್ರದರ್ಶಿಸಲ್ಪಡುತ್ತವೆ ಮತ್ತು ಅವು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲದ್ದನ್ನು ಇದು ತೋರಿಸುತ್ತದೆ. ಇದಕ್ಕೆ ವಿರುದ್ಧವಾಗಿ, ವಯಸ್ಕ ಆನೆಗಳ ಪೂರ್ವಸಿದ್ಧತಾ ಹಂತದ ನಡವಳಿಕೆಗಳನ್ನು ವಯಸ್ಕ ಆನೆಗಳು ತೋರಿಸುತ್ತವೆ ಮತ್ತು ಈ ಹಂತದ ನಡವಳಿಕೆಗಳು ಮರಿಯಾನೆಗಳಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಯಾಗಿರುವಂತೆ ಕಂಡುಬರುವುದಿಲ್ಲ; ಈ ವರ್ತನೆಗಳ ಕಲಿಕೆ ಇನ್ನೂ ಜಾರಿಯಲ್ಲಿದೆ,ಅಭ್ಯಾಸ ಮಾಡಲಾಗುತ್ತಿದೆ ಮತ್ತು ಅರ್ಥೈಸುವಿಕೆ ವಿಸ್ತಾರವಾಗುತ್ತಿದೆ.” ಎಂದು ರೇವತಿ ವಿವರಿಸುತ್ತಾರೆ.

ಉದಾಹರಣೆಗೆ, ನವಜಾತ ಮರಿಯಾನೆಗಳು ತಾಯಿಯ ಮುಂಗಾಲು ಮತ್ತು ಹಿಂಗಾಲುಗಳ ನಡುವೆ ವ್ಯತ್ಯಾಸವನ್ನು ಅರಿಯಬೇಕಾಗುತ್ತದೆ. ತಾಯಿಯ ಹಾಲುಣಲು ಸರಿಯಾದ ರೀತಿ ನಿಲ್ಲಲು ಅನುವಾಗುವಂತೆ ಪ್ರಯತ್ನಿಸುವುದು ಮರಿಯಾನೆಗಳ ಪೂರ್ವಸಿದ್ಧತಾ ಹಂತದ ನಡವಳಿಕೆ. ವಯಸ್ಕ ಆನೆಯು ಆಹಾರ ಸಂಪಾದಿಸಿದ ಪ್ರದೇಶದಿಂದಲೇ ಬೆಳೆಯುತ್ತಿರುವ ಮರಿಯಾನೆಗಳು ಹುಲ್ಲು ಎಳೆದು, ಕಿತ್ತು ಸಂಗ್ರಹಿಸುವುದು ಮತ್ತು ಆಹಾರತಾಣಗಳನ್ನು ಕಂಡುಹಿಡಿಯಲು ಕಲಿಯುವುದು ವಯಸ್ಕಆನೆಯ ಪೂರ್ವಸಿದ್ಧತಾ ಹಂತದ ನಡವಳಿಕೆಗಳನ್ನು ತೋರಿಸುತ್ತದೆ.

ಮರಿಯಾನೆಗಳು ಬೆಳೆದಂತೆ, ಅವು ಕಡಿಮೆ ಸಮಯವನ್ನು ವಿಶ್ರಾಂತಿಗೆ ಮತ್ತು ಹೆಚ್ಚಿನ ಸಮಯವನ್ನು ಆಹಾರದ ಸಂಗ್ರಹಣೆ ಮತ್ತು ಸೇವನೆಗಾಗಿ ಮೀಸಲಿಟ್ಟವು ಎಂದು ಅಧ್ಯಯನವು ಕಂಡುಹಿಡಿದಿದೆ. ಅವುಗಳಿಗೆ ಎರಡು ವರ್ಷ ತುಂಬುವವರೆಗೂ ಅವು ಆಹಾರಕ್ಕಾಗಿ ಖರ್ಚು ಮಾಡುವ ಸಮಯವು  ಹೆಚ್ಚುತ್ತಾ ಸಾಗಿ, ನಂತರ ಸ್ಥಿರವಾಗುತ್ತದೆ ಎಂದು ಕಂಡುಬಂದಿದೆ. ಮರಿಯಾನೆಗಳು ಚಿಕ್ಕ ವಯಸ್ಸಿನಿಂದಲೇ ವಿಶ್ರಾಂತಿ-ಸಂಬಂಧಿತ ವರ್ತನೆಗಳು, ಕೆಲವು ಅಂದಗೊಳ್ಳುವಿಕೆ/ದೈಹಿಕ ಆರೈಕೆ ಸಂಬಂಧಿತ ವರ್ತನೆಗಳು ಮತ್ತು ಅನೇಕ ಸಾಮಾಜಿಕ ನಡವಳಿಕೆಗಳನ್ನು ವಯಸ್ಕ ಆನೆಗಳ ರೀತಿಯೇ ಪ್ರದರ್ಶಿಸುವುದು ಕಂಡುಬಂದಿದೆ; ಆದರೆ ಸೊಂಡಿಲಿನ ಬಳಕೆಯ ಅಗತ್ಯವಿರುವ ಆಹಾರ-ಸಂಬಂಧಿತ ನಡವಳಿಕೆಗಳು ಮಾತ್ರ, ಮರಿಯಾನೆಗಳಿಗೆ 6 ತಿಂಗಳಿಂದ 1 ವರ್ಷ ವಯಸ್ಸಾಗುವವರೆಗೂ  ಕ್ರಮೇಣ ಅಭಿವೃದ್ಧಿಗೊಳ್ಳುತ್ತವೆ ಎನ್ನುತ್ತದೆ ಈ ಸಂಶೋಧನೆ!    

ಗುಂಪಿನೊಳಗೆ ಒಗ್ಗಟ್ಟು ಕಾಪಾಡಿಕೊಳ್ಳುವ ಸಲುವಾಗಿ, ಮರಿಯಾನೆಗಳು ಮತ್ತು ವಯಸ್ಕ ಆನೆಗಳು ಕೆಲವು ನಡವಳಿಕೆಗಳನ್ನು ಏಕಕಾಲಕ್ಕೆ ಮೇಳೈಸಿಕೊಳ್ಳಬೇಕಾಗುತ್ತದೆ; ಮರಿಯಾನೆಗಳ ಬೆಳವಣಿಗೆಯ ಹಂತದ ಉದ್ದಕ್ಕೂ ಆಹಾರದ ಸಂಗ್ರಹಣೆ ಮತ್ತು ಸೇವನೆಯ ವರ್ತನೆಗಳು ಒಂದೇ ಕಾಲಕ್ಕೆ ಆಗುವಂತೆ ಮೇಳೈಸಿರುತ್ತದೆ ಎಂದು ಈ ಅಧ್ಯಯನವು ಕಂಡುಹಿಡಿದಿದೆ. ಇದಕ್ಕೆ ವ್ಯತಿರಿಕ್ತವಾಗಿ, ವಿಶ್ರಾಂತಿಯ ನಡವಳಿಕೆಯ ಮೇಳೈಕೆ ಮೊದಲಿಗೆ ಹೆಚ್ಚಾಗಿ ಕಂಡುಬರುವುದಿಲ್ಲ ಮತ್ತು ಮರಿಯಾನೆಗಳಿಗೆ ವಯಸ್ಸಾದಂತೆಲ್ಲಾ ಈ ಮೇಳೈಕೆಯು  ಹೆಚ್ಚಾಗುತ್ತದೆ; ಇದಕ್ಕೆ ಕಾರಣ, ಮರಿಯಾನೆಗಳು ಮೊದಲ ಹಲವು ತಿಂಗಳುಗಳು ನಿದ್ರಿಸುತ್ತಲೇ ಹೆಚ್ಚಿನ ಸಮಯ ಕಳೆಯುತ್ತವೆ; ಮರಿಯಾನೆಗಳು  ಬೆಳೆದಂತೆಲ್ಲಾ ಅವುಗಳ ಸಾಮಾಜಿಕ ಸಂವಹನವು ವಯಸ್ಕ ಆನೆಗಳ ವರ್ತನೆಯ ಪ್ರತಿಬಿಂಬದಂತೆಯೇ ಇರುತ್ತದೆ. ಮತ್ತೊಂದೆಡೆ, ಮರಿಯಾನೆಗಳು ಬೆಳೆದಂತೆಲ್ಲಾ ತಮ್ಮ ದೇಹವನ್ನು ಅಂದಗೊಳಿಸಿಕೊಳ್ಳುವ, ಆರೈಕೆ ಮಾಡಿಕೊಳ್ಳುವ ವರ್ತನೆಗೆ ಸಂಬಂಧಿತ ಚಟುವಟಿಕೆಗಳು ವಯಸ್ಕ ಆನೆಗಳ ವರ್ತನೆಗಳ ಪ್ರಭಾವದಿಂದ ಸ್ವತಂತ್ರವಾಗಿರುತ್ತವೆ ಎಂದು ಕಂಡುಬಂದಿದೆ.

ಈ ಅಧ್ಯಯನದ ಆವಿಷ್ಕಾರಗಳು, ಏಷ್ಯಾದ ಮರಿಯಾನೆಗಳ ಬೆಳವಣಿಗೆಯ ಪ್ರಮುಖಾಂಶಗಳನ್ನು ವಿವರಿಸುತ್ತವೆ. ಸೊಂಡಿಲಿನ ಎಡ/ಬಲ ತಿರುವಿನ ಆದ್ಯತೆಯ ನಿರ್ಧಾರವು ವಿಕಸನೀಯ ಅಂಶಗಳ ಪರಿಣಾಮದಿಂದ ಉಂಟಾಗಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲು, ಆನೆಯ ಸೊಂಡಿಲಿಗೆ ಹೋಲುವ ರಚನೆಯುಳ್ಳ ಇತರ ಜಾತಿಗಳ ಸಂಬಂಧಿಕರಾದ ಉದ್ದನೆಯ ಮೂಗಿನ ಟ್ಯಾಪಿರ್‌ಗಳಂತಹ ಜೀವಿಗಳ ಅಧ್ಯಯನ ಮಾಡುವುದರ ಮೂಲಕ ಸಾಧ್ಯವಾಗಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

“ ಏಷ್ಯಾದ ಆನೆಗಳ ವರ್ತನೆಯ ಮೈಲಿಗಲ್ಲುಗಳನ್ನು ದಾಖಲಿಸಿರುವ ಈ ಸಂಶೊಧನೆಯು, ಅವುಗಳ ಬಗ್ಗೆ ವಿವಿಧ ರೀತಿಯ ಅಧ್ಯಯನಗಳನ್ನು ನಡೆಸಲು ಅಗತ್ಯವೆನಿಸುವ  ಮೂಲಭೂತ ದತ್ತಾಂಶವನ್ನು ಕೊಡಮಾಡಿದೆ; ಸಂಶೋಧಕರು ಆನೆಗಳ ಒಂದು ನಿರ್ದಿಷ್ಟ ರೀತಿಯ ನಡವಳಿಕೆಯನ್ನು ಅಧ್ಯಯನ ಮಾಡಲು ಬಯಸಿದರೆ, ಮರಿಯಾನೆಗಳು ವಯಸ್ಕಆನೆಗಳ  ರೀತಿಯ ನಡವಳಿಕೆಯನ್ನು ಯಾವ ಹಂತದಲ್ಲಿ ತೋರಿಸುತ್ತವೆ ಎಂಬುದನ್ನು ಈ ದತ್ತಾಂಶದ ಮೂಲಕ ಅರಿತು, ಅಗತ್ಯಕ್ಕೆ ತಕ್ಕಂತಹ ವಯಸ್ಸಿನ ಆನೆಗಳನ್ನು ಸಂಶೋಧನೆಗಾಗಿ ಆಯ್ದುಕೊಳ್ಳಬಹುದು" ಎಂದು ಈ ಸಂಶೋಧನೆಯ ಮಹತ್ವವನ್ನು ಡಾ ವಿದ್ಯಾ ನಮ್ಮ ಮುಂದೆ ಬಿಡಿಸಿಡುತ್ತಾರೆ.

ಹೀಗೆ ಒಂದು ಸಂಶೋಧನೆಯ ಆಧಾರದ ಮೇಲೆ ಅನೇಕ ಸಂಶೋಧನೆಗಳು ರೂಪುತಳೆಯುವ, ಒಂದು ಆವಿಷ್ಕಾರವು ನೂರಾರು ಆವಿಷ್ಕಾರಗಳಿಗೆ ನಾಂದಿಯಾಗುವ ಸೊಗವನ್ನು ಇಲ್ಲಿ ನಾವು ಅರಿತು ಪುಳಕಿತರಾಗಬಹುದು!
 

Kannada

Recent Stories

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...