Bengaluru

ವಯಸ್ಸು ಹೆಚ್ಚಾಗುತ್ತಾ ಸಾಗಿದಾಗ, ಸ್ಮರಣೆಯು ಇಳಿಜಾರಿನ ಕಡೆಗೆ ಹೊರಳಲು ಆರಂಭಿಸುತ್ತದೆ. ಆದರೆ, ಬದುಕಿನ ಅತ್ಯಂತ ಮೂಲಭೂತ ವಿಷಯಗಳನ್ನೇ ಮರೆತುಬಿಡೋದಂದ್ರೆ ಸುಮ್ಮನೇಯೇ? ತಿನ್ನುವುದು, ಮಾತನಾಡುವುದು, ಕುಟುಂಬದ ಸದಸ್ಯರ ಹೆಸರುಗಳನ್ನೇ ಮರೆಯುವಷ್ಟು ಸ್ಮರಣೆಯ ಸಮಸ್ಯೆ ಉಂಟಾದರೆ ಆ ಸ್ಥಿತಿಯನ್ನು ಬಹಳ ಗಂಭೀರವಾದ ಮಾನಸಿಕ ವ್ಯಾಧಿ ಎಂದು ಪರಿಗಣಿಸಲಾಗುತ್ತದೆ. ಈ ಗಂಭೀರ ಮರೆಗುಳಿತನದ ಅತ್ಯಂತ ಸಾಮಾನ್ಯ ವಿಧ-ಆಲ್ಝೈಮರ್ನ ಖಾಯಿಲೆ. ಇದು ಚಿಕಿತ್ಸೆ ಇಲ್ಲದ ಒಂದು ರೋಗವಾಗಿದ್ದು, ಸುಮಾರು ೧.೬ ದಶಲಕ್ಷ ಹಿರಿಯರು ಅಲ್ಝೈಮರ್ನೊಂದಿಗೆ ಬಳಲುತ್ತಿದ್ದಾರೆ; ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದಿದ್ದರೂ, ಮೊದಲ ಹಂತಗಳಲ್ಲೇ ಪತ್ತೆಹಚ್ಚಲು ಸಾದ್ಯವಾದರೆ, ಸೂಕ್ತ ಔಷಧೋಪಚಾರದ ಸಹಾಯದಿಂದ ತಕ್ಕಮಟ್ಟಿಗೆ ಈ ರೋಗದ ಉಪಟಳವನ್ನುಸಹಿಸಿಕೊಳ್ಳಬಹುದು ಅಲ್ಲವೇ? ಅದೇ ನಿಟ್ಟಿನಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ಸಂಶೋಧನೆ ಕೈಗೊಂಡಿದ್ದು, ಅವರ ಅಧ್ಯಯನವು ಈ ದಿಕ್ಕಿನಲ್ಲಿ ಹೊಸ ಒಳನೋಟಗಳನ್ನು ತೆರೆದಿಟ್ಟಿದೆ.

೧೯೦೬ರಲ್ಲಿ ಡಾ. ಅಲೋಯಿಸ್ ಆಲ್ಝೈಮರ್ ಅವರಿಂದ ವಿವರಿಸಲ್ಪಟ್ಟ ಆಲ್ಝೈಮರ್ನ ಖಾಯಿಲೆಗೆ, ಒಂದು ಶತಮಾನದ ನಂತರವೂ ವಿಜ್ಞಾನಿಗಳು ಇನ್ನೂ ಚಿಕಿತ್ಸೆಗಾಗಿ ಹುಡುಕಾಟ ನಡೆಸಿದ್ದಾರೆ; ಆದರೆ, ಮೆದುಳಿನಲ್ಲಿ ಕಂಡುಬರುವ ಅಸಹಜತೆಯನ್ನು ಜೀವಕೊಶೀಯ ಮತ್ತು ಆನುವಂಶಿಕ ನೆಲೆಗಟ್ಟಿನಲ್ಲಿ ಅರ್ಥೈಸಿಕೊಳ್ಳುವ ಮಟ್ಟದಲ್ಲಿ ವಿಜ್ಞಾನ ಕ್ಷೇತ್ರ ಮುಂದುವರೆದಿರುವುದು, ಹೊಸ ಭರವಸೆ ನೀಡುತ್ತದೆ. "ಆಲ್ಝೈಮರ್ನ ರೋಗದಲ್ಲಿ ಕಣ್ಣಿಗೆ ಕಾಣುವಂತೆ ರೋಗಲಕ್ಷಣಗಳು ಗೋಚರಿಸುವುದಕ್ಕೂ ಕನಿಷ್ಠ ಎರಡು ದಶಕಗಳ ಮೊದಲೇ, ಆಣ್ವಿಕ ಮಟ್ಟದಲ್ಲಿ ಬದಲಾವಣೆ ಪ್ರಾರಂಭವಾಗಿರುತ್ತದೆ ಎಂದು ವಿಶ್ವದಾದ್ಯಂತ ಸಂಶೋಧನೆ ಬಹಿರಂಗಪಡಿಸಿದೆ" ಎನ್ನುತ್ತಾರೆ ಈ ಅಧ್ಯಯನವನ್ನು ಮುನ್ನಡೆಸಿದ ಪ್ರೊಫೆಸರ್ ವಿಜಯಲಕ್ಷ್ಮಿ ರವೀಂದ್ರನಾಥ್.

'ದಿ ಜರ್ನಲ್ ಆಫ್ ನ್ಯೂರೋಸೈನ್ಸ್'ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ, ಸಂಶೋಧಕರು ಮೊದಲ ಬಾರಿಗೆ, ಒಂದು ಬಗೆಯ ಕೋಶಕವಚೀಯ ಪ್ರೊಟೀನ್ನ ನಷ್ಟವು, ಆಲ್ಝೈಮರ್ನ ಕಾಯಿಲೆಯಲ್ಲಿ ಕಂಡುಬರುವ ಅರಿವಿನ ಅಸಮರ್ಪಕತೆಗೆ ಕಾರಣ ಎಂದು ತೋರಿಸಿದ್ದಾರೆ. "ಆಲ್ಝೈಮರ್ ರೋಗದ ಪ್ರಗತಿಯ ಅವಧಿಯಲ್ಲಿ, ಅಣುಗಳ ಬದಲಾವಣೆಗಳು ಎಷ್ಟು ಶೀಘ್ರದಲ್ಲಿ ಸಂಭವಿಸುತ್ತವೆ ಎಂದು ನಾವು ಕಂಡುಕೊಳ್ಳಲು ಪ್ರಯತ್ನಿಸಿದ್ದೇವೆ. ಈ ಬದಲಾವಣೆಗಳ ಬಗೆಗಿನ ಜ್ಞಾನವನ್ನು ಮೊದಲ ಹಂತಗಳಲ್ಲಿ ಬೇಕಾಗುವ ರೋಗನಿರ್ಣಯ ಪರೀಕ್ಷೆಗಳನ್ನು ಅಭಿವೃದ್ಧಿಪಡಿಸಲು ಬಳಸಲಾಗುವುದು" ಎನ್ನುತ್ತಾರೆ ಡಾ. ವಿಜಯಲಕ್ಷ್ಮಿ

ಮೆದುಳನ್ನೂ ಸೇರಿದಂತೆ, ನಮ್ಮ ನರಮಂಡಲವು 'ನ್ಯೂರಾನ್' ಅಥವಾ 'ನರಕೋಶಿಕೆ' ಎಂಬ ೧೦೦ ಶತಕೋಟಿ ನರಕೋಶಗಳಿಂದ ಮಾಡಲ್ಪಟ್ಟಿದೆ; ಈ ಪ್ರತಿಯೊಂದು ನರಕೋಶವೂ ಜೀವಕೋಶೀಯ ದೇಹವನ್ನು, 'ಅಕ್ಸಾನ್' ಎಂಬ ಉದ್ದನೆಯ ಬಾಲದಂಥ ರಚನೆಯನ್ನು ಮತ್ತು 'ಡೆಂಡ್ರೈಟ್' ಎಂಬ ರೆಂಬೆಕೊಂಬೆಗಳಂತೆ ಹರಡಿಕೊಂಡಿರುವ ರಚನೆಗಳನ್ನು ಹೊಂದಿರುತ್ತದೆ. ಈ ಡೆಂಡ್ರೈಟ್ಗಳು ಅಂದರೆ ನರಕವಲುಗಳು, ನೆರೆಹೊರೆಯ ನರಕೋಶಿಕೆಗಳ ಆಕ್ಸಾನ್ಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತವೆ. ಈ ನರಕವಲುಗಳಿಂದ ಹೊರಬಂದಿರುವ ಸಣ್ಣ ಮುಂಚಾಚುವಿಕೆಗಳೇ, ಮಾಹಿತಿ ಪಡೆಯುವ ಕೇಂದ್ರಗಳು. ಅವು ಪ್ರಾಥಮಿಕವಾಗಿ 'ಆಕ್ಟಿನ್' ಎಂಬ ಕೋಶಕವಚೀಯ ಪ್ರೊಟೀನ್ನ ಮೂಲಕ ಕಾರ್ಯನಿರ್ವಹಿಸುತ್ತವೆ.

ನರಕೋಶಿಕೆಗಳಲ್ಲಿ, ಆಕ್ಟಿನ್ ಎಂಬ ಈ ಬಹುಮುಖ್ಯ ಪ್ರೋಟೀನ್ ಗ್ಲೋಬುಲರ್ ಆಕ್ಟಿನ್ (ಜಿ-ಆಕ್ಟಿನ್) ಮತ್ತು ಫಿಲಮೆಂಟಸ್ ಆಕ್ಟಿನ್ (ಎಫ್-ಆಕ್ಟಿನ್) ಎಂಬ ಎರಡು ಸ್ಥಿತಿಗಳಲ್ಲಿ ಅಸ್ತಿತ್ವದಲ್ಲಿದೆ. ತಂತು ಆಕಾರದ ಎಫ್-ಆಕ್ಟಿನ್ ಪ್ರೋಟೀನ್ನ ಕೆಲಸ, ನರಕವಲುಗಳ ಮುಂಚಾಚುವಿಕೆಯ ಸ್ವರೂಪವನ್ನು ಮತ್ತು ಸ್ಮರಣೆಯನ್ನು ಕಾಪಾಡಿಕೊಳ್ಳುದು. ಅನೇಕ ಜಿ-ಆಕ್ಟಿನ್ ಪ್ರೂಟೀನ್ ಅಣುಗಳು ಸೇರಿ ಎಫ್-ಆಕ್ಟಿನ್ನನ್ನು ರೂಪಿಸುತ್ತವೆ. ಹೆಚ್ಚು ಎಫ್-ಆಕ್ಟಿನ್ ಅಣುಗಳಿದ್ದರೆ ಮಿದುಳಿನ ಚಟುವಟಿಕೆಯು ಉತ್ತಮವಾಗಿರುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಆದ್ದರಿಂದ, ನರಕೋಶಗಳಲ್ಲಿ ಈ ಎರಡೂ ಪ್ರೋಟೀನ್ ಅಣುಗಳ ಆರೋಗ್ಯಕರ ಸಂಖ್ಯೆಯನ್ನು ಕಾಪಾಡಿಕೊಳ್ಳುವುದು ಡೆಂಡ್ರೈಟ್ಗಳ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಅಧ್ಯಯನದ ಮೂಲಕ, ಎಫ್-ಆಕ್ಟಿನ್ ಪ್ರೋಟೀನ್ನ ನಷ್ಟವು, ಆಲ್ಝೈಮರ್ ಖಾಯಿಲೆಗೆ ಕಾರಣವಾಗಬಹುದೆಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಸಂಶೋಧಕರು, ಇಲಿಗಳ ಮೆದುಳಿನ ಜೀವಕೋಶಗಳಲ್ಲಿ ಮತ್ತು ಆಲ್ಝೈಮರ್ನಿಂದ ಬಳಲುತ್ತಿರುವ ಮನುಷ್ಯರ ಮೆದುಳಿನಲ್ಲಿ ಎಫ್-ಅಕ್ಟಿನ್ ಮತ್ತು ಜಿ-ಆಕ್ಟಿನ್ ಮಟ್ಟವನ್ನು ಅಧ್ಯಯನ ಮಾಡಿದರು. ಅವರು ಎಫ್-ಅಕ್ಟಿನ್ ಅಣುಗಳ ರಚನೆ ಮತ್ತು ಸಂಯೋಜನೆಯಲ್ಲಿನ ಬದಲಾವಣೆಯನ್ನು ತನಿಖೆ ಮಾಡಲು, ಜೀವರಾಸಾಯನಿಕ ಮತ್ತು ನಡವಳಿಕೆಯ ಪ್ರಯೋಗಗಳನ್ನು ನಡೆಸಿದರು ಮತ್ತು ಇದರ ಪರಿಣಾಮವಾಗಿ ಆಗುವ ಬದಲಾವಣೆಗಳು ನೇರವಾಗಿ ಸ್ಮರಣಶಕ್ತಿಯ ಮೇಲೆ ಪರಿಣಾಮ ಬೀರಿದೆಯೇ ಎಂದು ಕೂಲಂಕುಷವಾಗಿ ಗಮನಿಸಿದರು. ಒಂದು ವಿಶೇಷ ಬಗೆಯ ಸೂಕ್ಷ್ಮದರ್ಶಕವು ನರಕೋಶಗಳಲ್ಲಿನ ಎಫ್-ಆಕ್ಟಿನ್ನ ತೀವ್ರತರವಾದ ವಿಘಟನೆಯನ್ನು ವೀಕ್ಷಿಸಲು ವಿಜ್ಞಾನಿಗಳಿಗೆ ಸಹಾಯ ಮಾಡಿತು.

ಇಲಿಗಳ ಮೆದುಳಿನ ಜೀವಕೋಶಗಳಲ್ಲಿ, ಎಫ್-ಆಕ್ಟಿನ್ ವಿಭಜನೆಯಾದಾಗ, ನರಕವಲುಗಳ ಮುಂಚಾಚುವಿಕೆಯ ವಾಸ್ತುಶಿಲ್ಪವೇ ಬದಲಾಯಿತು ಎಂದು ಫಲಿತಾಂಶಗಳು ತೋರಿಸಿಕೊಟ್ಟವು. ಅಲ್ಝೈಮರ್ನ ಲಕ್ಷಣಗಳು ಸಾಮಾನ್ಯವಾಗಿ ಏಳು ಅಥವಾ ಒಂಬತ್ತು ತಿಂಗಳ ನಂತರ ಕಾಣಿಸಿಕೊಳ್ಳುತ್ತವೆ; ಆದರೆ ಇಲ್ಲಿ ಒಂದು ತಿಂಗಳಿನಲ್ಲೇ ಬದಲಾವಣೆ ಕಂಡುಬಂತು. ಎಫ್-ಆಕ್ಟಿನ್ನ ವಿಭಜನೆಯನ್ನು ನಿಲ್ಲಿಸಲು ಸಂಶೋಧಕರು ಸ್ಥಿರವಾದ ರಾಸಾಯನಿಕವನ್ನು ಬಳಸಿದಾಗ, ಧನಾತ್ಮಕ ಫಲಿತಾಂಶವೂ ಕಂಡುಬಂತು. ಹಾಗೆಯೇ, ಎಫ್-ಆಕ್ಟಿನ್ನ ವಿಭಜನೆಯನ್ನು ಹೆಚ್ಚಿಸಲು ರಾಸಾಯನಿಕವನ್ನು ಬಳಸಿದಾಗ, ಇಲಿಗಳ ವರ್ತನೆಯಲ್ಲಿ ಆಲ್ಝೈಮರ್ನ ಗುಣಲಕ್ಷಣಗಳು ಕಂಡುಬಂತು ಎಂದು ಸಂಶೋಧಕರು ಗಮನಿಸಿದ್ದಾರೆ.

ಸಾಮಾನ್ಯ ಮನುಷ್ಯರ ಮೆದುಳಿನಲ್ಲಿನ ಎಫ್-ಆಕ್ಟಿನ್ ಮಟ್ಟಕ್ಕೆ ಹೋಲಿಸಿದರೆ ಆಲ್ಝೈಮರ್ನ ರೋಗಿಗಳಲ್ಲಿ ಎಫ್-ಆಕ್ಟಿನ್ ಮಟ್ಟ ಕಡಿಮೆ ಎಂದು ಸಂಶೋಧಕರು ಗಮನಿಸಿದ್ದಾರೆ. ಈ ರೋಗದ ಪ್ರಕ್ರಿಯೆಯಲ್ಲಿ ಬಹಳ ಮುಂಚಿನ ಹಂತದಲ್ಲೇ ಎಫ್-ಆಕ್ಟಿನ್ಗೆ ಯಾವುದೇ ರೀತಿಯ ಹಾನಿ ಉಂಟಾದರೆ ಕಂಡುಕೊಳ್ಳಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.  "ಆಲ್ಝೈಮರ್ನ ಖಾಯಿಲೆಯಲ್ಲಿ, ಮೆದುಳಿನಲ್ಲಿ ಉಂಟಾಗುತ್ತಿರುವ ಅಸಹಜತೆಯ ಆರಂಭಿಕ ಸೂಚಕವಾಗಿ ಎಫ್-ಆಕ್ಟಿನ್ನ ವಿಭಜನೆಯನ್ನು ಮಾನದಂಡವಾಗಿ ಇರಿಸಿಕೊಳ್ಳಬಹುದು ಎಂದು ನಮ್ಮ ಅಧ್ಯಯನವು ತೋರಿಸಿಕೊಟ್ಟಿದೆ. ಹಾಗಾಗಿ, ಇದರ ಮೂಲಕ ಆಲ್ಝೈಮರ್ನ ಖಾಯಿಲೆಯನ್ನು ಮೊದಲ ಹಂತದಲ್ಲೇ ಗುರುತಿಸಬಹುದಾಗಿದೆ" ಎನ್ನುತ್ತಾರೆ ಡಾ. ವಿಜಯಲಕ್ಷ್ಮಿ.

ಹೀಗೆ ಮೊದಲ ಹಂತದಲ್ಲೇ ಗುರುತಿಸಲ್ಪಟ್ಟರೆ ಈ ಖಾಯಿಲೆಯ ಉಪದ್ರವವನ್ನುಕಡಿಮೆ ಮಾಡಬಹುದು. ಎಲ್ಲರಲ್ಲೂ ವಯಸ್ಸಾದಂತೆ ಮರೆವಿನ ಸಮಸ್ಯೆ ತಲೆದೋರಬಹುದು ಆದರೂ ನಮ್ಮ ಪ್ರೀತಿಪಾತ್ರರು ಕಡಿಮೆ ಪ್ರಾಯದಲ್ಲೇ ಸ್ಮರಣೆಯ ಸಮಸ್ಯೆ ಎದುರಿಸಿ ಹೈರಾಣಾಗುವುದನ್ನುಸಹಿಸಲು ಸಾಧ್ಯವಿಲ್ಲವಲ್ಲ? ಹಾಗಾಗಿ ಈ ಸಂಶೋಧನೆಯು ಖಂಡಿತ ಭರವಸೆದಾಯಕ.

Kannada

Recent Stories

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...