ಬೆಂಗಳೂರು
Photo : Shreejata Gupta

ಭಾರತದ ಹೆಚ್ಚಿನ ಪ್ರವಾಸಿ ತಾಣಗಳಲ್ಲೆಲ್ಲಾ ಸಾಮಾನ್ಯವಾಗಿ ಕಂಡುಬರುವ ಪ್ರಾಣಿಗಳೆಂದರೆ, ಅವು ಕೋತಿಗಳೇ! ಸಾಮಾನ್ಯವಾಗಿ ಗುಂಪುಗಳಲ್ಲಿ ಕಂಡುಬರುವ ಈ ಸಸ್ತನಿಗಳು, ತಮ್ಮದೇ ಧ್ಯಾಸದಲ್ಲಿರುವ ಪ್ರವಾಸಿಗರಿಂದ ಆಹಾರವನ್ನು ಲಪಟಾಯಿಸುತ್ತವೆ; ಯಾರಾದರೂ ಅಪ್ಪಿತಪ್ಪಿ ಕಾರುಗಳ ಕಿಟಕಿಗಳನ್ನು ತೆರೆದಿಟ್ಟಿದ್ದರೆ ಅಥವಾ ಆಹಾರದ ಪೊಟ್ಟಣವನ್ನು ಕೈಯಲ್ಲಿ ಹಿಡಿದಿದ್ದರೆ, ಅವರಿಗೆ ಅರಿವಾಗದಂತೆ ಕ್ಷಣಮಾತ್ರದಲ್ಲಿ ಅದನ್ನು ಅಪಹರಿಸುವುದರಲ್ಲಿ ಕೋತಿಗಳು ನಿಸ್ಸೀಮರೇ ಸೈ. ಕೆಲವೊಮ್ಮೆ, ಈ ಆಕ್ರಮಣಕಾರಿ ವ್ಯವಹಾರದಲ್ಲಿ, ಪ್ರವಾಸಿಗರಿಗೆ ಹಾನಿಯಾಗಬಹುದು ಕೂಡ. ಇದಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನವೊಂದರಲ್ಲಿ, ಬಾನೆಟ್ ಮಕಾಕ್ (ಮಕಾಕಾ ರೇಡಿಯೇಟಾ) ಎಂಬ ದಕ್ಷಿಣ ಭಾರತದ ಸ್ಥಳೀಯ ಜಾತಿಯ ಕೋತಿಯಲ್ಲಿ, ಒಂದು ವಿಶಿಷ್ಟ ನಡವಳಿಕೆಯನ್ನು ಕಂಡಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಸಿದ ದೀರ್ಘಾವಧಿಯ ಅಧ್ಯಯನದಲ್ಲಿ, ತರುಣ 'ಬಾನೆಟ್ ಮಕಾಕ್'ಗಳು ಆಹಾರಕ್ಕಾಗಿ ಪ್ರವಾಸಿಗರನ್ನು ವಿನಂತಿಸಲು, ಶ್ರವಣೇಂದ್ರಿಯ ಮತ್ತು ದೃಶ್ಯ ಸಂಕೇತಗಳ ವ್ಯವಸ್ಥೆಯನ್ನು ಬಳಸುತ್ತವೆ ಎಂದು ಸಂಶೋಧಕರು ಅರಿತುಕೊಂಡಿದ್ದಾರೆ.

ನೀವು ಯಾವುದಾದರೂ ಸಾಕುಪ್ರಾಣಿಯನ್ನು ಹೊಂದಿದ್ದರೆ, ನಿಮಗಿದು ಆಶ್ಚರ್ಯಕರ ಎನಿಸುವುದಿಲ್ಲವೇನೋ; ಏಕೆಂದರೆ ಇಂತಹ ನಡವಳಿಕೆಯು ಸೆರೆಯಲ್ಲಿರುವ ಪ್ರಾಣಿಗಳಲ್ಲಿ ಅಥವಾ ಸಾಕುಪ್ರಾಣಿಗಳಲ್ಲಿ ಕಂಡುಬರುವುದು ಈಗಾಗಲೇ ವರದಿಯಾಗಿದೆ. ಆದರೆ, ಇಂತಹ ನಡವಳಿಕೆಯು ಕಾಡಿನಲ್ಲಿರುವ ಪ್ರಾಣಿಗಳಲ್ಲಿ ಇದೆ ಎಂಬುದಕ್ಕೆ ಮೊದಲ ಪುರಾವೆಗಳನ್ನು ಈ ಸಂಶೋಧನೆಯು ಒದಗಿಸುತ್ತದೆ. ಅಚ್ಚರಿಯೆಂದರೆ, ಈ ಕೋತಿಗಳು ಇಂತಹ ನಡವಳಿಕೆಯನ್ನು ಮನುಷ್ಯರಿಂದ ಕಲಿತೂ ಇಲ್ಲ ಮತ್ತು ಆಹಾರಕ್ಕಾಗಿ ಮಾನವರ ಮೇಲೆ ಇವು ಸಂಪೂರ್ಣವಾಗಿ ಅವಲಂಬಿತವಾಗಿಲ್ಲ ಕೂಡ. ಈ ವರ್ತನೆಯನ್ನು ಅವು ತನ್ನಂತಾನೆ ಕಲಿತಿವೆ ಎಂಬುದು ಇಲ್ಲಿ ಪ್ರಮುಖಾಂಶ. ನಿರ್ದಿಷ್ಟ ಫಲಿತಾಂಶವನ್ನು ಪಡೆಯಲು ನಿರ್ದಿಷ್ಟ ರೀತಿಯಲ್ಲಿ ಮಾನವರ ಜೊತೆ ಸಂವಹನ ನಡೆಸಬೇಕೆಂಬುದು ಕೋತಿಗಳ ಉದ್ದೇಶ ಎಂದು ಈ  ಅಧ್ಯಯನವು ಎತ್ತಿ ತೋರುತ್ತದೆ.

"ಉದ್ದೇಶಿತ ನಡವಳಿಕೆಯು ಮಾನವನ ಅರಿವಿನ ಸಾಮರ್ಥ್ಯವಾಗಿದ್ದು, ನಮ್ಮ ಉದ್ದೇಶಗಳು ಮತ್ತು ಅಪೇಕ್ಷೆಗಳನ್ನು ಇತರರಿಗೆ ಯಶಸ್ವಿಯಾಗಿ ಸಂವಹನ ಮಾಡುವುದು ಕೂಡ ನಮ್ಮ ಗುರಿ-ನಿರ್ದೇಶಿತ ನಡವಳಿಕೆಗಳ ಮುಖ್ಯ ಭಾಗವಾಗಿದೆ" ಎನ್ನುತ್ತಾರೆ 'ನೇಚರ್ ಸೈನ್ಟಿಫಿಕ್ ರಿಪೋರ್ಟ್ಸ್' ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಮುಖ ಲೇಖಕ ಶ್ರೀ ಅದ್ವೈತ್ ದೇಶಪಾಂಡೆ.

ಈ ಅಧ್ಯಯನದಲ್ಲಿ  ಸಂಶೋಧಕರು ಕೋತಿಗಳ ಎರಡು ವಿನೂತನ ವಿಶಿಷ್ಟ ನಡವಳಿಕೆಗಳನ್ನು ಗಮನಿಸಿದರು; ಕೋತಿಗಳು ಹೊರಡಿಸಿದ ಒಂದು ವಿಶೇಷವಾದ ಕರೆ ಮತ್ತು ಒಂದು ಕೈಯನ್ನು ಮುಂದೆ ಒಡ್ಡಿ ಮಾಡುವ ಸನ್ನೆ - ಇವೆರಡೂ ವಿನೂತನವಾಗಿ ಕಂಡುಬಂದಿದೆ. ಈ ನಡವಳಿಕೆಯು ಕೋತಿಗಳ ವಿಭಿನ್ನ ಪ್ರಭೇದಗಳಲ್ಲಿ ಪ್ರತ್ಯೇಕವಾಗಿ ಕಂಡುಬಂದಿದೆಯಾದರೂ, ಈ ಅಧ್ಯಯನದಲ್ಲಿ ಕಂಡುಬಂದಂತೆ, ಈ ಕರೆ ಹಾಗೂ ಸನ್ನೆಯ ಸಮ್ಮಿಲನ ಹೊಸತು ಮತ್ತು ವಿಶೇಷವಾದದ್ದು.

"ಕಾಡು ಮಂಗಗಳಲ್ಲಿ ಹೀಗೆ ಕೈಯೊಡ್ಡಿ ಸನ್ನೆ ಮಾಡುವುದು ಸಂಪೂರ್ಣವಾಗಿ ವಿನೂತನವಾದ ಸಂಕೇತ ಎನ್ನಬಹುದು. ಉತ್ತರ ಭಾರತದಲ್ಲಿ ಕಂಡುಬರುವ 'ರೀಸಸ್ ಮಕಾಕ್' ಕೋತಿಗಳಲ್ಲಿ ಇದನ್ನು ಹೋಲುವ ನಡವಳಿಕೆ ಕಂಡುಬಂದಿದೆಯಾದರೂ, ಈ ಹಿಂದೆ ಎಂದೂ ಕಾಡು ಮಂಗಗಳಲ್ಲಿ ಇಂತಹ ವರ್ತನೆ ಕಂಡುಬಂದಿಲ್ಲ ಮತ್ತು ನೈಸರ್ಗಿಕ ಸನ್ನಿವೇಶದಲ್ಲಿ ಬಳಸಲ್ಪಟ್ಟಿಲ್ಲ. ಈ ಅರ್ಥದಲ್ಲಿ, ಇದು ಖಂಡಿತವಾಗಿಯೂ ಹೊಸ ನಡವಳಿಕಾ ಸಂಜ್ಞೆಯಾಗಿದೆ" ಎನ್ನುತ್ತಾರೆ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರು ಮತ್ತು ಈ ಅಧ್ಯಯನದ ಸಹಲೇಖಕರಾದ ಡಾ.ಅನಿಂದ್ಯ ಸಿನ್ಹಾ.

ಮೊದಲು, ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದ ಆವರಣದಲ್ಲಿನ ಕೋತಿಗಳು ಈ ವಿಶಿಷ್ಟ ಕರೆ ಬಳಸುವುದನ್ನು ಸಂಶೋಧಕರು ಗಮನಿಸಿದ್ದರು. ಆದಾಗ್ಯೂ, ಬಂಡೀಪುರದಲ್ಲಿನ ಕೋತಿಗಳು ಹೊರಡಿಸಿದ ಕರೆಯು ಈ ಕೋತಿಗಳ ಕರೆಗಿಂತಾ ಹೆಚ್ಚು ಜೋರಾಗಿದ್ದುದು ಕಂಡುಬಂದಿದೆ. ಮಾನವರ ಗಮನವನ್ನು ತಮ್ಮತ್ತ ಸೆಳೆಯಲು ಈ ಕರೆಗಳನ್ನು ಕೋತಿಗಳು ಬಳಸುತ್ತವೆ. ತಮ್ಮ ಗುಂಪಿನಿಂದ ಬೇರ್ಪಟ್ಟಾಗ ಹೊರಡಿಸುವ ಕರೆಯನ್ನು ಸ್ವಲ್ಪವೇ ಮಾರ್ಪಡಿಸಿ ಈ ವಿಶಿಷ್ಟ ಕರೆಯನ್ನು ರೂಪಿಸಿರಬಹುದು ಎಂಬುದು ಸಂಶೋಧಕರ ಅನಿಸಿಕೆ.

ಈ ಅಧ್ಯಯನದ ಪ್ರಕಾರ, ತರುಣ ಮಂಗಗಳು ಆಹಾರವನ್ನು ಹೊಂದಿರುವ ಮಾನವರನ್ನು ಕಂಡಾಗಲೇ ಈ ವಿಶಿಷ್ಟ ಕರೆಯನ್ನು ಹೊರಡಿಸುತ್ತವೆ ಮತ್ತು ಕೈಯೊಡ್ಡುವ ಸನ್ನೆಗಳನ್ನು ಹೆಚ್ಚಾಗಿ ಮಾಡುತ್ತವೆ. ಮೊದಲು ಮಾನವರ ಗಮನವನ್ನು ತಮ್ಮೆಡೆ ಸೆಳೆಯಲು ಈ ಕರೆಯನ್ನು ಹೊರಡಿಸಿ, ನಂತರ, ಮಂಗಗಳು ಮಾನವರ ಜೊತೆ ನೋಟವನ್ನು ಬೆರೆಸಿದಾಗ ಮಾತ್ರ, ಆಹಾರವನ್ನು ಬೇಡುವಂತೆ ಕೈಯೊಡ್ಡುತ್ತವೆ ಎಂಬುದು ಅಚ್ಚರಿದಾಯಕವೇ ಸರಿ. ಆಹಾರವನ್ನು ಹೊಂದಿರುವ ಮನುಷ್ಯರು ತಮ್ಮೆಡೆಗೆ ಗಮನ ಹರಿಸಲಿ ಎಂಬ ಆಶಯದಿಂದ ಕೋತಿಗಳು ತಮ್ಮ ಸ್ಥಳಗಳನ್ನು ಬದಲಿಸುತ್ತಲೇ, ಈ ಹೊಸ ಕರೆ ಹೊರಡಿಸಿ, ಮನುಷ್ಯರೊಂದಿಗೆ ನೇರ ನೋಟದಲ್ಲಿ ಸಂವಹನ ಸಾಧಿಸಿ, ಕೈಯೊಡ್ದುತ್ತಾ ತಮ್ಮ ನಡವಳಿಕೆಯನ್ನು ಪುನರಾವರ್ತಿಸುತ್ತವೆ.

"ಇದು, ಯಾವುದೇ ಉದ್ದೇಶಪೂರ್ವಕ ಸಂವಹನದ ಸಾಕ್ಷ್ಯವನ್ನು ಒದಗಿಸುವ ಮತ್ತು ಕಾಡು ಮಂಗಗಳ ಪ್ರಭೇದಗಳಲ್ಲಿ ಇಂತಹ ಉದ್ದೇಶಪೂರ್ವಕ ಸಂವಹನದ ಸಕ್ರಿಯವಾದ ಬಳಕೆಯನ್ನು ಸಾಬೀತು ಪಡಿಸಲು ಸಾಕ್ಷ್ಯವನ್ನು ವರದಿ ಮಾಡುವ ಮೊದಲ ಅಧ್ಯಯನವಾಗಿದೆ" ಎಂದು ಈ ಅಧ್ಯಯನದ ಪ್ರಾಮುಖ್ಯತೆಯನ್ನು ವಿವರಿಸುತ್ತಾರೆ ಶ್ರೀ ದೇಶಪಾಂಡೆ. 'ಏಪ್'ಗಳಲ್ಲದ ಮಂಗಗಳಲ್ಲಿ ಕಂಡುಬಂದ ಈ ನಡವಳಿಕೆಯು, ಮನುಷ್ಯನ ಉಪಸ್ಥಿತಿಯ ಕಾರಣದಿಂದಾಗಿ ಬದಲಾದ ಪರಿಸರ ವ್ಯವಸ್ಥೆಯನ್ನು ಯಶಸ್ವಿಯಾಗಿ ಅರಿತುಕೊಂಡು, ಹೊಂದಿಕೊಳ್ಳುವ ಸಲುವಾಗಿ, ಪ್ರಾಣಿಗಳು ತಮ್ಮ ನಡವಳಿಕೆಯ ವಿಧಾನಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಮತ್ತು ವಿಕಸನಗೊಳಿಸಲು ಹೇಗೆ ತಮ್ಮ ಆಂತರಿಕ ಜ್ಞಾನಗ್ರಹಣ ಸಾಮರ್ಥ್ಯಗಳನ್ನು ಬಳಸಿಕೊಳ್ಳುತ್ತವೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.

"ನಮ್ಮ ಅಧ್ಯಯನವು ನೈಸರ್ಗಿಕ ಸನ್ನಿವೇಶದಲ್ಲಿ ಕಾಡು ಕೋತಿಗಳ ಮತ್ತು ಮನುಷ್ಯರ ನಡುವಿನ ಉದ್ದೇಶಪೂರ್ವಕ ಸಂವಹನವನ್ನು ಅನ್ವೇಷಿಸುವ ಮೊದಲ ಪ್ರಯತ್ನವಾಗಿದೆ; ಇದರಿಂದ ನಮಗೆ ಅರಿವಾಗುವುದೆಂದರೆ, ಮಾನವನ ಹೆಚ್ಚು ಸಂಕೀರ್ಣವಾದ ಉದ್ದೇಶಪೂರ್ವಕ ಅಭಿವ್ಯಕ್ತಿಶೀಲ ಭಾಷೆಯು, ನಾವೆಣಿಸಿದ್ದಕ್ಕೂ ಹಳೆಯದಿದ್ದು, ಪ್ರಾಯಶಃ ವಿಕಸನೀಯವಾಗಿ, ಮಾನವನಿಗೆ ಹತ್ತಿರದ ಸಂಬಂಧಿಯೆನಿಸುವ ಚಿಂಪಾಂಜಿಯಂತಹ ಮಂಗಗಳ ಸಂವಹನ ರೀತಿಗೂ ಬಹಳ ಮುಂಚೆಯೇ ಅಭಿವೃದ್ಧಿಗೊಂಡಿದೆ" ಎಂದು ಶ್ರೀ ದೇಶಪಾಂಡೆಯವರು ತಮ್ಮ ಸಂಶೋಧನೆಯಿಂದ ಅರಿವಾದ ಅಚ್ಚರಿಯನ್ನು ಬಿಚ್ಚಿಡುತ್ತಾರೆ.

Kannada

Recent Stories

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...