ಬೆಂಗಳೂರು
2020 ರ ರಿಸರ್ಚ್‌ ಮಾಟರ್ಸ್ ನ ಜನಪ್ರಿಯ ಕನ್ನಡ ಲೇಖನಗಳು

ಭಾರತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ತುರ್ತು: ಹಿಂದಿನ ಮತ್ತು ಪ್ರಸ್ತುತ ದಿನಗಳಿಂದ ಕಲಿಯಬೇಕಾದ ಪಾಠಗಳು

ರೋಗ ಹರಡುವುದನ್ನು ತಡೆಗಟ್ಟಲು ಜನರ ಚಲನೆಯನ್ನು ನಿರ್ಬಂಧಿಸುವುದು ಇಂದು-ನಿನ್ನೆಯದಲ್ಲ, ಶತಮಾನಗಳಷ್ಟು ಹಳೆಯ ತಂತ್ರವಾಗಿದೆ. ‘ಕ್ವಾರಂಟೈನ್’ ಎಂಬ ಪದವನ್ನು ಕ್ವಾರಂಟಾ ಜಿಯೋರ್ನಿ ಎಂಬ ಇಟಾಲಿಯನ್  ಪದಗಳಿಂದ ಪಡೆಯಲಾಗಿದೆ; ಇದರರ್ಥ ‘40 ದಿನಗಳು’. ಕುಷ್ಠರೋಗ, ಕಾಲರಾಗಳನ್ನು ತಡೆಯಲು ಸೋಂಕಿತರನ್ನು ಇತರರಿಂದ ದೂರ ಇರಿಸಲಾಗುತ್ತಿತ್ತು.ಈಗ ಜನಸಂಖ್ಯೆಯೂ ಹೆಚು, ಹಾಗಾಗಿ ಸೋಂಕುಂಟಾದರೆ ಹರಡುವ ವೇಗವೂ ಹೆಚ್ಚು ಹಾಗಾಗಿ ಇಂತಹ ಇತಿಹಾಸದ ದಿನಗಳಿಂದ ಹಾಗೂ ಕೋವಿಡ್‌ ೧೯ಅನ್ನು ವುಹಾನ್‌ ನಗರದಲ್ಲಿ ತ್ವರಿತವಾಗಿ ನಿವಾರಿಸಿಕೊಂಡಂತಹ ಇಂದಿನ ದಿನಗಳಿಂದ ಜಾಗತಿಕವಾಗಿ ಎಲ್ಲರೂ ಪಾಠ ಕಲಿತು, ಕೋವಿಡ್‌ ೧೯ ಅಥವಾ ಇತರ ಸಾಂಕ್ರಾಮಿಕದಿಂದ ಆದ ಸಮಸ್ಯೆಗಳು ಮತ್ತೆ ತಲೆದೋರದಂತೆ ಎಚ್ಚರವಹಿಸಬಹುದಾಗಿದೆ.

ಕೊರೋನ ಮತ್ತು ಬಾವಲಿಯ ನಂಟು: ಬಾವಲಿಗಳನ್ನು ಹೊರಗಟ್ಟಬೇಕೇ?

ಕೊರೊನ ಮಹಾಮಾರಿ  ಪ್ರಪಂಚದಾದ್ಯಂತ ಹರಡಿದ್ದು ಜನರಿಗೆ ತೊಂದರೆ ಉಂಟಾಗಿದೆ. ಬಾವಲಿಗಳು ಈ ರೊಗ ಹರಡುತ್ತವೆ ಎಂದು ಸುದ್ದಿ ಅಗಿತ್ತು. ಭಯದಿಂದ ಜನ ಬಾವಲಿಗಳನ್ನು ಹೊರಗಟ್ಟಲು ಪ್ರಾರಂಭಿಸಿದರು. ಆದರೆ ನಿಜಕ್ಕು ಈ ಕಾಯಿಲೆ ಬಾವಲಿಗಳಿಂದ ಮನುಷ್ಯರಿಗೆ ನೆಗೆದಿದೆಯೇ? ಬಾವಲಿ ಇಲ್ಲದ ಪ್ರಪಂಚ ನಮಗೆ ಸುಕ್ಥವೇ? ಹೆಚ್ಚು ತಿಳಿಯಲು ಈ ಪ್ರಬಂಧ ಒದಿ

ಅರಬ್ಬೀ ಸಮುದ್ರದಲ್ಲಿ ಜೈವಿಕದೀಪ್ತಿಯಿಂದ ಹೊಳೆಯುವ ಪಾಚಿಗೂ, ದೂರದ ಹಿಮಾಲಯದಲ್ಲಿ ಕರಗುವ ಹಿಮಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ?

ಸಮುದ್ರದ ಮೇಲೆ ಹೊಳೆಯುವ ಸುಂದರವಾದ ಸಾಗರ ಅಲೆಗಳು, ಅವುಗಳ ಮೇಲೆ ಚಿತ್ರಿಸಿದಂತೆ ನೀಲಿ ಬಣ್ಣದ ಚಿತ್ತಾರ ನಮ್ಮ ಭಾರತೀಯ ಕಡಲತೀರಗಳಲ್ಲಿ ಇತ್ತೀಚೆಗೆ ಹೆಚ್ಚು ಕಂಡುಬರುತ್ತಿದೆ. ಇದು ನೋಕ್ಟಿಲುಕಾ (ಡೈನೋಫ್ಲಾಜೆಲೆಟ್ಸ್) ಕುಲಕ್ಕೆ ಸೇರಿದ ತೇಲುವ ಪಾಚಿಗಳ ಪರಿಣಾಮವಾಗಿದೆ. ಇವುಗಳ ಹರಡುವಿಕೆಯು ಸಮುದ್ರದ ಮೇಲೆ ಹವಾಮಾನ ಬದಲಾವಣೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಬಿಂಬಿಸುತ್ತದೆ. ಹಿಮಾಲಯ-ಟಿಬೆಟ್ ಪ್ರಸ್ಥಭೂಮಿಯಲ್ಲಿ ಕಾಣೆಯಾಗುತ್ತಿರುವ ಹಿಮದ ಹೊದಿಕೆಯಿಂದಾಗಿ, ಆ ಪರ್ವತಗಳಿಂದ ಹೊರಡುವ ಗಾಳಿಯ ತೇವಾಂಶ ಮತ್ತು ತಾಪಮಾನ ಹೆಚ್ಚಿದೆ ಎಂದು ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧನೆ ತಿಳಿಸುತ್ತದೆ. ಅರಬ್ಬೀ ಸಮುದ್ರದಲ್ಲಿ ಈ ಪಾಚಿಯ ಹರಡುವಿಕೆಯಿಂದಾಗಿ ಮೀನುಗಾರಿಕೆ ಮತ್ತು ಅದರ ಮರುಕಟ್ಟೆ ಮೌಲ್ಯಕ್ಕೆ ಆಗಿರುವ ನಷ್ಟ, ಇತರೆ ಆಲ್ಗೆಗಳ ಮೇಲೆ ಪರಿಣಾಮ, ಇನ್ನೂ ಹೆಚ್ಚು ತಿಳಿಯಲು ಈ ಲೇಖನವನ್ನು ಸೂಚಿಸಿ.

ಪರಾಗಸ್ಪರ್ಶಕ ಕೀಟಗಳ ಮೇಲೆ ಗಾಳಿಯಲ್ಲಿರುವ ವಿಷಕಾರಿ ಮಾಲಿನ್ಯಕಾರಕಗಳ ಪರಿಣಾಮ

ವಾಯುಮಾಲಿನ್ಯವು ಯಾರ ಮೇಲೆ ಪರಿಣಾಮ ಬೀರಿಲ್ಲ ಹೇಳಿ? ಇದೀಗ ಬೆಂಗಳೂರಿನಲ್ಲಿ ಜೇನುನೊಣಗಳ ಉಳಿವು, ಆರೋಗ್ಯ ಮತ್ತು ವಂಶವಾಹಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೊಸ ಸಂಶೋಧನೆಗಳು ತೋರಿಸುತ್ತಿವೆ.ಹಲವಾರು ವರ್ಷಗಳಿಂದ, ಕೀಟಗಳ ಸಾಮೂಹಿಕ ಸಾವಿಗೆ ಕೀಟನಾಶಕಗಳಲ್ಲಿನ ರಾಸಾಯನಿಕಗಳೇ ಕಾರಣ ಎಂದು ಭಾವಿಸಲಾಗಿತ್ತು; ಆದರೆ ಈ ಹೊಸ ಅಧ್ಯಯನವು, ಗಾಳಿಯಲ್ಲಿನ ವಿಷಕಾರಿ ಮಾಲಿನ್ಯಕಾರಕಗಳು ಈ ಕೀಟಗಳ ಸಾಮೂಹಿಕ ನಾಶಕ್ಕೆ ಕೀಟನಾಶಕಗಳಿಗೆ ಸಮಾನವಾಗಿ ಕಾರಣವೆಂದು ಕಂಡುಹಿಡಿದಿದೆ. ಜೈಂಟ್ ಏಷ್ಯನ್ ಜೇನುಹುಳುಗಳು (ಹೆಜ್ಜೇನಿನ ಒಂದು ಪ್ರಭೇದ) ಭಾರತೀಯ ನಗರಗಳ ಸಾಮಾನ್ಯ ನಿವಾಸಿಗಳು ಮಾತ್ರವಲ್ಲ, ಭಾರತದ ಆಹಾರ ಸುರಕ್ಷತೆ ಮತ್ತು ಪರಿಸರ ವ್ಯವಸ್ಥೆಗಳಿಗೆ ಪ್ರಮುಖ ಕೊಡುಗೆ ನೀಡುವ ಸದಸ್ಯರೂ ಆಗಿವೆ; ವಾಯು ಮಾಲಿನ್ಯಕಾರಕ ಕಣಗಳು ನಮ್ಮ ಆರೋಗ್ಯಗಳಿಗೆ ಮಾಡಿದ್ದಕ್ಕಿಂತಲೂ  ಹೆಚ್ಚು ಹಾನಿ ಜೇನುನೊಣಗಳಲ್ಲಿ ಮಾಡುತ್ತವೆ  ಮತ್ತು ಅವುಗಳಲ್ಲಿ 80% ನಷ್ಟು ಹುಳುಗಳನ್ನು ಕೊಲ್ಲುತ್ತವೆ ಎಂದು ಕಂಡುಬಂದಿದೆ.

ಒಂದೇ ಪ್ರಭೇದದ ಎರಡು ಕಪ್ಪೆಗಳ ನಡುವಿನ ಅಂತರ ಒಂದು ಸಾವಿರ ಕಿಲೋಮೀಟರು ದೂರವಾದಾಗ…

ಕತ್ತಲಿನ ಮಳೆತೊಯ್ದ ರಾತ್ರಿಯಲ್ಲಿ ಕಪ್ಪೆಗಳನ್ನು ಹುಡುಕುವುದೇ ಒಂದು ಮರೆಯಲಾಗದ ಅನುಭವವಂತೆ! ಹೀಗೆ ಪಶ್ಚಿಮ ಘಟ್ಟಗಳಲ್ಲಿ ಕಪ್ಪೆಗಳನ್ನು ಹುಡುಕುವ ಅಮಿತ್ ಹೆಗ್ಗಡೆಯವರಿಗೆ  ಸಿಕ್ಕಿದ ಒಂದು ಕಪ್ಪೆ  ಪೂರ್ವ ಘಟ್ಟಗಳಲ್ಲಿ ಕಂಡುಬರುವ ‘ಕ್ರಿಕೆಟ್’ ಕಪ್ಪೆಗಳಂತೆಯೇ ಕಂಡುಬಂದಿತು. ಅವುಗಳ ಡಿಎನ್ಎ ಅನುಕ್ರಮಗಳನ್ನು ಬಳಸಿಕೊಂಡು ಒಂದು ‘ಫೈಲೋಜೆನೆಟಿಕ್  ಟ್ರೀ’ (ವಂಶವೃಕ್ಷ)  ಕಟ್ಟಿ ಹೋಲಿಸಿ ನೋಡಿದಾಗ, ಎರಡೂ ಕಪ್ಪೆಗಳು ಒಂದೇ ಪ್ರಭೇದವೆಂದು ತೀರ್ಮಾನಿಸಲಾಯಿತು. ಹೀಗೆ, ಸಾವಿರಾರು ಕಿಲೋಮೀಟರ್ ಅಂತರವಿರುವ ಎರಡು ವಿಭಿನ್ನ ಪರ್ವತ ಶ್ರೇಣಿಗಳಲ್ಲಿ ಈ ಎರಡು ಕಪ್ಪೆಯ ಮಾದರಿಗಳು ಕಂಡುಬಂದಿರುವುದು, ಇವುಗಳಲ್ಲಿ ಎಷ್ಟರ ಮಟ್ಟಿಗೆ ಹರಡುವ ಸಾಮರ್ಥ್ಯವಿದೆಯೆಂದು ಸಂಶೋಧಕರು ಪುನರ್ಪರಿಶೀಲಿಸುವಂತೆ ಮಾಡಿದೆ. ಆದರೆ ಗಾತ್ರದಲ್ಲಿ ಈ ಎರಡೂ ಮಾದರಿಗಳು ವಿಭಿನ್ನವಾಗಿವೆ, ಏಕೆ? ಇವುಗಳ ಆವಾಸಸ್ಥಾನ ಮತ್ತು ವಿಭಿನ್ನ ಎತ್ತರಗಳೂ ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ಸಂಶೋಧಕರು. ಇದರ ಬಗ್ಗೆ ಹೆಚ್ಚಾಗಿ ತಿಳಿಯಲು ಈ ಲೇಖನವನ್ನು ಓದಿ. 

Kannada

Recent Stories

ಲೇಖಕರು
Research Matters
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
Research Matters
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Research Matters
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
Research Matters
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Research Matters
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
Research Matters
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
Research Matters
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
Research Matters
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
Research Matters
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
Research Matters
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...